ತಮಿಳಗ ವೆಟ್ರಿ ಕಳಗಂ ರಾಜಕೀಯ ಪಕ್ಷ ಸ್ಥಾಪಕ ನಟ ವಿಜಯ್ ಮಡದಿ ಸಂಗೀತಾ ಅವರು ಮದುವೆ ಮುರಿಗಡೆ ಕೋರಿ ಕೋರ್ಟು ಮೆಟ್ಟಿಲೇರಿದ್ದಾರೆ.ದಲಿತ ಕ್ರಿಶ್ಚಿಯನ್ ನಟ ವಿಜಯ್ ಅವರು ಯಶಸ್ವೀ ತಮಿಳು ನಾಯಕ ನಟನಾಗಿ ಮೆರೆದವರು. ಮೂರ್‍ನಾಲ್ಕು ತಿಂಗಳ ಹಿಂದೆ ಟಿವಿಕೆ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಇನ್ನೇನು ನಡೆಯಲಿರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ
ಮೂಡುಬಿದಿರೆ : ಕರಾವಳಿಯ ಸಮಗ್ರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಬಜೆಟ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನ ವಕ್ತಾರ ರಾಜೇಶ್ ಕಡಲಕೆರೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಬಲಪಡಿಸಲು sea plane , Heli taxi , joy ride , River Cruise ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಯೋಜನೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್ ಮೂಲಕ
ಕಾಪು ತಾಲೂಕು ಪಂಚಾಯತ್ 16 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿದ ಟಾಸ್ಕ್ ಪೋರ್ಸ್ ಸಭೆ ಇಂದು ದಿನಾಂಕ 06-03-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಹಶೀಲ್ದಾರರ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಯಾವ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಅಂತಹ ಪಂಚಾಯತ್ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ನಿರ್ಮಿಸಲು ಟಾಸ್ಕ್ ಪೋರ್ಸ್ ಯೋಜನೆಯಡಿ
ನೇಪಾಳದಲ್ಲಿ ಅರ್ಧ ವರುಷದ ಹಿಂದೆ ಜೆನ್ ಜೆಡ್ ಯುವಜನ ಚಳವಳಿ ನಡೆದು ಆಳುವವರನ್ನು ಉರುಳಿಸಿತ್ತು. ಈಗ ಮತ್ತೆ ಸಂಸತ್ತಿಗೆ ಚುನಾವಣೆ ನಡೆದು ಮತ ಎಣಿಕೆ ನಡೆದಿದೆ. ಜೆನ್ ಜೆಡ್ ಚಳವಳಿಯ ಬಾಲೆನ್ ಶಾ ಅವರ ಬೆಂಬಲದ ಆರ್‌ಎಸ್‌ಪಿ- ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಹೆಜ್ಜೆ ಹಾಕಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆರ್‌ಎಸ್‌ಪಿಯು 93 ಕ್ಷೇತ್ರಗಳಲ್ಲಿ ಗೆಲುವಿನ ಸಮೀಪ ಬಂದಿದೆ. ಕಾಠ್ಮಂಡು 1ರಲ್ಲಿ ಆರ್‌ಎಸ್‌ಪಿಯ ರಂಜು ನ್ಯೂಪನೆ ಗೆದ್ದಿದ್ದಾರೆ. ಮಾಜೀ
ಕಳೆದ ಲೋಕ ಸಭೆ ಚುನಾವಣೆಗೆ ಮೊದಲಿನ ಪ್ರಧಾನಿ ಮೋದಿಯವರ ಒಂದು ಕಾರ್ಯಕ್ರಮಕ್ಕೆ 33 ಕೋಟಿ ಹಾಗೂ ಅದಕ್ಕೆ ಜನರನ್ನು ಕರೆತರಲು 6.5 ಕೋಟಿ ರೂಪಾಯಿ ವ್ಯಯಿಸಿದ್ದು, ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ. ಲಂಚ ಮುಕ್ತ ಕರ್ನಾಟಕ ಸಂಸ್ಥೆಯ ಮಂಜುನಾಥ ಹಿರೇ ಚೌಟ ಅವರು ಮಾಹಿತಿ ಹಕ್ಕಿನಡಿ ಮಡೆದಿರುವ ಮಾಹಿತಿಯ ಪ್ರಕಾರ ಬಿಜೆಪಿಯವರು ಯಾವುದೇ ನಿಯಮಾವಳಿ ಪಾಲಿಸದೆ ಚುನಾವಣೆ ಕಾಲದಲ್ಲಿ ಹಣ ವ್ಯಯಿಸುತ್ತಾರೆ. ಚುನಾವಣೆಯ ವೆಚ್ಚದ ಬಗೆಗೆ ಕಾನೂನು ಇದ್ದರೂ ದುಂದು ವೆಚ್ಚ ಹಾಗೂ
ಅಮೆರಿಕದ ದುಸ್ಸಾಹಸದ, ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ ಎಂದು ಇರಾನ್ ಮೇಲಿನ ದಾಳಿಯನ್ನು ಸ್ಪೆಯಿನ್ ಅಧ್ಯಕ್ಷ ಮಸೌದ್ ಪೆಜಿಸ್ಕಿಯಾನ್ ಹೇಳಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಜೊತೆಗೆ ಸೇರಿ ಯುಎಸ್‌ಎ ನಡೆಸುತ್ತಿರುವ ಯುದ್ಧವು ಮಾನವ ಹಕ್ಕುಗಳ ಉಲ್ಲಂಘನೆ ಹಾಗು ಮಿಲಿಟರಿಯ ಆಕ್ರಮಣವಾಗಿದೆ ಎಂದು ಸ್ಪೆಯಿನ್ ಅಧ್ಯಕ್ಷರಾದ ಪೆಜಿಸ್ಕಿಯಾನ್ ಹೇಳಿದ್ದಾರೆ. ಪಶ್ಚಿಮದ ದೇಶಗಳಲ್ಲಿ ಇನ್ನೂ ನೈತಿಕತೆ ಹಾಗೂ ಆತ್ಮಸಾಕ್ಷಿ ಉಳಿದಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು
ಮಲ್ಲಾರು ಶ್ರೀ ಧೂಮಾವತಿ ದೈವಸ್ಥಾನದ ಅಂಗಳಕ್ಕೆ ಗ್ರಾನೈಟ್ ಅಳವಡಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಪು ಪುರಸಭಾ ಸದಸ್ಯರಾದ ಶೈಲೇಶ್ ಎನ್ ಅಮೀನ್,ಉಮೇಶ್ ಕರ್ಕೇರಾ,ವಿದ್ಯಾಲತಾ,ಪ್ರಮುಖರಾದ ಸುಧಾಮ ಶೆಟ್ಟಿ, ಸುರೇಖ ಶೈಲೇಶ್, ಸುನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ, ಉಮೇಶ್
ಮಂಗಳೂರು: ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ನೀಡಬೇಕೆಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಗುರುವಾರ ಸ್ಪೀಕರ್ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಚಿವರು, ಶಾಸಕರು ಭಾಗವಹಿಸಿ, ಕರಾವಳಿಯ ಅಭಿವೃದ್ಧಿಯನ್ನು
ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಮಾಡಿದರು. ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ
ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷರಾದ Er.ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಮುಲ್ಕಿ ಜನತೆಯ ಬಹುದಿನಗಳ ಕನಸಾದ ಮುಲ್ಕಿ ತಾಲೂಕು ಸೌಧವನ್ನು ತಕ್ಷಣ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಅರ್ಪಿಸುವಂತೆ, ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ




























