Home Archive by category ವಿಶ್ವ (Page 2)

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲಿಕತ್ವದ ಜೂಜು ಮನೆಗಳು,ಜಾರಿ ನಿರ್ದೇಶನಾಲಯದಿಂದ ಸಮಗ್ರ ದಾಳಿ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ

ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು. ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ

ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ

ಹಣ್ಣಿನಲ್ಲಿ ಇಂಡೋನೇಶಿಯಾ ಸೋಲಿಸಿದ ಮಲೇಶಿಯಾ

ನೆಪೆಲಿಯಂ ಲೆಪ್ಪೆಸಿಯಂ ಎಂಬ ರಾಂಬುಟಾನ್ ಹಣ್ಣು ಜಾಗತಿಕವಾಗಿ ಅರ್ಧಕ್ಕರ್ಧ ಇಂಡೋನೇಶಿಯಾದಲ್ಲಿ ಬೆಳೆಯುತ್ತಿತ್ತು; ಆ ಸ್ಥಾನವನ್ನು ಈಗ ತಾಯ್‍ಲ್ಯಾಂಡ್ ಕಸಿದುಕೊಂಡಿದೆ.ರಾಂಬುಟಾನ್ ಮೂಲ ಕೊಂಗಣ ಎಂದರೆ ಆಗ್ನೇಯ ಏಶಿಯಾ. ಅರಬ್ ವ್ಯಾಪಾರಿಗಳು ನಡುಗಾಲದಲ್ಲಿ ಇದನ್ನು ಆಫ್ರಿಕಾದ ಜಾಂಜಿಬಾರ್ ಮೊದಲಾದ ಕಡೆಗೆ ಒಯ್ದರು. ಕಳೆದ ಶತಮಾನದಲ್ಲಿ ನಡುವಣ ಅಮೆರಿಕದ ದೇಶಗಳಿಗೆ ಈ ಉಷ್ಣವಲಯದ ಹಣ್ಣಿನ ಬೆಳೆ ವಿಸ್ತರಿಸಿದೆ. ದಶಕದ ಹಿಂದಿನವರೆಗೆ ಇಂಡೋನೇಶಿಯಾ ಮುಂದಿತ್ತು. ಕಳೆದೊಂದು

ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್ ರಫ್ತುವ್ಯವಹಾರ 10 ಕೋಟಿ ಡಾಲರ್‌ನಷ್ಟು ಇರುತ್ತದೆ. ಹಂಗೆರಿ ದೇಶವು ಎರಡನೆಯ ಸ್ಥಾನದಲ್ಲಿದೆ. ಇದು

ಅತಿ ಕಡಿಮೆ ಹಣ ಮೌಲ್ಯ ಹೊಂದಿರುವ ಐದು ದೇಶಗಳು

ಕೆಲವು ದೇಶಗಳ ಹಣ ಮೌಲ್ಯ ಜಾಗತಿಕವಾಗಿ ತಳಮಟ್ಟದಲ್ಲಿ ಇವೆ. ನಮ್ಮ ಒಂದು ಕಟ್ಟು ನೋಟಿಗೆ ಇಲ್ಲಿ ನೂರಾರು ಕಟ್ಟು ನೋಟು ಸಿಗುತ್ತದೆ.ಭಾರತೀಯ ಮಧ್ಯಮ ವರ್ಗದ ಬಡವರು ಈ ದೇಶಗಳ ತಾರಾ ಹೋಟೆಲುಗಳಲ್ಲಿ ತಂಗಬಹುದು. ಭಾರತದ ಒಂದು ರೂಪಾಯಿಗೆ ಆ ದೇಶಗಳ ಹಣ ಎಷ್ಟು ಸಿಗುತ್ತದೆ ಎಂದರೆ ಕಟ್ಟು ಕಟ್ಟು. ಇರಾನಿನ ರಿಯಲ್ ನಮ್ಮ ಒಂದು ರೂಪಾಯಿಗೆ 490; ವಿಯೆಟ್ನಾಮಿನ ಡಾಂಗ್ ನಮ್ಮ ಒಂದು ರೂಪಾಯಿಗೆ 300; ಲಾವೋಸ್‌ನ ಕಿಪ್ ನಮ್ಮ ಒಂದು ರೂಪಾಯಿಗೆ 250,ಇಂಡೋನೇಶಿಯಾದ ರುಪೈಯ ನಮ್ಮ

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ

ಶ್ರೀಹರಿಕೋಟಾ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ 101ನೇ ರಾಕೆಟ್ ಉಡಾವಣೆಯನ್ನು ಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101 ನೇ ಬಾಹ್ಯಾಕಾಶ ಯಾನವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಕ ದೋಷ ಕಂಡುಬಂದ

ಪಾಕಿಸ್ತಾನದ ಡ್ರೋನ್ ದಾಳಿ ವಿಫಲ:ಸರಣಿ ಸ್ಫೋಟಗಳು ಮತ್ತು ಮೊಳಗಿದ ಸೈರನ್ ಸದ್ದು

ಭಾರತ-ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದ್ದು, ಇಂದು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿದ ನಂತರ ಸರಣಿ ಸ್ಫೋಟಗಳು ಮತ್ತು ಸೈರನ್‌ಗಳು ಕೇಳಿಬರುತ್ತಿವೆ. ನಸುಕಿನ ಜಾವ 3:50 ರಿಂದ 4:45 ರ ನಡುವೆ ಕೇಳಿದ ಸ್ಫೋಟಗಳಿಂದ ಜಮ್ಮು ನಗರದ ಕೆಲವು ಭಾಗಗಳಲ್ಲಿ ಕತ್ತಲೆಯಾಗಿದ್ದು, ಆಕಾಶದಲ್ಲಿ ಯುದ್ಧಸಾಮಗ್ರಿಗಳು ಕಂಡುಬಂದವು.