Home Archive by category ರಾಷ್ಟ್ರೀಯ (Page 2)

ಮೂಡುಬಿದಿರೆ: ಕಬಡ್ಡಿ ಅಳಿಯೂರು ಸರ್ಕಾರಿ ಪ್ರೌಢ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದ 17ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಳಿಯೂರಿನ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ ಭಾಸ್ಕರ ಪಾಲಡ್ಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಉಡುಪಿ:ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ಕಾರ್ಯಕ್ರಮ

ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಸಾಗಾಣಿಕೆಗೆ ನಿರ್ಬಂಧ ಹೇರಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ಅ ರಾ ಪ್ರಭಾಕರ ಪೂಜಾರಿ ಮುಂದಾಳತ್ವದಲ್ಲಿ ಇಂದು ಜಾಥಾ ಕಾರ್ಯಕ್ರಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ ಪೂಜಾರಿ ಜಾಥಾ ಕಾರ್ಯಕ್ರಮದಲ್ಲಿ

ಮಂಗಳೂರು: ಐಐಎಂಎಂ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಮಂಗಳೂರು ಶಾಖೆಯ ವಾರ್ಷಿಕ ಸಭೆಯು ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಮಂಗಳೂರು ಶಾಖೆಯ ವಾರ್ಷಿಕ ಮಹಾಸಭೆಯು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷನ್ ಪರ್ಲ್ ಇನ್‌ನಲ್ಲಿ ನಡೆದಿದ್ದು, 2024-25 ರ ಅವಧಿಗೆ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಸತೀಶ್ ಸತ್ಯನಾರಾಯಣ ಅವರನ್ನು ಶಾಖೆಯ

ಉಡುಪಿ: ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭ

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಉಡುಪಿ ಇಲ್ಲಿ ಉಡುಪಿ ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಉಡುಪಿ;ನಿಡಂಬೂರು ಯುವಕ ಮಂಡಲ ರಿ. ಕಡೆಕಾರು ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ನಿಡಂಬೂರು ಯುವಕ ಮಂಡಲ ರಿ. ಕಡೆಕಾರು ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಇಂದು ದಿನಾಂಕ 25-08-2025 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ

ಕುಂದಾಪುರ :ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ವತಿಯಿಂದ ಕುಂದಾಪುರ- ಬೈಂದೂರು ವಲಯದ ಆತಿಥ್ಯದಲ್ಲಿ 35ನೇ ವರ್ಷದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ

ಕುಂದೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ವಿವಿಧ ವೇಷಭೂಷಣಗಳು ಒಂದೇ ಸಮವಸ್ತ್ರದೊಂದಿಗೆ ಕುಂದಾಪುರ ನಗರದಲ್ಲಿ ಮೆರವಣಿಗೆ ಮೂಲಕ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕ್ರೀಡಾಕೂಟವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ ಉತ್ತಮವಾದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ವೃತ್ತಿ ಜೊತೆಗೆ ಸಮಾಜ ಮುಖಿ ಕಾರ್ಯಕ್ರಮ ಮಾಡಿಕೊಂಡು ಬಂದಿರುವ ಛಾಯಾಗ್ರಾಹಕರ ಈ ಒಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು

ಬೈಂದೂರು : ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೈಂದೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಶಾಲಾ ವಠಾರದಲ್ಲಿ ಸಂಭ್ರಮದಲ್ಲಿ ನಡೆಯಿತು ಜಿಲ್ಲಾ ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರತು, ಸೋಲು–ಗೆಲುವು ಮುಖ್ಯವಲ್ಲ.

ಅತಿ ಹೆಚ್ಚು ಜೀರಿಗೆ ಬೆಳೆಯುವ ದೇಶ

ಜೀರಿಗೆ ಬೆಳೆಯ ಹಳೆಯ ದಾಖಲೆ ಈಜಿಪ್ತಿನಲ್ಲಿ ಸಿಕ್ಕಿದ್ದರೂ ಲೋಕದಲ್ಲಿ ಈಗ ಅತಿ ಹೆಚ್ಚು ಜೀರಿಗೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ ಭಾರತ.ಭಾರತವು ಜಾಗತಿಕ ಉತ್ಪಾದನೆಯ 60 ಶೇಕಡಾ ಜೀರಿಗೆ ಬೆಳೆಯುತ್ತದೆ. ಭಾರತದ ಒಟ್ಟು ಜೀರಿಗೆ ಬೆಳೆಯಲ್ಲಿ 65 ಶೇಕಡಾ ರಾಜಸ್ತಾನದಲ್ಲಿ ಬೆಳೆಯುತ್ತದೆ. ಭಾರತವು ಬೆಳೆದ ಜೀರಿಗೆಯಲ್ಲಿ ೬೦ ಶೇಕಡಾದಷ್ಟನ್ನು ಬ್ರಿಟನ್, ಯುಎಸ್‌ಎ ಮೊದಲಾದ ದೇಶಗಳಿಗೆ ರಫ್ತು ಮಾಡುತ್ತದೆ. ಐದು ಪ್ರಮುಖ ಜೀರಿಗೆ ಬೆಳೆಯುವ ದೇಶಗಳು ಮತ್ತು ಪ್ರಮಾಣ

ಅರೆ ಮೊಲದಂತೆ ಇರುವ ಕೋಳಿ ನಿರ್ವಂಶದಂಚಿನ ಕರಾವಳಿ ಕೋಳಿ

ಪ್ರೈರೀ ಚಿಕನ್ ಎಂಬ ಕೋಳಿಯು ಅರೆಬರೆ ಮೊಲದಂತೆ ಕಾಣುವ ವಿಶೇಷ ಜಾತಿಯಾಗಿದ್ದು, ಈಗ ನಿರ್ವಂಶದಂಚಿನಲ್ಲಿವೆ.ಮೊಲದಂತೆ ಅರ್ಧ ದೇಹ, ಮೊಲದಂತೆ ಏರಿಸಬಹುದಾದ ಕಿವಿ, ದೊಡ್ಡ ಮೀನಿನ ಹುರುಪೆಯಂತೆ ಕಾಣುವ ಗರಿಗಳ ಈ ಕೋಳಿಯು ಅಮರಿಕದ ಟೆಕ್ಸಾಸ್, ಲೂಸಿಯಾನಾ ಕರಾವಳಿಯವು. 1,900 ರಲ್ಲಿ 10 ಲಕ್ಷ ಇದ್ದ ಇವುಗಳ ಸಂಖ್ಯೆಯು 1,937 ಕ್ಕೆ8,700 ಕ್ಕೆ ಇಳಿದಿತ್ತು.ಈಗ ನಿರ್ವಂಶದಂಚಿನಲ್ಲಿದೆ. ಹುಲ್ಲಿನ ಚಿಗುರು, ಬೀಜ, ಕೀಟ ತಿನ್ನುವ ಇವನ್ನು ಕೊಯೋಟ್ ನರಿ, ರಾಕೂನ್ ಕಾಡುಬೆಕ್ಕು,

ಬಿರಿಯಾನಿ ನುಡಿ ಯಾವ ಭಾಷೆಯಿಂದ ಬಂದಿದೆ

ಪರ್ಶಿಯನ್ ನುಡಿ ಬಿರಿಯನ್ ಎನ್ನುವುದರಿಂದ ಬಿರಿಯಾನಿ ನುಡಿ ಹುಟ್ಟಿದೆ. ಇಂಗ್ಲಿಷಿನಲ್ಲಿ ಬಿರಿಯಾನಿಯನ್ನು ಮಿಕ್ಸೆಡ್ ರೈಸ್ ಡಿಶ್ ಎನ್ನುವರು.ಪರ್ಶಿಯನ್ನಿನ ಬಿರಿಯನ್ ಎನ್ನುವುದಕ್ಕೆ ಬೇಯಿಸುವುದಕ್ಕೆ ಮೊದಲು ಹುರಿದದ್ದು ಎಂದು ಅರ್ಥ. ಪರ್ಶಿಯಾದಿಂದ ಮೊಗಲ ಅಡುಗೆ ಮನೆಗೆ ಬಂದ ಬಿರಿಯಾನಿ ಇಂದು ಭಾರತ ಉಪಖಂಡದ ಬೀದಿ ಬೀದಿಗಳಲ್ಲಿ ಕೂಡ ಸಿಗುತ್ತದೆ. ಮಾಂಸ, ಉತ್ತಮ ಅಕ್ಕಿ, ತರಕಾರಿ, ಸಮಗ್ರ ಮಸಾಲೆ ಹಾಗೂ ತುಪ್ಪದ ಬಗೆ ಬೆರೆಸಿ ಮಾಡಿದ್ದು ಬಿರಿಯಾನಿ. ಕೊನೆಯಲ್ಲಿ