Home Archive by category Fresh News (Page 10)

ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡಲು ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಿಂದ ಕೂದಲು ದಾನ ಶಿಬಿರ

ಮಂಗಳೂರು:ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧೀನದಲ್ಲಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವಾದ ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ವತಿಯಿಂದ ಶನಿವಾರ, 7 ಫೆಬ್ರವರಿ 2026ರಂದು ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ ಕೂದಲು ದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಎ.ಜೆ. ಆಸ್ಪತ್ರೆಯ 2ನೇ ಮಹಡಿಯ ಸಭಾಂಗಣದಲ್ಲಿ (ಕಾನ್ಫರೆನ್ಸ್ ಹಾಲ್)

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಲುವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ”

ಉಚ್ಚಿಲ:ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ ಒಂಭತ್ತು ತಲೆಮಾರಿನ ಗುರುಗಳು ಸಮಾಜದ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.ಅಂತಹ ಮಹಾನುಭಾವರಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸ್ಥಾಪಕರಾಗಿದ್ದ ಹಾಗೂ ಮಾರ್ಚ್ 31, 1966ರಂದು ಕೀರ್ತಿಶೇಷರಾದ ಶ್ರೀ ಮಾಧವ ಮಂಗಳ ಪೂಜಾರ್ಯರು ಸದ್ರಿ ಗುರುಪರಂಪರೆಯ ಕೊನೆಯ ಗುರುಗಳಾಗಿದ್ದಾರೆ.ಉಚ್ಚಿಲ ಶ್ರೀ ಮಹಾಲಕ್ಷ್ಮೀ

ನೇತ್ರ ಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ

ಉಡುಪಿಯ:ಉಡುಪಿಯ ಪ್ರತಿಷ್ಠಿತ ಕಾಲೇಜು ನೇತ್ರ ಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ ನ ಡೀನ್ ಡಾ. ಅರುಣ್ ಮಯ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಮಾನವನಿಗೆ ಮೊದಲ ಉಸಿರಿನಿಂದ ಕೊನೆಯ ಉಸಿರು ಇರುವವರೆಗೆ ಫಿಸಿಯೋಥೆರಪಿ ಚಿಕಿತ್ಸೆಯ ಅವಶ್ಯಕತೆ ಇದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದೇನೆ ಎನ್ನುವುದುಕಿಂತ ಎಷ್ಟು ವರ್ಷ ಆರೋಗ್ಯವಂತನಾಗಿ ಬದುಕಿದ್ದೇನೆ ಎನ್ನುವುದು ಬಹಳ

ಫೆ.7 ಭಾರತಿ ಎಂ. ಭರತನಾಟ್ಯ ರಂಗಪ್ರವೇಶ

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಶಿಷ್ಯೆ ಭಾರತಿ ಎಂ. ಇವರ ಭರತನಾಟ್ಯ ರಂಗಪ್ರವೇಶ ಫೆ.7 ರಂದು ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ತೆರೆದ ರಂಗಸ್ಥಳದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ. ಸಂಜೆ 5.45ಕ್ಕೆ ನಾಟ್ಯ ನಿಕೇತನ ಕೊಲ್ಯ ಇಲ್ಲಿನ ಕರ್ನಾಟಕ ಕಲಾಶ್ರೀ ಪುರಸ್ಕೃತ ಗುರು ರಾಜಶ್ರೀ ಉಳ್ಳಾಲ್‌ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಳಿಕ

ಕಾಪು: ಬಿಳಿಯಾರು ರತ್ನ ಮಡಿವಾಳ್ತಿ ಅವರಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾಸ್ತಲ್ಯ ಕುಟುಂಬ ಮಶಾಸನ ಮತ್ತು ವಾಸ್ತಲ್ಯ ಕಿಟ್ ವಿತರಣೆ

ಕಾಪು:ಕಾಪು ತಾಲೂಕಿನ ಬಿಳಿಯಾರು ರತ್ನ ಮಡಿವಾಳ್ತಿ ಅವರಿಗೆ ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾಸ್ತಲ್ಯ ಕುಟುಂಬ ಮಶಾಸನ ಮತ್ತು ವಾಸ್ತಲ್ಯ ಕಿಟ್ ವಿತರಣೆ ಮಾಡಲಾಯಿತು. ವೃದ್ಯಾಪ್ಯ ಜೀವನ ಸಾಗಿಸುತ್ತಿರುವ ರತ್ನ ಮಡಿವಾಳ್ತಿಯರಿಗೆ ಮಕ್ಕಳಿಲ್ಲದ ನೋವು ಒಂದು ಕಡೆಯಾದರೆ ಇತ್ತ ಅನಾರೋಗ್ಯದಿಂದ ಬಳಲುತ್ತಿರುವ ಪತಿ ಇವರುಗಳ ವಾಸ್ತವ ಸ್ಥಿತಿಯನ್ನು ಮನಗಂಡುಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರ ಪರಿಕಲ್ಪನೆ ಯಂತೆ

ಮೈಸ್ (MICE)ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026) Basic & Advanced ಕೋರ್ಸ್

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಕುಂತಳ ನಗರ, ಮಣಿಪುರ ಇವರ ಸಹಭಾಗಿತ್ವದಲ್ಲಿ ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಮೈಸ್ ಮೂಲಕ ಮೂಲಭೂತ ಮತ್ತು ಮುಂದುವರಿದ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮದಡಿಯಲ್ಲಿ ಮೈಸ್ (MICE) ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026) Basic & Advanced ಕೋರ್ಸ್ ನ್ನು ಉಚಿತವಾಗಿ

ಆಥಿ೯ಕ ಸಮಸ್ಯೆ : ವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ : ಆಥಿ೯ಕ ಸಮಸ್ಯೆಯಿಂದ ಬಳಲುತ್ತಿದ್ದ ವಿವಾಹಿತನೋವ೯ ತಮ್ಮ ದಖಾ೯ಸಿನಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮಾನಾ೯ಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ತಿರುಮಲಬೆಟ್ಟು ನಿವಾಸಿ ದಿ. ಮುತ್ತಯ್ಯ ಪೂಜಾರಿ ಅವರ ಪುತ್ರ ಅಗೋಟಿ ಯಾನೆ ರಮೇಶ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದ ರಮೇಶ್

ಜೆಸಿಐ ಸುರತ್ಕಲ್ ವತಿಯಿಂದ ಶಾಲಾ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿಯ ತರಬೇತಿ

ಸುರತ್ಕಲ್:ಜೆಸಿಐ ಸುರತ್ಕಲ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಚೇಳಾಯರ ಇಲ್ಲಿನ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಇದರ ಇದರ ಅಧ್ಯಕ್ಷರಾದ ಜೆಸಿ ಅಶೋಕ್ ಎನ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಫೇಮಸ್ ಯೂತ್ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರು ಅವರು ಸ್ವಾಮಿ ವಿವೇಕಾನಂದರ ಜೀವನ

ಎಸ್‌ಜೆಇಸಿಯಲ್ಲಿ ಸ್ಪೇನ್ ರಾಯಭಾರಿಯ ಭೇಟಿ: ಜಾಗತಿಕ ಅವಕಾಶಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಪ್ರೇರಣಾದಾಯಕ ಸಂವಾದ

ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) 2026ರ ಫೆಬ್ರವರಿ 03ರಂದು ಭಾರತಕ್ಕೆ ಸ್ಪೇನ್ ರಾಯಭಾರಿ ಗೌರವಾನ್ವಿತ ಶ್ರೀ ಜುವಾನ್ ಅಂಟೋನಿಯೊ ಮಾರ್ಚ್ ಪುಜೋಲ್ ಅವರನ್ನು ಆತ್ಮೀಯವಾಗಿ ಆತಿಥ್ಯ ವಹಿಸುವ ಗೌರವವನ್ನು ಪಡೆದಿತು. ಈ ಭೇಟಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದದೊಂದಿಗೆ ನಡೆದ ಶೈಕ್ಷಣಿಕ ಹಾಗೂ ಬೌದ್ಧಿಕ ಸಂವಾದವಾಗಿ ಆಯೋಜಿಸಲ್ಪಟ್ಟಿದ್ದು, ಜಾಗತಿಕ ದೃಷ್ಟಿಕೋನ, ರಾಜತಾಂತ್ರಿಕತೆ, ಶಿಕ್ಷಣ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಭವಿಷ್ಯಪರ

ಪುತ್ತೂರು: ಫೆ.5ರಂದು ತಮನ್‌ವಿ ಸಿಲ್ಕ್ಸ್ ಮಳಿಗೆ ಶುಭಾರಂಭ

ಪುತ್ತೂರಿನ ಬಪ್ಪಳಿಗೆ ಬೈಪಾಸ್ ನಲ್ಲಿರುವ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಫೆ.5ರಂದು ಶುಭಾರಂಭಗೊಳ್ಳಲಿದೆ. ತಮನ್‌ವಿ ಸಿಲ್ಕ್ಸ್ ನ ಹೊಸ ಮತ್ತು ವಿಶಾಲ ಶೋರೂಮ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಶಾಲ ಶೋರೂಮ್ – ವಿಶಿಷ್ಟ ಸಂಗ್ರಹ ಶುದ್ಧ ಕಾಂಜೀವರಂ ಹ್ಯಾಂಡ್‌ಲೂಮ್ ಸೀರೆಗಳು,ವಿವಾಹ ವಿಶೇಷ ಸಂಗ್ರಹಗಳು ಹಾಗೂ ಆಯ್ದ ವಿಶಿಷ್ಟ ವಿನ್ಯಾಸಗಳು ಲಭ್ಯ. ಪುತ್ತೂರಿನಲ್ಲಿ ಎರಡನೇ ಮಳಿಗೆ ಶುಭಾರಂಭಗೊಳ್ಳಲಿದೆ.