Home Archive by category ರಾಷ್ಟ್ರೀಯ (Page 6)

ಮುಂಬೈ: ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್ ಆಯ್ಕೆ

ಮುಂಬಯಿ ಮಹಾನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಪ್ರಶಸ್ತಿ-೨೦೧೨ರ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ೨೦೨೫-೨೦೨೮ರ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚನೆಯಾಗಿದೆ. ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್, ಉಪಾಧ್ಯಕ್ಷರಾಗಿ ಬೈಕಂಪಾಡಿಯ ಬಿ.ಕೆ. ಪ್ರಕಾಶ್ ಮತ್ತು ಒಡೆಯರಬೆಟ್ಟು ಅಶೋಕ್ ಎಸ್.

ದುಬೈ: ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ ವಾರ್ಷಿಕ ಆರೋಗ್ಯ ಪ್ರಶಸ್ತಿಗೆ ನಾಮಿನೇಷನ್ ಪ್ರಾರಂಭ

ದುಬೈ: – ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ, ವಾರ್ಷಿಕ ಆರೋಗ್ಯ ಪ್ರಶಸ್ತಿಗಳು 2025 ಗೆ ನಾಮಿನೇಷನ್‌ಗಳು ಪ್ರಾರಂಭವಾಗಿವೆ. ಯುಎಇಯಲ್ಲಿ ಆರೋಗ್ಯ ಕ್ಷೇತ್ರದ ಅತ್ಯುನ್ನತ ಗೌರವ ಈ ಪ್ರಶಸ್ತಿಗಳು. ಈ ವರ್ಷದ ವಿಶೇಷತೆ. 15 ಯುಎಇ ನಾಗರೀಕರು ಮತ್ತು ಇನ್ನೂ 46 ವಿಭಿನ್ನ ವಿಭಾಗಗಳಲ್ಲಿ ಸಾಧನೆ ಗೈದವರನ್ನು ಗೌರವಿಸಲಾಗುತ್ತದೆ. ಈ ಸಮಾರಂಭ ಅಕ್ಟೋಬರ್ 9ರಂದು ಬೆಳಿಗ್ಗೆ 11 ಗಂಟೆಗೆ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ.

ಕೋಝಿಕ್ಕೋಡ್ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಅಡ್ವಾನ್ಸ್‌ಡ್ ರೋಬೋಟಿಕ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭ

ಕೋಝಿಕ್ಕೋಡ್: ಇಲ್ಲಿನ ಪ್ರಸಿದ್ಧ ಬೇಬಿ ಮೆಮೋರರಿಯಲ್ ಹಾಸ್ಪಿಟಲ್ ನಲ್ಲಿ ನೂತನವಾಗಿ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭಗೊಂಡಿತು. ರೋಬೋಟಿಕ್ಸ್ ಸರ್ಜರಿಯಿಂದ ಹಲವು ಉತ್ತಮ ಪ್ರಯೋಜನಗಳಿವೆಯೆಂದು ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್ ಚೇರ್ಮೆನ್ ಡಾ.ಕೆ.ಜಿ. ಅಲೆಕ್ಸಾಂಡರ್ ಹೇಳಿದರು.ಇದೇ ಸಂದರ್ಭ ಅಡ್ವಾನ್ಸ್‌ಡ್ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಅವರು ಉದ್ಘಾಟಿಸಿದರು.ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ ಬೆಳವಣಿಗೆಯ

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 14ನೇ ಸ್ಥಾನ: ರಶ್ಮಿತಾ ರಾಜು ಕುಲಾಲ್ ಉನ್ನತ ವ್ಯಾಸಂಗಕ್ಕೆ ಪ್ರತಿಷ್ಠಾನದಿಂದ 25 ಸಾವಿರ ನೆರವು

ಮಂಗಳೂರು: ಕರ್ನಾಟಕದ ರಾಜ್ಯದ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 14ನೇ ರಾಂಕ್ ಮತ್ತು ಮಂಗಳೂರಿಗೆ 6ನೇ ರಾಂಕ್ ಗಳಿಸಿರುವ ಕುಮಾರಿ ರಶ್ಮಿತಾ ರಾಜು ಕುಲಾಲ್ ಇವರ ಉನ್ನತ ವ್ಯಾಸಾಂಗಕ್ಕೆ ಕುಲಾಲ ಪ್ರತಿಷ್ಠಾನ ಮಂಗಳೂರು ಇದರು ವತಿಯಿಂದ ಸುಮಾರು 25 ಸಾವಿರವನ್ನು ನೆರವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದಲ್ಲಿ ನೀಡಲಾಯಿತು.ಕುಲಾಲ ಪ್ರತಿಷ್ಠಾನದ ಸಮಾಜ ಕಲ್ಯಾಣ ಆಶ್ರಯದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ

ಅಸ್ಸಾಂನಲ್ಲಿ ಭಾರಿ ಮಳೆ: ಪ್ರವಾಹ-ಭೂಕುಸಿತ; ಎಂಟು ಮಂದಿ ಸಾವು

ಅಸ್ಸಾಂನಲ್ಲಿ ಕೂಡಾ ಭಾರಿ ಮಳೆಯಾಗುತ್ತಿದ್ದು, ರಸ್ತೆ ಸಾರಿಗೆ ಹಾಗೂ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಹಾಗೂ ಭೂಕುಸಿತದಲ್ಲಿ ಈವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 78,000ಕ್ಕೂ ಹೆಚ್ಚು ಮಂದಿ ತೊಂದರೆಗೊಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ 10 ನದಿಗಳು ಅಪಾಯ ಮಟ್ಟ ಮೀರಿ

ಕನ್ನಡದ ಲೇಖಕಿ ಬಾನು ಮುಷ್ತಾಕ್- ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನ

ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ಬರೆದಿರುವ ಹಸೀನಾ ಮತ್ತು ಇತರ ಕತೆಗಳು ಕೃತಿಯ ಇಂಗ್ಲಿಷ್ ಅನುವಾದ ಹಾರ್ಟ್ ಲ್ಯಾಂಪ್ ಕೃತಿಯು ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ದೀಪಾ ಭಸ್ತಿ ಅವರು ಬಾನು ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ಮೇ 20ರಂದು ತೀರ್ಪು ಆಗಿದ್ದು, ಈ ಬಗೆಗೆ ಬುಧವಾರ ಅಧಿಕೃತ ಘೋಷಣೆಯಾಗಿದೆ. ಬೂಕರ್ ವಿಜೇತ ಕೃತಿಗೆ 50,000 ಪೌಂಡ್ ರೊಕ್ಕ ಬಹುಮಾನವಿದ್ದು, ಅದು ಲೇಖಕಿ ಮತ್ತು ಅನುವಾದಕಿಯ ನಡುವೆ ಸಮಾನ

ಶ್ರೀಹರಿಕೋಟಾ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ 101ನೇ ರಾಕೆಟ್ ಉಡಾವಣೆಯನ್ನು ಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101 ನೇ ಬಾಹ್ಯಾಕಾಶ ಯಾನವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಕ ದೋಷ ಕಂಡುಬಂದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ, ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಲಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರುಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ,ಸೇನೆ ನಡೆಸಿದ ಆಪರೇಷನ್ ಸಿಂದೂರ್ಬಗ್ಗೆ ಮಾತನಾಡಲಿದ್ದಾರೆ

ಪಾಕಿಸ್ತಾನದ ಡ್ರೋನ್ ದಾಳಿ ವಿಫಲ:ಸರಣಿ ಸ್ಫೋಟಗಳು ಮತ್ತು ಮೊಳಗಿದ ಸೈರನ್ ಸದ್ದು

ಭಾರತ-ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದ್ದು, ಇಂದು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿದ ನಂತರ ಸರಣಿ ಸ್ಫೋಟಗಳು ಮತ್ತು ಸೈರನ್‌ಗಳು ಕೇಳಿಬರುತ್ತಿವೆ. ನಸುಕಿನ ಜಾವ 3:50 ರಿಂದ 4:45 ರ ನಡುವೆ ಕೇಳಿದ ಸ್ಫೋಟಗಳಿಂದ ಜಮ್ಮು ನಗರದ ಕೆಲವು ಭಾಗಗಳಲ್ಲಿ ಕತ್ತಲೆಯಾಗಿದ್ದು, ಆಕಾಶದಲ್ಲಿ ಯುದ್ಧಸಾಮಗ್ರಿಗಳು ಕಂಡುಬಂದವು.

ಪದ್ಮಶ್ರೀ ಪುರಸ್ಕೃತ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ನಿಧನ

ಪದ್ಮಶ್ರೀ ಪುರಸ್ಕೃತ 128 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ನಿಧನರಾದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಾಣಸಿಯ ಬಿಎಚ್‌ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರು ಮೃತರಾಗಿದ್ದು, ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಯೋಗಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್