Home Archive by category ವಿಶ್ವ

ತೋಕೂರು: ಬಾಲ್ಯದಲ್ಲಿ ಮಕ್ಕಳಿಗೆ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ – ಸುನೀತಾ ಗುರುರಾಜ್

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ, ಅಭಿವೃದ್ಧಿ ಸಮಿತಿ ಮತ್ತು ಗುರು ಮಂದಿರ ನಿರ್ಮಾಣ ಸಮಿತಿ, ಎಸ್. ಕೋಡಿ, ತೋಕೂರು ಇದರ ಸಹಭಾಗಿತ್ವದಲ್ಲಿ ಸಪ್ಟೆಂಬರ್ 7,.2025 ರಂದು ನೆರವೇರಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯ ಪ್ರಯುಕ್ತ ಸ್ಥಳೀಯ

ಮೂಡುಬಿದಿರೆ:ಸವಾಲುಗಳನ್ನು ಎದುರಿಸಿ ಆತ್ಮ ಸ್ಥೈರ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್

ಪದವಿ ಪೂರೈಸುವುದು ಅಥವಾ ಕಂಠಪಾಠ ಮಾಡಿ ರ‍್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್ ಹೇಳಿದರು.ಮಂಗಳೂರು ವಿವಿ ಘಟಕ ಕಾಲೇಜು ಬನ್ನಡ್ಕ ಇಲ್ಲಿ ಶನಿವಾರ ಪ್ರೇರಣಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಭವಿಷ್ಯದ ನೌಕಕರಾಗಬಾರದು.

ಮಂಗಳೂರು:ಕರಾವಳಿಯಾದ್ಯಂತ ನೆತ್ತೆರೆಕೆರೆ ತುಳು ಸಿನಿಮಾ ಬಿಡುಗಡೆ

ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿದೇರ್ಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿತು. ನಗರದ ಭಾರತ್ ಸಿನಿಮಾಸ್‌ನಲ್ಲಿ ನಟ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆತ್ತೆರೆಕೆರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದರು. ಪತ್ರಕರ್ತರು ಮತ್ತು ಸಿನಿಮಾ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಅವರು

ಬ್ರಹ್ಮಾವರ; ಸಾಲಿಕೇರಿ ಯುವಕರ ತಂಡ ಗಣೇಶೋತ್ಸವದಲ್ಲಿ ವೇಷ ತೊಟ್ಟು ಮಗುವಿನ ಹೃದಯದ ಚಿಕಿತ್ಸೆಗೆ ಆರ್ಥಿಕ ಸಂಗ್ರಹ

ಸನಾತನ ಧರ್ಮ ಆಚರಣೆಯ ಪೂಜೆ ಉತ್ಸವಗಳು ಪರೋಕ್ಷವಾಗಿ ನೂರಾರು ಕೈಗಳಿಗೆ ಉದ್ಯೋಗ ಆರ್ಥಿಕ ಸ್ವಾವಲಂಭನೆಯಾಗಿದೆ. ಬ್ರಹ್ಮಾವರ ಬಳಿಯ ಸಾಲಿಕೇರಿಯ ಯುವಕರ ಒಂದು ತಂಡ ಫ್ರೇಂಡ್ಸ್ ಕ್ಲಬ್ ಹೆಸರಿನಲ್ಲಿ ಗಣೇಶ ಚೌತಿಯ ಸಂದರ್ಬದಲ್ಲಿ ನಾನಾ ವೇಷ ಧರಿಸಿ ಬಂದ ಹಣದಿಂದ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. 1.5 ತಿಂಗಳ ಮುದ್ದು ಶಿಶುವಿಗೆ ತುರ್ತು ಹೃದಯಚಿಕಿತ್ಸೆಗೆ ಹಣ ಸಂಗ್ರಹ ಮಾಡಿ ತೀರಾ ಬಡಕುಟುಂಬದ ಮಗುವಿನ ಪೋಷಕರೀಗೆ ನೀಡುವ ಘನ ಉದ್ದೇಶದಿಂದ ಗುರುವಾರ ಬೆಳಿಗ್ಗೆ ಯುವಕರ ತಂಡ

ಅತಿ ಹೆಚ್ಚು ಜಿಲ್ಲೆಗಳು ಇರುವ ರಾಜ್ಯ

ಉತ್ತರ ಪ್ರದೇಶವು ಅತಿ ಹೆಚ್ಚು 75 ಜಿಲ್ಲೆಗಳನ್ನು ಹೊಂದಿದೆ. ಜನಸಂಖ್ಯೆ ಪ್ರಮಾಣದಲ್ಲಿ ಕಡಿಮೆ ಜಿಲ್ಲೆಗಳು ಇರುವ ರಾಜ್ಯ ಮಹಾರಾಷ್ಟ.ಹೆಚ್ಚು ಜಿಲ್ಲೆಗಳಿರುವ ಹತ್ತು ರಾಜ್ಯಗಳು ಹೀಗಿವೆ.ಉತ್ತರ ಪ್ರದೇಶ 75, ಮಧ್ಯ ಪ್ರದೇಶ 55, ರಾಜಸ್ತಾನ 41, ಬಿಹಾರ 38, ತಮಿಳುನಾಡು38, ಮಹಾರಾಷ್ಟ 36, ಅಸ್ಸಾಂ 35. ಛತ್ತೀಸಗಡ, ತೆಲಂಗಾಣ, ಗುಜರಾತ್ ರಾಜ್ಯಗಳು ತಲಾ ೩೩ ಜಿಲ್ಲೆಗಳನ್ನು ಹೊಂದಿವೆ.

ಮೂಡುಬಿದಿರೆ ; ಸಾವ೯ಜನಿಕ ಶ್ರೀ ಗಣೇಶೋತ್ಸವ ಹಸಿರು ಹೊರೆಕಾಣಿಕೆ ಮೆರವಣಿಗೆ

ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಆ.27ರಿಂದ 31ರವರೆಗೆ ಸಮಾಜ ಮಂದಿರದಲ್ಲಿ ನಡೆಯಲಿರುವ 62ನೇ ವರ್ಷದ ಗಣೇಶೋತ್ಸವಕ್ಕೆ ಪೂರಕವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಎಂಸಿಎಸ್ ಸೊಸೈಟಿ ಎದುರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ., ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಪ್ರಭು, ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಸುದಶ೯ನ್

ಉಡುಪಿ:ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ಕಾರ್ಯಕ್ರಮ

ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಸಾಗಾಣಿಕೆಗೆ ನಿರ್ಬಂಧ ಹೇರಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ಅ ರಾ ಪ್ರಭಾಕರ ಪೂಜಾರಿ ಮುಂದಾಳತ್ವದಲ್ಲಿ ಇಂದು ಜಾಥಾ ಕಾರ್ಯಕ್ರಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ ಪೂಜಾರಿ ಜಾಥಾ ಕಾರ್ಯಕ್ರಮದಲ್ಲಿ

ಉಡುಪಿ: ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭ

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಉಡುಪಿ ಇಲ್ಲಿ ಉಡುಪಿ ಡಿಸ್ಟ್ರಿಕ್ಟ್ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ 23 ಅಥ್ಲೆಟಿಕ್ ಮೀಟ್ – 2025” ರ ಸಮಾರೋಪ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಕುಂದಾಪುರ :ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ವತಿಯಿಂದ ಕುಂದಾಪುರ- ಬೈಂದೂರು ವಲಯದ ಆತಿಥ್ಯದಲ್ಲಿ 35ನೇ ವರ್ಷದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ

ಕುಂದೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ವಿವಿಧ ವೇಷಭೂಷಣಗಳು ಒಂದೇ ಸಮವಸ್ತ್ರದೊಂದಿಗೆ ಕುಂದಾಪುರ ನಗರದಲ್ಲಿ ಮೆರವಣಿಗೆ ಮೂಲಕ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕ್ರೀಡಾಕೂಟವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ ಉತ್ತಮವಾದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ವೃತ್ತಿ ಜೊತೆಗೆ ಸಮಾಜ ಮುಖಿ ಕಾರ್ಯಕ್ರಮ ಮಾಡಿಕೊಂಡು ಬಂದಿರುವ ಛಾಯಾಗ್ರಾಹಕರ ಈ ಒಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು

ಮಂಗಳೂರು : ಅಂತರಾಷ್ಟ್ರೀಯ ವೇದಿಕೆಯಲ್ಲಿ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಕೀರ್ತಿ ತಂದ ಮಂಗಳೂರಿನ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್

ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ (ಆಗಸ್ಟ್ 13ರಿಂದ 17, ವಿಯೆಟ್ನಾಂ)ನಲ್ಲಿ ನಡೆದಿತ್ತು ಈ ಸ್ಪರ್ಧೆಗೆ ಭಾರತದಿಂದ ಪ್ರತಿನಿಧಿಸಿದ ಬಾಲಪ್ರತಿಭೆ ರುಶಭ್ ರಾವ್ ಇಂದು ಮಂಗಳೂರಿಗೆ ಬಂದಿಲಿದಿದ್ದು ಮಂಗಳೂರಿನ ವಿಮಾನ ನಿಲ್ದಾಣ ದಲ್ಲಿ ಹೂಗುಚ್ಚ ನೀಡಿ ಕುಟುಂಸ್ಥರು ಸ್ವಾಗತಕೋರಿದರು.ಮಂಗಳೂರು ಕುಲಶೇಖರ ಮೂಲದ, ಕೇವಲ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್, ಅಂತರಾಷ್ಟ್ರೀಯ ಫ್ಯಾಷನ್ ಮತ್ತು ಪ್ರತಿಭಾ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾನೆ. ಬೆಜೈಯ ಲೂರ್ಡ್ಸ್