ಬಂಟ್ವಾಳ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಮೇರಮಜಲು ಗ್ರಾಮ ಪಂಚಾಯತಿ ಆಶ್ರಯದಲ್ಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ಶುಕ್ರವಾರ ಮೇರಮಜಲಿನ ಶ್ರಿ ರಾಜೇಶ್ವರೀ ಸಭಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಾರ್ಮಿಕರಿಗೆ ಕಿಟ್ ವಿತರಿಸಿ
ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾ ವತಿಯಿಂದ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು. ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು. ಶುಕ್ರವಾರದಂದು
ಮಂಗಳೂರಿನ ಪಿಲಿಕುಳದ ನಿಸರ್ಗಧಾಮಕ್ಕೆ ರಾಜ್ಯ ಅರಣ್ಯ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿಯವರು ಭೇಟಿ ನೀಡಿದರು. ಬಳಿಕ ಪಿಲಿಕುಳ ನಿಸರ್ಗಧಾಮವನ್ನು ವೀಕ್ಷಿಸಿದರು. ಇದೇ ವೇಳೆ ಗಿಡ ನೆಟ್ಟು ನೀರುಣಿಸಿ ವನಮಹೋತ್ಸವದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಅರಣ್ಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್‌ನಲ್ಲಿ ತೆರಳಿದ್ದರು. ಲಿಫ್ಟ್ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು. ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಯಾಗಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳೂರು ಬೆಂಗರೆಯ ಪಲ್ಗುಣಿ ನದಿ ದಂಡೆಯಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಪೆಟ್ಟು ನೀಡುತ್ತದೆ, ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿದ ಹಿನ್ನಲೆಯಲ್ಲಿ ತುರ್ತಾಗಿ ಹೋಗುವ ಆಂಬ್ಯುಲೆನ್ಸ್‌ಗೆ ಅಡ್ಡಿಯಾದ ಘಟನೆ ನಡೆದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಒಂದು ಕಡೆ ಕೋವಿಡ್ ಲಸಿಕೆ ನೀಡಿಕೆ ಮತ್ತೊಂದು ಕಡೆ ಉತ್ತಮ ಸೇವೆ ಸಿಗುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದು, ಆಸ್ಪತ್ರೆಗೆ ಬರುವವರು ಆಸ್ಪತ್ರೆಯ ವಠಾರದ ದಾರಿಯಲ್ಲೆ ಅಡ್ಡಾದಿಡ್ಡಿ ವಾಹನ
ಮದುವೆಯಾಗಿ ಒಂದು ವರ್ಷವಾಗುವ ಮೊದಲೇ ಹೆಂಡತಿಯನ್ನು ತೊರೆದು ನಾದಿನಿಯೊಂದಿಗೆ ಓಡಿ ಹೋದ ಘಟನೆ ಬೆಳ್ತಂಗಡಿ ತಾಲೋಕಿನ ಕನ್ಯಾನದ ಕೈಕಂಬ ಎಂಬಲ್ಲಿ ನಡೆದಿದ್ದು ಸದ್ಯ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಕನ್ಯಾನದ ಮಹಮ್ಮದ್ ಎಂಬುವವರ ಪುತ್ರಿ ಸೌಧಳನ್ನು ಒಂಭಂತು ತಿಂಗಳ ಹಿಂದೆ ಪುಸ್ತಾಫಾ ಎಂಬುವವನು ಮದುವೆಯಾಗಿದ್ದ. ನಾದಿನಿ ರೈಹಾನಾಳೊಂದಿಗೆ ಮುಸ್ತಾಫಾ ಸಲುಗೆಯಿಂದ ಇದ್ದ. ಈ ನಡುವೆ ಸೌಧಳೊಂದಿಗೆ ಜಗಳವಾಡಿ ಮಾತು ಬಿಟ್ಟಿದ್ದ
ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದು ಮಳೆ ಸುರಿಯುತ್ತಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿತ್ತು. ಹವಾಮಾನ ಇಲಾಖೆ ವರದಿ ಪ್ರಕಾರ ಈ ವಾತಾವರಣ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ಬಾರಿ ಬೇಸಿಗೆಯಿಂದಲೇ ಅಂದರೆ ಮೇ ತಿಂಗಳ ಆರಂಭದಿಂದಲೇ ಆಗಾಗ ಮಳೆ ಸುರಿಯುತ್ತಿತ್ತಾದರೂ ಮುಂಗಾರು
ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ವಿರೋಧಿಸಿ ಮಂಗಳೂರು ನಗರದ ಬೀದಿಬದಿ ವ್ಯಾಪಾರಸ್ಥರೂ ಕೂಡ ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ಟೇಟ್ ಬ್ಯಾಂಕ್ ಬಳಿ ಹಾಗೂ ಲೇಡಿಗೋಷನ್ ಬಳಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿತ್ತಿಚಿತ್ರ ಹಿಡಿದು ಪ್ರತಿಭಟಿಸಿದರು.ಬೆಲೆಯೇರಿಕೆಯ ವಿರುದ್ದ CPIM ಮಂಗಳೂರು
ಶಿರ್ವ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಾಪು ತಶೀಲ್ದಾರ್ ಪ್ರತಿಭಾ ದಾಳಿ ನಡೆಸಿದ್ದಾರೆ.ಕಳೆದ ಹಲವು ದಿನಗಳಿಂದ ಶಿರ್ವ ಬಳಿಯ ಮುಟ್ಲುಪಾಡಿ ಸೇತುವೆ ಕೆಳಗಡೆ ಕೇರಳ ಮೂಲದ ಕೋಶಿ ಎನ್ನುವಾತನ ತೋಟದ ಜಾಗದಲ್ಲಿ ಅಕ್ರಮ ಮರಳುಗಾರಿಕೆಯನ್ನು ಎಗ್ಗಿಲದೆ ನಡೆಸುತ್ತಿದ್ದರು. ಹಗಲಿನಲ್ಲೇ ರಾಜಾರೋಶವಾಗಿ ಹೊಳೆಗೆ ಡ್ರಜ್ಜಿಂಗ್ ಮಿಶಿನ್‌ಗಳನ್ನು ಹಾಕಿ ಮರಳು ತೆಗೆದು ನೂರಾರು ಲೋಡುಗಳನ್ನು ರಾಜಾರೋಶವಾಗಿ ಸಾಗಿಸುತ್ತಿದ್ದರು. ಸ್ಥಳೀಯರು ಶಿರ್ವ ಪೊಲೀಸರಿಗೆ ಹಾಗೂ ಗಣಿ


















