Home ಕರಾವಳಿ Archive by category ಸುಳ್ಯ (Page 2)

ಕಡಬ: ಪಟ್ಟಣ ಪಂಚಾಯತ್‌ನ 13 ವಾರ್ಡುಗಳಿಗೆ ಚುನಾವಣೆ :ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ : ಮಸ್ಟರಿಂಗ್ ಕಾರ್ಯ

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡುಗಳಿಗೆ ನಾಳೆ (ಆ.17) ಚುನಾವಣೆ ನಡೆಯಲಿದ್ದು, ಇದರ ಅಂಗವಾಗಿ ಆ.16ರಂದು ತಾಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು ಮಸ್ಟರಿಂಗ್ ಕಾರ್ಯ ನಡೆಯಿತು. ಪ್ರತಿ ಮತಗಟ್ಟೆಯಲ್ಲಿ ಪಿ.ಆರ್.ಒ. ಜೊತೆಗೆ ಮೂವರು ಸಿಬ್ಬಂದಿಗಳು ಹಾಗೂ ಓರ್ವ ಡಿ-ಗ್ರೂಪ್ ನೌಕರ ನಿಯೋಜನೆಯಾಗಿದ್ದು, ಮತಗಟ್ಟೆ ಸಿಬ್ಬಂದಿಗಳು ತಾಲೂಕು

ನಿಂತಿಕಲ್ಲು ಮಾಸಾಶನ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿಂತಿಕಲ್ಲು ವಲಯದ ಕುಕ್ಕಯ್ಯಕೇಡಿ ಎಂಬಲ್ಲಿ ವಾಸವಾಗಿರುವ ತೀರ ಬಡತನದಲ್ಲಿರುವ ಸದಸ್ಯರಾದ ಬಾಬು ರೈ ಮತ್ತು ದೈಯಕ್ಕು ದಂಪತಿಗಳಿಗೆ ಶ್ರೀ ಕ್ಷೇತ್ರದಿಂದ ತಿಂಗಳಿಗೆ 2000/- ಮಾಸಾಶನ ಮೊತ್ತ ಮಂಜೂರಾಗಿದ್ದು, ಇವರಿಗೆ ಮಂಜೂರಾತಿ ಪತ್ರವನ್ನು ಊರಿನ ಗಣ್ಯರಾದ ಶ್ರೀಯುತ ಸುಧೀರ್‌ ಕುಮಾರ್‌ ಶೆಟ್ಟಿ ಕುಕ್ಕಯ್ಯಕೇಡಿ ಇವರು ವಿತರಿಸಿದರು.ಈ

ಕೆವಿಜಿ ಪಾಲಿಟೆಕ್ನಿಕ್ : ಎನ್ಎಸ್ಎಸ್ ಚಟುವಟಿಕೆಗಳಿಗೆ ಚಾಲನೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ 2025 -26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ಕೆವಿಜಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಅಧ್ಯಕ್ಷತೆ ವಹಿಸಿ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಲೆಕ್ಕ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ ಉಪಸ್ಥಿತರಿದ್ದು

ಬೆಳ್ಳಾರೆ :ಗ್ರಾ.ಪಂ‌.ವತಿಯಿಂದ ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೆಳ್ಳಾರೆ ಗ್ರಾಮದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಾಳೆ(ಆ.15) ಪೂ. 08.30ಕ್ಕೆ ನಡೆಯಲಿದೆ. ಗ್ರಾಮಸ್ಥರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ಳಾರೆ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ. 1837ರಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟಗಾರರು ಬ್ರಿಟೀಷರ ಖಜಾನೆಯಾಗಿದ್ದ

ಸುಳ್ಯ: ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ. ಯವರು ಜು.31ರಂದು ತಮ್ಮ 28 ವರ್ಷಗಳ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸುಳ್ಯ ನಗರ ಮಹಿಳಾ ಗೌಡ ಘಟಕದ ಸದಸ್ಯರು ಆ.13 ರಂದು ಅವರ ಮನೆಗೆ ತೆರಳಿ ಶಾಲು, ಪೇಟ, ಫಲ ಪುಷ್ಪ ನೀಡಿ ಗೌರವ ಸಲ್ಲಿಸಿದರು. ಶಿಕ್ಷಕಿ ಪ್ರೇಮಾವತಿ ಟೀಚರ್‌ರವರ ಕುರಿತು ತಾ.ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿಎಸ್ ಗಂಗಾಧರ್, ನಿವೃತ್ತ ವಿಜಯಬ್ಯಾಂಕ್ ಉದ್ಯೋಗಿ ಜನಾರ್ಧನ ಕೊಳಂಜಿರೋಡಿ

ಸುಳ್ಯ :ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ: ವಿಶ್ವ ಅಂಗದಾನ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯದಲ್ಲಿ ದಿನಾಂಕ 13-08-2025ರಂದು ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ವಿಶ್ವ ಅಂಗಧಾನ ದಿನಾಚರಣೆ ಪ್ರಯುಕ್ತ ಮಾನವ ಶರೀರದ ಅಂಗಾಂಗ ಮಾದರಿಯ ವಸ್ತು ಪ್ರದರ್ಶನ, ಬೀದಿ ನಾಟಕ ಹಾಗೂ ಅಂಗಾಂಗ ದಾನದ ನೈಜ ಘಟನೆಯನ್ನಾದರಿಸಿದ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಶಲ್ಯ ತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಹರ್ಷವರ್ಧನ ಕೆ., ವಹಿಸಿ ಅಂಗಾಂಗದಾನಿಗಳ ಸಂಖ್ಯೆ

ಸುಳ್ಯ : ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಂಸ್ಕೃತ ಸಪ್ತಾಹ

ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ 5/08/2025 ರಿಂದ 11/08/2025 ವರೆಗೆ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು 5/08/2025ರಂದು ಕಾಲೇಜಿನ ಪ್ರಾಂಶುಪಾಲಾರಾದ ಡಾ. ಲೀಲಾಧರ್ ಡಿ ವಿ ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣ ಗೊಳಿಸುವ ಮೂಲಕ ನೆರವೇರಿಸಿದರು.ಒಂದು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಸಮೂಹ ಗಾಯನ,

ಸುಳ್ಯ:ಸ್ನೇಹದಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ದಿನಾಂಕ 12.8.2025 ನೇ ಮಂಗಳವಾರದಂದು ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮವು ಜರಗಿತು. ಪುಟಾಣಿ ಮಕ್ಕಳು ಕೃಷ್ಣನ ಬಾಲ ಲೀಲೆಗಳು ಮತ್ತು ಗೋಪಿಕೆಯರ ನ್ರುತ್ಯಗಳನ್ನು ಲವಲವಿಕೆಯಿಂದ ಮಾಡಿ ರಂಜಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಾಲೆಯ ಹಿರಿಯ ವಿದ್ಯಾರ್ಥಿನಿ ಲಾವಣ್ಯ ಆಚಾರ್,

ಸುಳ್ಯ:ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ.ಮಾರಿಯೆಟ್ ಬಿ ಎಸ್ ಭೇಟಿ: ಶಾಲಾ ಮಕ್ಕಳ ಶಿಸ್ತು ಕಂಡು ಅಚ್ಚರಿ

ಶತಮಾನದ ಸನಿಹದಲ್ಲಿರುವ ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ವಂದನೀಯ ಭಗಿನಿ ಡಾ. ಮಾರಿಯೆಟ್ ಬಿ ಎಸ್ ಭೇಟಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಹಾಗೂ ನಿಯೋಜಿತ ಮುಖ್ಯಶಿಕ್ಷಕಿ ಐರಿನ್ ವೇಗಸ್ ರವರ ನೇತೃತ್ವದಲ್ಲಿ ಮಕ್ಕಳು ಆರತಿ ಎತ್ತಿ ಸ್ವಾಗತಿಸಿದರು. ಬಳಿಕ ಶಾಲಾ ನಾಯಕ ಆಕಾಶ್ ನೇತೃತ್ವದಲ್ಲಿ ಬ್ಯಾಂಡ್ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆತರಳಾಯಿತು. ಸ್ವಾಗತ ನೃತ್ಯದೊಂದಿಗೆ ಸ್ವಾಗತ

ಸುಳ್ಯ: ಅಂಗಾಂಗ ದಾನದ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಪ್ರದರ್ಶನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಸಹಯೋಗದಲ್ಲಿ ವಿಶ್ವ ಅಂಗದಾನ ದಿನಾಚರಣೆಯ ಕುರಿತು ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ ವಿಭಾಗ ಹಾಗೂ ಎನ್. ಎಂ.ಸಿ. ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ