Home Archive by category Fresh News (Page 109)

ತೊಕ್ಕೊಟ್ಟು : ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳ

ನಗರದ ತೊಕ್ಕೊಟ್ಟುವಿನಲ್ಲಿರುವ ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳವನ್ನು ಆಯೋಜಿಸಲಾಗಿದೆ. ಉತ್ತಮ ಪವರ್ ಹಾಗೂ ಅತ್ಯಧಿಕ ಮೈಲೇಜ್ ಹೊಂದಿರುವ 125ಸಿಸಿ ಸ್ಕೂಟರನ್ನು ಕೇವಲ 999 ರೂ. ಡೌನ್ ಪೇಮೆಂಟ್ ನೀಡಿ ಖರೀದಿಸಬಹುದು. ಮೋಟರ್ ಬೈಕ್ ಮೇಲೆ ರೂ.2000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.1000 ಕ್ಯಾಶ್‌ಬ್ಯಾಕ್, ಹಾಗೂ ಹೆಲ್ಮೆಟ್ ಹಾಗೂ ಟೀ-ಶರ್ಟ್

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಜೀವವಿಜ್ಞಾನ ಉತ್ಸವ – ಬಯೋಸಿನರ್ಜಿ 2025-ಎನ್.ಎಂ.ಸಿ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಏಪ್ರಿಲ್ 28 ಸೋಮವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ಸ್ನಾತಕೋತ್ತರ ವಿಭಾಗಗಳು ಆಯೋಜಿಸಿದ “ಬಯೋಸಿನರ್ಜಿ 2025” ವಿ.ವಿ.ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಪಡೆದುಕೊಂಡರು. ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಗಳನ್ನು ಒಳಗೊಂಡ 16 ವಿದ್ಯಾರ್ಥಿಗಳ ತಂಡ

ಕಾರ್ಕಳ: ಉದ್ಯಮಿ ಆತ್ಮಹತ್ಯೆ

ಕಾರ್ಕಳ: ಉದ್ಯಮಿಯೋರ್ವ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಉಡುಪಿ ಜಿಲ್ಲೆಯ ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಕಾರ್ಕಳದವರಾದ ಮಂಗಳೂರು ನಿವಾಸಿ ಉದ್ಯಮಿ ದಿಲೀಪ್ ಎನ್. ಆರ್. ಶೂಟ್ ಮಾಡಿಕೊಂಡವರು. ಮಂಗಳೂರಿನಲ್ಲಿ ವಾಸವಿದ್ದ ಅವರು ನಿನ್ನೆ ರಾತ್ರಿ ಅಲ್ಲಿಂದ ಕಾರಿನಲ್ಲಿ ಹೊರಟವರು ನಿಟ್ಟೆ ದೂಪಕಟ್ಟೆಯ ನವೋದಯ ಪ್ರಾಪರ್ಟಿಸ್ ಮುಂಭಾಗ ಕಾರಿನಲ್ಲೇ ವಿಷ ಸೇವಿಸಿ ತಮ್ಮಲ್ಲಿದ್ದ ಗನ್ ಮೂಲಕ ಶೂಟ್ ಮಾಡಿಕೊಂಡು

ಪುತ್ತೂರು: ಪೆರ್ಲಂಪಾಡಿಯಲ್ಲಿ ಆನೆ‌ ದಾಳಿಗೆ ಮಹಿಳೆ ಬಲಿ

ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ. ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಲ್ಕಿ: ಕಟ್ಪಾಡಿ ಮಹಾಮಾಯ ಸಿಲ್ಕ್ಸ್‌ನಲ್ಲಿ ಮೆಘಾ ಲಕ್ಕಿ ಡ್ರಾ

ಮುಲ್ಕಿಯ ಬಪ್ಪನಾಡು ದೇವಳದ ಬಳಿಯಲ್ಲಿರುವ ಕಟ್ಪಾಡಿ ಮಹಾಮಾಯ ಸಿಲ್ಕ್ಸ್‌ನಲ್ಲಿ ಎ.18ರಿಂದ ಮೇ.17ರವರೆಗಿನ ಪ್ರತಿ 10,000 ಮೇಲ್ಪಟ್ಟ ಖರೀದಿಗೆ ಗ್ರಾಹಕರಿಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತಿದೆ. ಇಲ್ಲಿ ಮದುವೆ ಸೀರೆಗಳು, ಸಿಲ್ಕ್ಸ್ ಮತ್ತು ಕಾಂಜೀವರಂ, ಕಾಟನ್ ಹೀಗೆ ವಿವಿಧ ಶೈಲಿಯ ಸಾರಿಗಳು,ಪುರುಷರ, ಮಹಿಳೆಯರ ಹಾಗೂ ಮಕ್ಕಳ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ನವನವೀನ ರೀತಿಯ ಉಡುಪುಗಳು ಲಭ್ಯವಿದೆ.ಲಕ್ಕಿ ಕೂಪನ್ ವಿಜೇತರ ಹೆಸರನ್ನು ಮೇ.18ರಂದು ನಡೆಯುವ

ಸುಳ್ಯ: ಏ.27ರಂದು ಸುಳ್ಯದ ಗೌಡ ಸಮುದಾಯ ಭವನದಲ್ಲಿ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ ದ ಎರಡನೇ ಸುತ್ತಿನ ಆಡಿಷನ್

ವಿ4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ.ಬಿ. ಫೌಂಡೇಶನ್‌ನ ಎಂ.ಬಿ. ಸದಾಶಿವ ಅವರ ಸಾರಥ್ಯದಲ್ಲಿ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ಎರಡನೇ ಸುತ್ತಿನ ಆಡಿಷನ್ ಏಪ್ರಿಲ್ 27ರಂದು ನಡೆಯಲಿದೆ. ಈಗಾಗಲೇ ಮೊದಲ ಸುತ್ತಿನ ಆಡಿಷನ್ ಸುಳ್ಯದ ಲಯನ್ಸ್ ಕ್ಲಬ್‌ನಲ್ಲಿ ಯಶಸ್ವಿಯಾಗಿ ನೆರವೇರಿದ್ದು, 10ಕ್ಕೂ ಅಧಿಕ ತಂಡಗಳು ಸ್ಪರ್ಧಿಸಿದ್ದವು. ಇದೀಗ ಎರಡನೇ ಸುತ್ತಿನ ಆಡಿಷನ್ ಏಪ್ರಿಲ್ 27ರ ಭಾನುವಾರದಂದು ಸುಳ್ಯದ ಗೌಡ ಸಮುದಾಯ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ: ಅಪರ್ಣಾ ಅಡಿಗ ರಾಜ್ಯಕ್ಕೆ 7ನೇ ಸ್ಥಾನ

ಪುತ್ತೂರಿನ ವಿವೇಕಾನಂದ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು, ಅಪರ್ಣಾ ಅಡಿಗ ಅವರು ಕಾಲೇಜಿಗೆ ಮೂರನೇ ಸ್ಥಾನ ಪಡೆದು, ರಾಜ್ಯದಲ್ಲಿ 7ನೇ ಸ್ಥಾನವನ್ನು ಪಡೆದು ಹೆಮ್ಮೆ ತಂದಿದ್ದಾರೆ. ಅಪರ್ಣಾ ಅವರು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವ್ಯತ್ಯಾಸ ಆದ ಕಾರಣ ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಮರು ಮೌಲ್ಯಮಾಪನದ ನಂತರ ಬ್ಯುಸಿನೆಸ್‌ನಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದರು. 593 ಅಂಕ ಪಡೆದು 98.83 ಶೇಕಡಾ ಫಲಿತಾಂಶವನ್ನು

ಸಂಘಟಿತವಾಗಿ ಸರಕಾರಿ ಶಾಲೆಗಳನ್ನು ಉಳಿಸೋಣ – ಗಂಟಿಹೊಳೆ ಕರೆ

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಸರಕಾರಿ ಶಾಲೆಗಳನ್ನು ಉಳಿಸುವ ವಿಶೇಷ ಯೋಜನೆ 300 ಟ್ರೀಸ್ ಇದರ ಸಮಾಲೋಚನ ಸಭೆ ನಡೆಸಿ, ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸುವಂತೆ ಮನವಿ ಮಾಡಿದರು. 300 ಟ್ರೀಸ್ ಸಮಿತಿ ರಚನೆ ಹಾಗೂ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ ಶಿಕ್ಷಣ ಪ್ರೇಮಿಗಳು, ಅಧ್ಯಾಪಕರು, ದಾನಿಗಳು ಹಾಗೂ ಕಾರ್ಯಕರ್ತರಿಂದ ಸಲಹೆಗಳನ್ನು ಸ್ವೀಕರಿಸಿದರು. ಸಭೆಯಲ್ಲಿ, ಬೆಂಗಳೂರಿನಲ್ಲಿ ನೆಲೆಸಿರುವ

ಮಂಗಳೂರು: ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ “ಕಜ್ಜ” ಕ್ಕೆ ಮುಹೂರ್ತ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ “ಕಜ್ಜ” ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೆಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು. ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್ ಜೆ ಸುಮುಖ ಪ್ರೊಡಕ್ಷನ್‌ ಮೊದಲ ಸಿನಿಮಾಕ್ಕೆ ತುಳುನಾಡಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ

ಕಡಬ: ಪಹಲ್‌ಗಾಂವ್ ದಾಳಿಗೆ ಖಂಡನೆ: ಹೆದ್ದಾರಿ ತಡೆ ನಡೆಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ಕಡಬ: ಜಮ್ಮು ಕಾಶ್ಮೀರದ ಪಹಲ್‌ಗಾಂವ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಕಡಬದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಹೆದ್ದಾರಿ ತಡೆಸಿ ಪ್ರತಿಭಟನೆ ನಡೆಸಲಾಯಿತು.ವಿಶ್ವ ಹಿಂದೂ ಪುತ್ತೂರು ಜಿಲ್ಲಾ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕಾಶ್ಮಿರದ ಪಹಲ್ ಗಾಂವ್ ನಲ್ಲಿ ಉಗ್ರರು ಪ್ರವಾಸಿಗಳ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಇದನ್ನು ಸಹಿಸಲೂ ಸಾದ್ಯವಿಲ್ಲ. ಯಾರೆಲ್ಲ ಈ ಕೃತ್ಯದಲ್ಲಿ