ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಜಿತ್ ಪವಾರ್ ಸೇರಿದಂತೆ ಪಿಎಸ್ಒ ಜಾಧವ್, ಓರ್ವ ಸಹಾಯಕ, ಇಬ್ಬರು ಪೈಲೈಟ್ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಖಚಿತಪಡಿಸಿದೆ.
ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಹಾಗೂ ಅನುಷ್ಠಾನದ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶಕ್ಕೆ ತೆರಳಿ 2 ದಿನಗಳ ಕಾಲ ಆಂಧ್ರ ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ರಾಜ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಮ್
ಕಾರವಾರ: ಕದಂಬ ನೌಕಾನೆಲೆಯಲ್ಲಿ ‘ಐಎನ್ಎಸ್ ವಾಘಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು.ಗೋವಾದಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ನೌಕಾದಲದ ವಿಶೇಷ ಹೆಲಿಕಾಪ್ಟರ್ನಲ್ಲಿ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಬರಮಾಡಿಕೊಂಡರು.ಬಳಿಕ
ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಸೀಸನಲ್ ಫ್ಲೂ(ಶೀತಜ್ವರ) ಹೆಚ್ಚಳ ಆಗುತ್ತಿದ್ದು, ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಇದೆ. ಹೀಗಾಗಿ ಆರೋಗ್ಯ ಸೇವೆಗಳ ಆಯುಕ್ತಾಲಯವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳ ಕಾಲ ಕಾಡಲಿದ್ದು, ಕೆಲವೊಮ್ಮೆ 3 ವಾರಗಳ ವರೆಗೂ ಮುಂದುವರಿಯುತ್ತದೆ. ಹೀಗಾಗಿ ಶೀತಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ನ ಸದಸ್ಯೆಯಾದ ಕು| ಚಾರ್ವಿ ಎಂ (ಲೇಡಿಹಿಲ್ಲ್ ವಿಕ್ಟೋರಿಯ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿನಿ) ಇವರು 14 ವರ್ಷದ ಬಾಲಕಿಯರ ವಿಭಾಗದಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 5 ಪದಕಗಳನ್ನು ಮತ್ತು ಮಂಗಳಾ ಈಜು ಕ್ಲಬ್ನ ಇನ್ನೋರ್ವ ಸದಸ್ಯೆಯಾದ ಕು| ಪ್ರಾಪ್ತಿ ಜೆ.ಪಿ. (ಸೈಂಟ್ ಅಲೋಸಿಯಸ್ ಹೈಯರ್ ಪ್ರೈಮರಿ ಸ್ಕೂಲ್,
ಗೋವಾದ ನೈಟ್ ಕ್ಲಬ್ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಈ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಶನಿವಾರ ತಡರಾತ್ರಿ ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿಮೀ ದೂರ ಇರುವ ಬಿರ್ಚ್ ಬೈ ರೋಮಿಯೊ ಲೇನ್ನಲ್ಲಿರುವ ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟು,
ಮಸ್ಕತ್:ಕನ್ನಡ ಸಂಘ ಮಸ್ಕತ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಹಯೋಗದೊಂದಿಗೆ ಒಮಾನ್ ದೇಶದ ಮಸ್ಕತ್ ನ ಬೌಷರ್ ಸಿಬಿಎಫ್ಎಸ್ ಸಭಾಂಗಣದಲ್ಲಿ ದಿನಾಂಕ 28-11-2025 ರಂದು ಮೊನ್ನೆ ನಡೆದ “3ನೇ ವಿಶ್ವ ಕನ್ನಡ ಹಬ್ಬ” ಆಚರಣೆಯ ಯು ನಡೆಯಿತು. ಕನ್ನಡ ಹಬ್ಬದ ಸುಸಂದರ್ಭದಲ್ಲಿ ಮಸ್ಕತ್ ನ ಹೆಸರಾಂತ ಸಮಾಜ ಸೇವಕರು, ಯಶಸ್ವಿ ಉದ್ಯಮಿಗಳು, ಶ್ರೀ ಗಣೇಶ ಫೆಸ್ಟಿವಲ್ ಮಸ್ಕತ್ ಸಮಿತಿಯ ಅಧ್ಯಕ್ಷರು, ಒಮಾನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರು ಮತ್ತು
ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳ ಜೇನುತುಪ್ಪದ ಅಸಾಧಾರಣ ಗುಣಮಟ್ಟವನ್ನು ಉಲ್ಲೇಖಿಸಿ, ಅದರ ಹಿಂದೆ ಇರುವ ರೈತರ ಶ್ರಮವನ್ನು ಹಾಡಿಹೊಗಳಿದರು. ದ.ಕ. ಜಿಲ್ಲೆಯ ಪರಿಸರವು ಉತ್ತಮ ಗುಣಮಟ್ಟದ ಜೇನು ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ. ಈ ಸಾಮರ್ಥ್ಯವನ್ನು ಗುರುತಿಸಿ, ಗ್ರಾಮಜನ್ಯ ಎಂಬ ಸಂಸ್ಥೆಯು ಜೇನನ್ನು ಬ್ರಾಂಡ್ ಮಾಡಿ ನಗರ ಮಾರುಕಟ್ಟೆಗೆ ತಲುಪಿಸುತ್ತಿದ್ದು, ಇದರಿಂದ ರೈತರಿಗೆ ಭಾರಿ
ಮುಂಬಯಿ ಅ6.ಕುಲಾಲ ಸಂಘ ಮುಂಬಯಿಯ ಮಂಗಳೂರಿನ ಯೋಜನೆಯಾದ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯು ಪವಿತ್ರವಾದ ಶ್ರೀಕೃಷ್ಣನ ಸನ್ನಿದಿಯಾದ ಪೇಜಾವರ ಮಠದಲ್ಲಿ ಬಿಡುಗಡೆಗೊಳ್ಳುದರೊಂದಿಗೆ ಭಗವಂತನ ಆಶೀರ್ವಾದದಿಂದ ಮುಂದಿನ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವುದು. ಶತಮಾನದತ್ತ ಮುನ್ನಡೆಯುತ್ತಿರುವ ಕುಲಾಲ ಸಂಘ ಮುಂಬಯಿ ಇದೀಗ ಮಂಗಳೂರಲ್ಲಿ ಕುಲಾಲ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದು ಸಂಘದ ಮುಂದಿನ ಯೋಜನೆಯು ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣದ ಮೂಲಕ
ಚೆನ್ನೈ: ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 16 ಮಹಿಳೆಯರು, 8 ಮಕ್ಕಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿರುವ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಕರೂರಿನಲ್ಲಿ ಶನಿವಾರ(ಸೆ.27) ಬೃಹತ್ ರ್ಯಾಲಿ ಆಯೋಜಿಸಿದ್ದರು. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕಾಲ್ತುಳಿತ




























