ಮಂಗಳೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರು ನಗರದ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಮಂಗಳೂರಿನ ತುಳು ಭವನದಲ್ಲಿ ಶಾಶ್ವತವಾಗಿ ಅಳವಡಿಸಲಾಗಿದ್ದು, ಛಾಯಾಚಿತ್ರಗಳ ಅನಾವರಣ ಕಾರ್ಯಕ್ರಮ ಡಿ.29ರ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ರುಪನ ಹಾಗೂ
ಮಂಗಳೂರು : ಕ್ರಿಸ್ಮಸ್ ಹಬ್ಬವು ಏಸುಕ್ರಿಸ್ತರ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗದೆಲ್ಲಡೆ ಪಸರಿಸುವ ಆಶಯವನ್ನು ಹೊಂದಿದೆ ಎಂದು ದ.ಕ. ಜಿಲ್ಲಾ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡೆನ್ನಿಸ್ ಡಿಸಿಲ್ವಾ ಅವರು ಹೇಳಿದರು. ಮಂಗಳೂರಿನ ಕುಲಶೇಖರದ ಐಕ್ಯಂ ವಿಶೇಷ ಮಕ್ಕಳ ತರಬೇತಿ ಕೇಂದ್ರದಲ್ಲಿ ತುಳು ಪರಿಷತ್ ವತಿಯಿಂದ ಆಯೋಜಿಸಲಾದ ಕ್ರಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮರ್ಸಿ
ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು ಕ್ರೀಡಾ ಕೂಟಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು, ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸನಾ ತರಬೇತುದಾರರಾದ ಶ್ರೀಮತಿ ಶ್ಯಾಲಿನಿ ರಾಜೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸ್ವಾಭಾವಿಕ, ಅದನ್ನು ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ
ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಹುಬ್ಬಳ್ಳಿಯ ಡಾ ಅಶೋಕ ಹುಗ್ಗಣ್ಣನವರ್ ಅವರು ಸಂಗೀತ ಲೋಕದಿಂದ ಅಗಲಿದ್ದಾರೆ. ಹೊನ್ನಾವರ ಎಸ್‍ಡಿಎಮ್ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಇವರು ಕಿರಾನ ಹಾಗೂ ಗ್ವಾಲಿಯಾರ್ ಘರಾನ ಶೈಲಿಯ ಹಾಡುಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಆಪಾರ ಶಿಷ್ಯ ವರ್ಗ ಅಭಿಮಾನಿಗಳನ್ನು ಹೊಂದಿದ್ದ ಇವರು ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ
ಡಿ. 23 ರಂದು ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಆತಿಥ್ಯದಲ್ಲಿ ಆಯೋಜಿಸಲಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ರಾಜ್ಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ವಿಧ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಂದ್ಯಾಟವು ಸುಳ್ಯದ ನೆಹರೂ ಮೆಮೋರಿಯಲ್ ಮೈದಾನದಲ್ಲಿ ನಡೆದಿದ್ದು ರಾಜ್ಯ ಮಟ್ಟದಿಂದ ಹತ್ತಾರು ತಂಡಗಳು ಭಾಗವಹಿಸಿದ್ದವು.
ಕಡಬ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ 2025–28ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಧ್ಯಕ್ಷರಾಗಿ ಬಾಲಕೃಷ್ಣ ಕೊಯಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್., ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರವೀಣ್ ರಾಜ್ ಕೊಯಿಲ ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಜಯ
ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಆರಂಭಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪೇಜಾವರ ವಿಶ್ವಪ್ರಸನ್ನರ ಮಾರ್ಗದರ್ಶನದಲ್ಲಿ ಗೋವಿಗಾಗಿ ಮೇವು ಸಂಘಟನೆಮೂಲಕ ರಾಜ್ಯದ ಮನೆಮಾತದವರು ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಪಾದರಸದಂತೆ ಸದಾ ಕಾಂಗ್ರೇಸ್ ಪಕ್ಷದ ವಿರುದ್ದ ಗುಡುಗುವ ಇವರನ್ನು ಹತ್ತಿಕ್ಕಲು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಬಾರ್ಕೂರಿನಲ್ಲಿ ಇವರ ಮಾಲಕತ್ವದ ಸಂಕಮ್ಮ
ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೈಸನ್ ತಾಕೊಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಕಾಮತ್ ಎಂ., ಕಾರ್ಯದರ್ಶಿಯಾಗಿ ಶರತ್ ದೇವಾಡಿಗ, ಕೋಶಾಧಿಕಾರಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಳುವಾಯಿ ಸೀತಾರಾಮ ಆಚಾರ್ಯ, ಪ್ರಸನ್ನ ಹೆಗ್ಡೆ, ಅಶ್ರಫ್ ವಾಲ್ಪಾಡಿ, ಪ್ರೇಮಶ್ರೀ ಕಲ್ಲಬೆಟ್ಟು, ಪುನೀತ್ ಆಯ್ಕೆಗೊಂಡಿದ್ದಾರೆ. ಮೂಡುಬಿದ್ರಿ
ಕಾಪು:ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು. ಬಸವರಾಜ ಹೊರಟ್ಟಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ
ಬಂದರು ನಗರಿ ಮಂಗಳೂರಿಗೆ ವಿದೇಶಿ ಪ್ರವಾಸಿ ಹಡಗುಗಳ (ವಿಲಾಸಿ ಹಡಗುಗಳು) 2025-26ನೆ ಸಾಲಿನ ಭೇಟಿ ಋತು ಆರಂಭಗೊಂಡಿದ್ದು, ಪ್ರಥಮ ವಿಲಾಸಿ ಹಡಗು ಎಂಎಸ್ ಸೆವೆನ್ ಸೀಸ್ ನೇವಿಗೇಟರ್ ಆಗಮಿಸಿದೆ. 450 ಪ್ರಯಾಣಿಕರು ಮತ್ತು 360 ಸಿಬ್ಬಂದಿಯನ್ನು ಹೊತ್ತ ಐಷಾರಾಮಿ ಕ್ರೂಸ್ ಹಡಗು ಬೆಳಗ್ಗೆ 6:15ಕ್ಕೆ ನವಮಂಗಳೂರು ಬಂದರಿಗೆ ಆಗಮಿಸಿತು, ಬಹಾಮಾಸ್‌ನ ಧ್ವಜವನ್ನು ಹೊತ್ತ ಎಂಎಸ್ ಸೆವೆನ್ ಸೀಸ್ ಹಡಗು ಮರ್ಮುಗಾಂವೊ ಬಂದರಿನಿಂದ ಆಗಮಿಸಿದೆ. ಮಂಗಳೂರು ಕಸ್ಟಮ್ಸ್ ಆಯುಕ್ತೆ




























