Home Archive by category Fresh News (Page 111)

ಉಳ್ಳಾಲ: ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ – ಸಾಮೂಹಿಕ ಅತ್ಯಾಚಾರ ಯತ್ನ ಶಂಕೆ – ಪೊಲೀಸರಿಂದ ತನಿಖೆ

ಉಳ್ಳಾಲ: ಯುವತಿಯೋರ್ವಳು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಪತ್ತೆಯಾಗಿದ್ದು, ಮೈಪೂರ್ತಿ ಗಾಯದ ಗುರುತು ಪತ್ತೆ ಆಗಿದ್ದು, ಸಾಮೂಹಿಕ ಅತ್ಯಾಚಾರದ ಶಂಕೆ ಮೇಲೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.ತಡರಾತ್ರಿ ವೇಳೆ ಹೊರರಾಜ್ಯದ ಯುವತಿ ನಶೆಯಿಂದ ಸ್ಥಳೀಯ ಮನೆಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ

ಮಂಗಳೂರು: ಎ.19 ರಂದು ರೋಹನ್ ಇಥೋಸ್ ಭೂಮಿಪೂಜೆ

ಅತ್ಯುತ್ತಮ ಗುಣಮಟ್ಟ ಮತ್ತು ಸೇವಾಬದ್ಧತೆಯೊಂದಿಗೆ ಕಳೆದ 32 ವರ್ಷಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿಸುವ ಪ್ರತಿಷ್ಠಿತ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಎಪ್ರಿಲ್ 19ರಂದು ಕಂಕನಾಡಿಯ ಫಾದರ್ ಮುಲ್ಲರ್ ಬಳಿ ನಡೆಯಲಿದೆ. ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯು 15 ಮಹಡಿಗಳನ್ನು ಹೊಂದಿದ್ದು, ಪ್ರತಿ

ಕುಕ್ಕೆ: 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ

ಕಡಬ,ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ವಾರ್ಷಿಕ ಆದಾಯ ರೂ.155,95,19,567.08ಗೆ ಏರಿಕೆಯಾಗಿದ್ದು, ಕಳೆದ ವರ್ಷ ಕ್ಷೇತ್ರದ ಆದಾಯ ರೂ.146.01 ಕೋಟಿ ಆಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂಧರ್ಮದಾಯ ದತ್ತಿ ಇಲಾಖೆಯಡಿಯಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾಗರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕ್ಷೇತ್ರಕ್ಕೆ ರಾಜ್ಯ,

ಮಂಗಳೂರು: ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

ಮಂಗಳೂರು: ‘ಮುದ್ದು ಸೊಸೆ’ ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ ‘ಮುದ್ದು ಸೊಸೆ’ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್

ಮಂಗಳೂರು: ಎ.18ರಂದು ಅಡ್ಯಾರ್‌ನಲ್ಲಿ ವಕ್ಫ್ ತಿದ್ದುಪಡಿ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ:ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ನಗರದ ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಎ.18ರಂದು ಪ್ರತಿಭಟನಾ ಸಮಾವೇಶವು ನಡೆಯಲಿದ್ದು, ಇದರಿಂದಾಗಿ ಅಡ್ಯಾರು ಕಣ್ಣೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿದ್ದು, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು – ಬೆಂಗಳೂರು ರಾಷ್ಟ್ರೀಯ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಬನ್ನೂರು: ಕೃಷ್ಣ ನಗರದಲ್ಲಿ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 16 ರಂದು ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು. ನಗರಸಭಾ ಪೂರ್ವದ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ ಪ್ರತಿಯೊಬ್ಬರ ಪ್ರಯತ್ನದ ಹಿಂದೆ ದೃಢ ನಿರ್ಧಾರ ಹಾಗೂ ಮುಂದೆ ಒಂದು ದೃಢವಾದ ಗುರಿ ಇರಬೇಕು. ಹಾಗಾದಾಗ ನಾವು ಜೀವನದಲ್ಲಿ ಮುಂದೆ ಬರಲು

ದೀನದಯಾಳ್ ಸಹಕಾರ ಸಂಘದ ವತಿಯಿಂದ ಭಾರತ್ ವನ್ ಜನಸಂಪರ್ಕ ಕೇಂದ್ರ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ

ಸುಳ್ಯ ಮಾಜಿ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಕಾರ್ಯಾಚರಿಸುವ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಎ.16ರಂದು ನಡೆಯಿತು. ಸ್ವಸಹಾಯ ಸಂಘಗಳನ್ನು ನ.ಪಂ.ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಉದ್ಘಾಟಿಸಿದರು. ಭಾರತ್ ವನ್ ಜನಸಂಪರ್ಕ ಕೇಂದ್ರವನ್ನು ತಹಶೀಲ್ದಾರ್ ಎಂ.ಮಂಜುಳ

ಮಂಗಳೂರು: ಅಸ್ತ್ರಗ್ರೂಪ್ ವತಿಯಿಂದ ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕೊಡೆ ಹಸ್ತಾಂತರ

ಅಸ್ತ್ರಗ್ರೂಪ್ ವತಿಯಿಂದ ಮಂಗಳೂರು ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಿರುವ ಅಸ್ತ್ರಗ್ರೂಪ್ ವತಿಯಿಂದ ಟ್ರಾಫಿಕ್ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ಸುಮಾರು 300 ಕೊಡೆಗಳನ್ನು ಮಂಗಳೂರಿನ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಮತ್ತು ಯತೀಶ್ ಪೂಜಾರಿ ಅವರು

ಕಿವಿಯ ಆರೋಗ್ಯದ ಬಗೆಗೆ ಕಿವಿಮಾತು..!

ಪಂಚೇಂದ್ರಿಯಗಳಾದ ನಾಲಗೆಯಿಂದ ನಾವು ರುಚಿಯನ್ನು ಅಸ್ಪಾಧಿಸಿ, ಕಣ್ಣುಗಳಿಂದ ಬಾಹ್ಯ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ, ಚರ್ಮಗಳಿಂದ ಸ್ವರ್ಶ ಜ್ಞಾನವನ್ನು ಅನುಭವಿಸಿ, ಮೂಗುಗಳಿಂದ ವಾಸನೆಯನ್ನು ಗೃಹಿಸಿ, ಕಿವಿಗಳಿಂದ ಕೇಳಿ ಜೀವನದ ಪ್ರತಿ ಕ್ಷಣವನ್ನು ಅಸ್ಪಾಧಿಸುತ್ತೇವೆ ಮತ್ತು ಅನುಭವಿಸುತ್ತೇವೆ. ಈ ಎಲ್ಲಾ ಅಂಗಗಳಲ್ಲಿಯೂ ಕಿವಿ ಬಹಳ ಸಾಧುವಾದ ಅಂಗ. ಕಣ್ಣು ಮೂಗುಗಳಂತೆ ಕಿವಿಗಳಿಗೆ ರಾಜಾತಿಥ್ಯ ಬೇಡ. ಕಣ್ಣು ಬಹಳ ನಾಜೂಕಿನ ಅಂಗವಾಗಿದ್ದು ಎಷ್ಟು ಸೇವೆ ಮಾಡಿದರೂ

ಪುತ್ತೂರು:ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ

ಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ