Home Archive by category ರಾಜ್ಯ (Page 5)

ಕುತ್ತಾರು ಸಮೀಪದ ದೇವಿಪುರದಲ್ಲಿ: ನಿರ್ಮಾಣಗೊಂಡ “ಭೀಮ ಸೌಧ” ಉದ್ಘಾಟನೆ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರ ಅಲ್ಲ, ಅವರ ತತ್ವ, ಆದರ್ಶಗಳನ್ನ ಯುವ ಪೀಳಿಗೆಗೂ ವರ್ಗಾಯಿಸುವ ಕಾರ್ಯ ಇಲ್ಲಿ ನಡೆಯಬೇಕು.ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ,ದ.ಕ ಜಿಲ್ಲಾ ಪಂಚಾಯತ್

ತೋಕೂರು: ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳಸಿ – ಶ್ರೀ ನಿಂಗಪ್ಪ ವಾಲಿ

ತೋಕೂರು: ಮೂಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ (ರಿ) ಓಂಕಾರೇಶ್ವರಿನಗರ 10ನೇ ತೋಕೂರು, ಹಳೆಯಂಗಡಿ ಇದರ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು, ಓಂಕಾರೇಶ್ವರಿ ಮಂದಿರ ತೋಕೂರು ಮತ್ತು ಅರಣ್ಯ ಇಲಾಖೆ ಮೂಡಬಿದ್ರಿ ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮವನ್ನು ಶ್ರೀ ಓಂಕಾರೇಶ್ವ ರೀ ಮಂದಿರದ ಅಧ್ಯಕ್ಷರಾದ ಶ್ರೀ ಸದಾಶಿವ ಟಿ ಕುಂದರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು,

ನೆಲ್ಯಾಡಿ : ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ “ಆಟಿದ ನೆಂಪುಡು ಸೋಣದ ಪೊಲಬು” ಕಾರ್ಯಕ್ರಮ ಶನಿವಾರ ದಂದು ನಡೆಯಿತು

ವಿದ್ಯಾಸಂಸ್ಥೆ ಸಂಚಾಲಕರಾದ ಫಾ. ನೋಮಿಸ್ ಕರಿಯಕೋಸ್ ದೀಪ ಬೆಳಗಿಸಿ ಉದ್ಘಾಟಿಸಿದರು ತುಳುನಾಡಿನ ವಿಶಿಷ್ಟ ಸಂಪ್ರದಾಯದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದೆ. ಹಳೆಯ ಸಂಪ್ರದಾಯಗಳು ಮತ್ತೊಮ್ಮೆ ಮೇಲುಕು ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಈ ಮೂಲಕ ಅರಿವು ಮೂಡಿಸಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ರೈ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ

ಮಂಗಳೂರು : ಅಂತರಾಷ್ಟ್ರೀಯ ವೇದಿಕೆಯಲ್ಲಿ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಕೀರ್ತಿ ತಂದ ಮಂಗಳೂರಿನ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್

ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ (ಆಗಸ್ಟ್ 13ರಿಂದ 17, ವಿಯೆಟ್ನಾಂ)ನಲ್ಲಿ ನಡೆದಿತ್ತು ಈ ಸ್ಪರ್ಧೆಗೆ ಭಾರತದಿಂದ ಪ್ರತಿನಿಧಿಸಿದ ಬಾಲಪ್ರತಿಭೆ ರುಶಭ್ ರಾವ್ ಇಂದು ಮಂಗಳೂರಿಗೆ ಬಂದಿಲಿದಿದ್ದು ಮಂಗಳೂರಿನ ವಿಮಾನ ನಿಲ್ದಾಣ ದಲ್ಲಿ ಹೂಗುಚ್ಚ ನೀಡಿ ಕುಟುಂಸ್ಥರು ಸ್ವಾಗತಕೋರಿದರು.ಮಂಗಳೂರು ಕುಲಶೇಖರ ಮೂಲದ, ಕೇವಲ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್, ಅಂತರಾಷ್ಟ್ರೀಯ ಫ್ಯಾಷನ್ ಮತ್ತು ಪ್ರತಿಭಾ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾನೆ. ಬೆಜೈಯ ಲೂರ್ಡ್ಸ್

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲಿಕತ್ವದ ಜೂಜು ಮನೆಗಳು,ಜಾರಿ ನಿರ್ದೇಶನಾಲಯದಿಂದ ಸಮಗ್ರ ದಾಳಿ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ

ಅತಿ ಹೆಚ್ಚು ಚಪ್ಪರೆ ಬದನೆ ಬೆಳೆಯುವ ದೇಶ ಮತ್ತುಅತಿ ಹೆಚ್ಚು ಟೊಮ್ಯಾಟೊ ರಫ್ತು ಮಾಡುವ ದೇಶ

ಮಧ್ಯ ಅಮೆರಿಕ ಮೂಲದ ಟೊಮ್ಯಾಟೊ ಇಲ್ಲವೇ ಚಪ್ಪರಬದನೆ ಯುರೋಪಿನಲ್ಲಿ ಹೆಚ್ಚು ಬಳಸುವರು ಹಾಗೂ ಏಶಿಯಾದಲ್ಲಿ ಹೆಚ್ಚು ಬೆಳೆಯುವರು.ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿದೆ ಚೀನಾ. ಕ್ಸಿಂಜಿಯಾಂಗ್ ಟೊಮ್ಯಾಟೊ ತೋಟಗಾರಿಕೆ ಪ್ರಾಂತ್ಯವಾಗಿದೆ ಭಾರತ ಎರಡನೆಯ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಕರ್ನಾಟಕ ಹೆಚ್ಚು ಬೆಳೆಯುವ ರಾಜ್ಯಗಳಾಗಿವೆ. ಚೀನಾವು ಪೇಸ್ಟ್, ಸಾಸ್, ಕ್ಯಾನಿಂಗ್ ರೂಪದಲ್ಲಿ ಹೆಚ್ಚು ರಫ್ತು ಮಾಡುತ್ತದೆ. ಅತಿ ಹೆಚ್ಚು ಟೊಮ್ಯಾಟೊ

ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು. ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ

ಕರಾವಳಿ ಪ್ರವಾಸೋದ್ಯಮ ಕುರಿತ ಜಿಲ್ಲಾ ಜನ ಪ್ರತಿನಿಧಿಗಳ ಸಭೆ

ಕರಾವಳಿ ಪ್ರವಾಸೋದ್ಯಮ ಕುರಿತಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಭಾಧ್ಯಕ್ಷರು, ಸಚಿವರ ಉಪಸ್ಥಿತಿಯಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉಪಮುಖ್ಯಮಂತ್ರಿ ಶ್ರೀ

ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ

ಮಧ್ಯ ಪ್ರದೇಶ:ಎಲ್ಲರಿಗೂ ಎರಡು ಲಾಡು, ನನಗೆ ಒಂದು ಮುಖ್ಯಮಂತ್ರಿಗಳಿಗೆ ಸಾಮಾನ್ಯನಿಂದ ದೂರು

ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ ಒಂದು ಲಾಡು ಕೊಡಲಾಗಿತ್ತು ಆತನು ಒಂದಿದೆ, ಎರಡು ಕೊಡಿ ಎಂದರೂ ಸಂಘಟಕರು ಕೊಟ್ಟಿಲ್ಲ. ಆತನು