Home Archive by category ರಾಷ್ಟ್ರೀಯ (Page 33)

ರಾಜ್ಯದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ಅಧಿಕಾರ ಸ್ವೀಕಾರ

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಪ್ರಮಾಣವಚನ ಬೋಧಿಸಿದರು. ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಗೆಹ್ಲೋಟ್ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಗೆಹ್ಲೋಟ್

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಕರ್ನಾಟಕದ ನಾಲ್ವರಿಗೆ ಒಲಿದ ಮಂತ್ರಿ ಸ್ಥಾನ

ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಮೊದಲಿಗರಾಗಿ ರಾಜೀವ್ ಚಂದ್ರಶೇಖರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ರಾಜ್ಯ ಖಾತೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಶೋಭಾ ಕರಂದ್ಲಾಜೆ ಸೇರಿದಂತೆ 43 ಮಂದಿ ನೂತನ ಸಚಿವರಾಗಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಪುನರ್ ರಚನೆಯಾಗುತ್ತಿದೆ. 43 ಮಂದಿ ಕೇಂದ್ರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ಜೆಡಿಯುನ ರಾಮಚಂದ್ರ ಪ್ರಸಾದ್ ಸಿಂಗ್ , ಒಡಿಶಾದ ಅಶ್ವಿನಿ ವೈಷ್ಣವ್, ಕರ್ನಾಟಕದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್  ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಕಿರಣ್ ರಿಜಿಜು, ಅನುರಾಗ್

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಡಿವಿಎಸ್ ಸೇರಿದಂತೆ ಆರು ಸಚಿವರು ರಾಜೀನಾಮೆ

ಕೇಂದ್ರ ಸಚಿವ ಸಂಪುಟದ ಪುನರ್‌ ರಚನೆ ಇಂದು ಸಂಜೆ 6ಕ್ಕೆ ನಡೆಯಲಿದ್ದು, ಹಲವು ಮಂದಿ ಹೊಸಬರಿಗೆ ಸಚಿವ ಸ್ಥಾನ ದೊರೆಯಲಿದೆ. ಹಾಲಿ ಸಚಿವರ ಪೈಕಿ ಕೆಲವೊಬ್ಬರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಆರು ಮಂದಿ ಸಚಿವರು ರಾಜೀನಾಮೆ ನೀಡಿದ್ದಾರೆ.ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್, ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌, ರಾಜ್ಯ ಖಾತೆ ಸಚಿವರಾದ ರಾವೋಸಾಹೇಬ್ ದನ್ವೆ, ಸಂಜಯ್

ಕೊರೋನಾದೊಂದಿಗೆ ಬದುಕುಲು ಸಿಂಗಾಪುರ ನಿರ್ಧಾರ:ಎಲ್ಲಾ ನಿಯಮಾವಳಿಗಳನ್ನು ಕೈಬಿಡಲು ತೀರ್ಮಾನ

ಸಿಂಗಾಪುರ ದೇಶವು ಕೊರೋನಾವನ್ನು ಸಂಪೂರ್ಣ ನಿಯಂತ್ರಿಸುವ ಬಗ್ಗೆ ಆದ್ಯತೆ ನೀಡುವ ಬದಲು ಕೊರೋನಾದೊಂದಿಗೆ ಬದುಕುವ ಬಗ್ಗೆ ಅಧಿಕೃತ ನಿರ್ಧಾರಕ್ಕೆ ಬಂದಿದೆ.ಕೊರೋನಾಗೆ ಸಂಬಧಿಸಿದಂತೆ ಇದುವರೆಗೆ ಜಾರಿಯಲ್ಲಿದ್ದ ಎಲ್ಲಾ ನಿಯಾಮವಳಿಗಳನ್ನು ತೆರವುಗೊಳಿಸಲು ಸಿಂಗಾಪುರ ನಿರ್ಧರಿಸಿದೆ. ಇನ್ನು ಮುಂದೆ ಕೊರೋನಾ ಪ್ರಕರಣವನ್ನು ಸಂಪೂರ್ಣ ಶೂನ್ಯವಾಗಿರುವ ಬಗ್ಗೆ ನಮ್ಮ ಆದ್ಯತೆ ಇರುವುದಿಲ್ಲ, ಬದಲಿಗೆ ಕೊರೋನಾದೊಂದಿಗೆ ಬದುಕುವುದು ನಮ್ಮ ಆದ್ಯತೆಯಾಗಲಿದೆ ಎಂದು ಸಿಂಗಾಪುರದ

‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಯೋಗ ದಿನದ ವಸ್ತುವಿಷಯ:ಪ್ರಧಾನಿ ನರೇಂದ್ರ ಮೋದಿ

‘ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಯೋಗ ಭರವಸೆಯ ಅಶಾಕಿರಣವಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ ಯೋಗ ಕಡೆಗಿನ ಜನರ ಉತ್ಸಾಹ ಕಡಿಮೆಯಾಗಿಲ್ಲ. ಕೋವಿಡ್‌ ವಿರುದ್ಧದ ರಕ್ಷಣೆಗಾಗಿ ವೈದ್ಯರೂ ಯೋಗದ ಮೊರೆ ಹೋಗಿದ್ದಾರೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ವಿಶ್ವ ಯೋಗ ದಿನ. ‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಯೋಗ ದಿನದ ವಸ್ತುವಿಷಯ. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿರುವ

ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಕಡ್ಡಾಯ: ಇದು ಖರೀದಿದಾರರು, ಮಾರಾಟಗಾರರಿಗೆ ಅತ್ಯಗತ್ಯ: ಎಂ.ಪಿ.ಅಹ್ಮದ್

ಬೆಂಗಳೂರು: ಗ್ರಾಹಕರ ಹಕ್ಕುಗಳು ಅತ್ಯಂತ ಮಹತ್ವ ಮತ್ತು ಅಗತ್ಯ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಅನೇಕ ಕಾನೂನುಗಳನ್ನು ತಂದಿವೆ. ಗ್ರಾಹಕರು ತಾವು ಖರೀದಿಸುವ ಯಾವುದೇ ಉತ್ಪನ್ನವಾಗಲೀ ಅದಕ್ಕೆ ನೀಡುವ ಹಣಕ್ಕೆ ತಕ್ಕಂತೆ ಮೌಲ್ಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರಲ್ಲಿ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಸರ್ಕಾರ ಚಿನ್ನ ಮತ್ತು ಚಿನ್ನದ ಉತ್ಪನ್ನಗಳಿಗೆ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದ ಕಾನೂನು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ  ಜಾರ್ಜ್ ಫೆರ್ನಾಂಡಿಸ್ ರ  91 ನೇ ಹುಟ್ಟು ಹಬ್ಬದ ಸಂಸ್ಮರಣೆ

ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ  ಅವಿಭಜಿತ ದಕ್ಷಿಣ ಕನ್ನಡ,. ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ