Home Archive by category ಕ್ರೈಮ್ (Page 26)

ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ಧ ಅತ್ಯಾಚಾರ ಆರೋಪ : ಕಡಬ ಠಾಣೆಗೆ ಮತ್ತು ನೀತಿ ತಂಡದಿಂದ ಮುಖ್ಯ ಮಂತ್ರಿಗಳಿಗೆ ದೂರು

ಕಡಬ :  ಈ ಹಿಂದೆ ನಡೆದ ಪ್ರಕರಣವೊಂದರಲ್ಲಿ ಸಂತ್ರಸ್ಥೆಯಾಗಿದ್ದ ಅಪ್ರಾಪ್ತೆ ಯುವತಿಯನ್ನು ತನ್ನಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ನೀಡಲಾಗಿದೆ, ಯುವತಿಯೇ ತಂದೆ ದೂರು ನೀಡಿದ್ದು ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ

ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆ

ಕಡಬ ಸೆಪ್ಟಂಬರ್ 22ರಂದು ಸ್ನಾನಕ್ಕೆಂದು ನದಿ ತೀರಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಗುರುವಾರದಂದು ಪತ್ತೆಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮನೆ ಸಮೀಪ ಹರಿಯುತ್ತಿರುವ ಕುಮಾರಧಾರ ನದಿಗೆ ಸ್ನಾನಕ್ಕೆಂದು ಹೋದವರು ಕಾಣೆಯಾಗಿದ್ದರು. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು

ಮಂಗಳೂರಿನ ಜೈಲ್ ರೋಡ್ ಬಳಿ ಮಹಿಳೆಯರಿಗೆ ತಲ್ವಾರ್ ನಿಂದ ಹಲ್ಲೆ

ಮಂಗಳೂರಿನ ಜೈಲ್ ರೋಡ್ ಬಳಿಯ ಇರುವ ಡಯಟ್ ಸಂಸ್ಥೆಯ ಒಳಗೆ ನುಗ್ಗಿದ ದುಷ್ಕರ್ಮಿಯೋರ್ವ ಮೂವರು ಮಹಿಳೆಯರಿಗೆ ತಲ್ವಾರ್ ನಿಂದ ಹಲ್ಲೆ ನಡೆಸಿ ಘಟನೆ ನಡೆದಿದೆ. ಹಲ್ಲೆಗೊಳಗಾದವರನ್ನು ರೀನ, ಗುಣವತಿ, ನಿರ್ಮಲ ಎಂದು ಗುರುತಿಸಲಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹಾಗೂ ಹಿರಿಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್

ಮಂಗಳೂರಿನಲ್ಲಿ ಹೆಂಡತಿ ಮತ್ತು ಮಗನಿಗೆ ಅಪ್ಪನಿಂದ ಚೂರಿ ಇರಿತ..!

ಮಂಗಳೂರು ನಗರದ ಕಂಕನಾಡಿಯ ಸೇರಾವೋ ರಸ್ತೆ ಕಂಪೌಂಡ್‌ನಲ್ಲಿ ಪತಿಯೇ ಪತ್ನಿ ಮತ್ತು ಪುತ್ರನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕಂಕನಾಡಿ ಸೇರಾವೋ ರಸ್ತೆ ಕಂಪೌಂಡ್ ನಿವಾಸಿ ರಮೇಶ್ ಬಂಗೇರಾ (54) ಎಂಬುವವರು ಪ್ರಕರಣದ ಆರೋಪಿ. ಬೇಬಿ ಕುಂದರ್ ಮತ್ತು ಅಶ್ವಿನ್ ಹಲ್ಲೆಗೊಳಗಾಗಿದ್ದಾರೆ. ಬೇಬಿ ಕುಂದರ್ ಅವರು ತನ್ನ ಗಂಡ ರಮೇಶ್ ಬಂಗೇರಾ ಮತ್ತು ಮಗ ಅಶ್ವಿನ್ ಜತೆಯಲ್ಲಿ ವಾಸವಾಗಿದ್ದರು. ಸೆ.11ರಂದು ರಾತ್ರಿ 10:30ಕ್ಕೆ ಗಂಡ ರಮೇಶ್ ಬಂಗೇರಾ

ಬಾಣಾವರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಆತ್ಮಹತ್ಯೆ: ಸಾರ್ವಜನಿಕರ ಆಕ್ರೋಶ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ವಾಹನ ತಪಾಸಣೆ ವೇಳೆ ಹೆಚ್ಚು ಶುಲ್ಕ ವಿಧಿಸಿದ ಹಿನ್ನೆಲೆಯಲ್ಲಿ ಮನನೊಂದು ವಾಹನ ಚಾಲಕ ಮಂಜುನಾಥ್ (೫೦) ತನ್ನ ವಾಹನದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಬಾಣಾವರ ಸಮೀಪದ ಸರ್ವೆ ಕೊಪ್ಪಲು ಮೂಲದವರಾಗಿದ್ದು ಆರ್.ಟಿ.ಓ ಅಧಿಕಾರಿಗಳ ತಪಾಸಣೆಯ ವೇಳೆ ಹದಿನೇಳು ಸಾವಿರ ದಂಡವಿಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕೊರೋನಾ ಹಿನ್ನೆಲೆಯಲ್ಲಿ ವಾಹನ

ಕತ್ತು ಕೊಯ್ದ ಸ್ಥಿತಿಯಲ್ಲಿ ಕೋಣ ಪತ್ತೆ

ಉಳ್ಳಾಲ: ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ನಡೆದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿ ತೋಟದ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ.ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಕೋಣದ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕಡಿದ ಸ್ಥಿತಿಯಲ್ಲಿದ್ದು,

ಅರಕಲಗೂಡು: ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ, ಮೃತದೇಹ ಅರಣ್ಯ ಪ್ರದೇಶದಲ್ಲಿ ಪತ್ತೆ

ಅರಕಲಗೂಡು:  ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮೃತದೇಹವನ್ನು ತಾಲೂಕಿನ ಮಲ್ಲಾಪುರ ಬಳಿ ಲಕ್ಕೂರು ಅರಣ್ಯ ಪ್ರದೇಶದಲ್ಲಿ ಎಸೆದಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜಗದೀಶ್ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ,ಮೃತದೇಹದ ಪಕ್ಕದಲ್ಲಿ ಆಟೋ ನಿಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಕೊಣನೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ

ಮೈಸೂರು ಅತ್ಯಾಚಾರ ಪ್ರಕರಣ 85 ಗಂಟೆಯ ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಆಗಸ್ಟ್ 24ರಂದು ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡಿನಲ್ಲಿ 5ವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ಪಡೆ.ತಾಂತ್ರಿಕ ಸಾಕ್ಷಿಗಳ ಮೂಲಕ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರು..ಇದೀಗ ಅತ್ಯಾಚಾರಿಗಳು ಸೆರೆಸಿಕ್ಕಿದ್ದಾರೆ.ಅತ್ಯಾಚಾರ ನಡೆದು 85ಗಂಟೆಗಳ ಬಳಿಕ ಸೆರೆಸಿಕ್ಕ ಆರೋಪಿಗಳು.ಸಂತ್ರಸ್ತೆಯ ಸ್ನೇಹಿತ ನೀಡಿದ ಮಾಹಿತಿಗಳ ಅನ್ವಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.ಇನ್ನಷ್ಟು ಮಾಹಿತಿ ತನಿಖೆಯ ನಂತರವೇ ತಿಳಿಯಬೇಕಿದೆ

ಕಡಬದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ : 40 ಕೆಜಿ ದನದ ಮಾಂಸ ಸಹಿತ ಓರ್ವನ ವಶಕ್ಕೆ

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು 4೦ ಕೆಜಿ ದನದ ಮಾಂಸ, ಕಟ್ಟಿ ಹಾಕಿದ್ದ 4 ಕರುಗಳು ಸೇರಿದಂತೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಪರಾರಿಯಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕಳಾರ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಕಳಾರ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಶೆಡ್ ನಲ್ಲಿ ಅಕ್ರಮವಾಗಿ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಡಬ ಎಸ್‌ಐ ರುಕ್ಮನಾಯ್ಕ್ ಹಾಗೂ

ಪುತ್ತೂರು ದೇವಳದ ವಠಾರದಲ್ಲಿ ಮೃತದೇಹ ಪತ್ತೆ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವಿಟ್ಲ ಮೂಲದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವೃದ್ದರೊಬ್ಬರು ಅಸು ನೀಗಿದ ಘಟನೆ ನಡೆದಿದೆ. ಮೃತರನ್ನು ಕೇಶವ ನಾಯ್ಕ ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಕರು ವಿಟ್ಲ ಮೂಲದವರು ಎನ್ನಲಾಗಿದೆ. ಸಂಬಂಧಿಕರು ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ಮನವಿ