Home Archive by category Fresh News (Page 121)

ಹತ್ತು ಸಾವಿರ ಮನೆಗಳ ಪೈಕಿ ಒಂದೂ ಮತ್ಸ್ಯಾಶ್ರಯ ಮನೆ ಹಂಚಿಕೆಯಾಗಿಲ್ಲ, ಗಂಟಿಹೊಳೆ ಪ್ರಶ್ನೆಗೆ ಸರ್ಕಾರದ ಉತ್ತರ

ಬಜೆಟ್ ಅಧಿವೇಶನದಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಮೀನುಗಾರರ ಪರವಾಗಿ ಧ್ವನಿ ಎತ್ತಿದ್ದು, ಸರ್ಕಾರದ ಉತ್ತರಕ್ಕೆ ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸದನದಲ್ಲಿ, 2023-24 ಹಾಗೂ 2024-25 ನೇ ಸಾಲಿನಲ್ಲಿ ಮೀನುಗಾರಿಕೆ ಮತ್ಸ್ಯಾಶ್ರಯ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಪೈಕಿ ಎಷ್ಟು ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸರ್ಕಾರವನ್ನು

ಬ್ರಹ್ಮಾವರದಲ್ಲಿ ಎಂ.ಸಿ.ಸಿ ಬ್ಯಾಂಕಿನ ಎಟಿಎಮ್ ಉದ್ಘಾಟನೆ

ಬ್ರಹ್ಮಾವರ ಶಾಖೆಯು ಆರಂಭಗೊoಡು ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, 10 ಕೋಟಿ ವ್ಯವಹಾರದ ಸಾಧನೆ ಮತ್ತು ನೂತನ ಎಟಿಮ್ ಉದ್ಘಾಟಣಾ ಸಮಾರಂಭ 2025 ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಂ.ಸಿ.ಸಿ. ಬ್ಯಾಂಕಿನ 8ನೇ ಎಟಿಎಮ್ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರುಗಳಾದ ವಂದನೀಯ

ಮಂಗಳೂರು: ಮಿಸ್ಟರ್, ಮಿಸ್, ಮಿಸ್ಟರ್ ತುಳುನಾಡು-2025 ಸೀಸನ್ 4

ಅಲ್ಲೊಂದು ಸುಂದರ ಫ್ಯಾಷನ್ ಜಗತ್ತು ಅನಾವರಣಗೊಂಡಿತು. ಇನ್ನು ಕಲರ್ ಕಲರ್ ಬಟ್ಟೆಗಳಿಂದ ಯುವಕ-ಯುವತಿಯರಿಂದ ರ್‍ಯಾಂಪ್ ವಾಕ್ ಕೂಡ ಎಲ್ಲರ್ ಗಮನ ಸೆಳೆಯಿತು. ಎನ್‌ಬಿ ಗ್ರೂಫ್ ಅರ್ಪಿಸುವ ಅಸ್ತ್ರ ಮಿಸ್ಟರ್, ಮಿಸ್, ಮಿಸ್ ಟೀನ್, ಮಿಸೆಸ್ ತುಳುನಾಡು ಸೀಸನ್ – 4ರ ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಉಚ್ಚಿಲದ ಕಿಯಾಂಜಾ ಗಾರ್ಡನ್ ನ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು. ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಬಟ್ಟೆಗಳನ್ನು ಧರಿಸಿ, ಯುವಕ – ಯುವತಿಯರ

ಕೊಕ್ಕಡ: ಮೂರು ತಾಲೂಕುಗಳನ್ನು ಬೆಸೆಯುವ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ, ಕಿಂಡಿ ಅಣೆಕಟ್ಟು ಲೋಕಾರ್ಪಣೆ

ಕೊಕ್ಕಡ: ಕೊಕ್ಕಡ ಮತ್ತು ಗೋಳಿತೊಟ್ಟು ಗ್ರಾಮದ 500ಕ್ಕೂ ಹೆಚ್ಚು ಮನೆಗಳ ನಿವಾಸಿಗಳ 40 ವರ್ಷಗಳ ಬೇಡಿಕೆಯ ರೂಪದಲ್ಲಿ ರೂ.3.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೋಡಂಗೇರಿ – ಉಪ್ಪಾರಹಳ್ಳ ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾ.8ರಂದು ಲೋಕಾರ್ಪಣೆ ಮಾಡಿದರು. ಈ ಸೇತುವೆ ಮತ್ತು ಅಣೆಕಟ್ಟಿನ ನಿರ್ಮಾಣದಿಂದ ರೈತರಿಗೆ ನೀರಾವರಿ ಹಾಗೂ ಜನ ಸಂಪರ್ಕ ಸುಗಮಗೊಳ್ಳಲಿದೆ.ಎಂದು ಹೇಳಿದರು. ಈ ವೇಳೆ ಶಾಸಕರನ್ನು ಸ್ಥಳೀಯರು

ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ 83 ಲಕ್ಷ ವೆಚ್ಚದ ಪುನರ್‌ವಸತಿ ಕೇಂದ್ರ: ಕೊಕ್ಕಡದಲ್ಲಿ ಭೂಮಿ ಪೂಜೆ

ಎಂಡೋಸಲ್ಫಾನ್ ಸಂತ್ರಸ್ತರ ಪುನರ್‌ವಸತಿ ಮತ್ತು ಭವಿಷ್ಯದ ಅನುಕೂಲಕ್ಕಾಗಿ ಎಂಆರ್‌ಪಿಎಲ್ (MRPL) ನಿಂದ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಭೂಮಿ ಪೂಜೆ ಮಾ.8 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು. ಕೊಕ್ಕಡ ಗ್ರಾಮ ಪಂಚಾಯತಿ ಸಮೀಪ ಈ ಪುನರ್‌ವಸತಿ ಕೇಂದ್ರ ನಿರ್ಮಾಣವಾಗಲಿದ್ದು, ಎಂಡೋ ಸಂತ್ರಸ್ತರ ಆರೋಗ್ಯದ ಕಲ್ಯಾಣಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ,

ಸುಳ್ಯ: ಬಿ.ಸಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ವತಿಯಿಂದ ಬಡ್ಡಡ್ಕದ ಕೂರ್ನಡ್ಕ ಎಂಬಲ್ಲಿ ಶ್ರೀಮತಿ ತೇಜಕುಮಾರಿಯವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕನಾಥ್ ಅಮಚೂರು ನವರು ನಾಮಫಲಕವನ್ನು ಅನಾವರಣಗೊಳಿಸಿ ಗ್ರಾಮೀಣ ಮಟ್ಟದಲ್ಲಿ ಕೊರತೆಗಳು ಕಂಡುಬಂದಲ್ಲಿ ಮೊದಲಾಗಿ ಆ ಸಮಸ್ಯೆಯನ್ನು ಗುರುತಿಸಿ ಬಗೆಹರಿಸುವುದು ಶ್ರೀ ಕ್ಷೇತ್ರ ಧರ್ಮಸ್ಥಳ

ಸುಳ್ಯ: ಬದುಕನ್ನೇ ಸಾಹಿತ್ಯಕ್ಕಾಗಿ ಮೀಸಲಿಟ್ಟವರು ಶೇಷಗಿರಿರಾವ್: ಚಂದ್ರಾವತಿ ಬಡ್ಡಡ್ಕ

ಕನ್ನಡ ಸಾಹಿತ್ಯಕ್ಕೆ ವಿಮರ್ಶಾ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದವರು ಎಲ್ ಎಸ್ ಶೇಷಗಿರಿ ರಾವ್. ಅವರು ಸರಳ , ನೇರ ನಡೆ-ನುಡಿಯ ಮೇರು ವ್ಯಕ್ತಿತ್ವವನ್ನು ರೂಪಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಬಿ ಎಂ ಶ್ರೀ ಅವರ ಪ್ರೋತ್ಸಾಹದಿಂದ ಮಾತೃಭಾಷೆ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಬಹಳ ಚಿಕ್ಕವಯಸ್ಸಿನಲ್ಲಿ ಬರಹದಲ್ಲಿ ತೊಡಗಿಕೊಂಡ ಇವರು ಸ್ವಾತಂತ್ರ ಹೋರಾಟದಲ್ಲೂ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಶಾಂತ ಸ್ವಭಾವದ

ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಕರಿಗೆ ಪೊಲೀಸ್ ರಕ್ಷಣೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ಕೊಚ್ಚಿ: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಹಾಗೂ ಸಂಬಂಧಿತ ಧಾರ್ಮಿಕ ವಿಧಿವಿಧಾನಗಳನ್ನು ಸುರಕ್ಷಿತವಾಗಿ ನಡೆಸಲು ವಿಶೇಷ ಪೊಲೀಸ್ ಭದ್ರತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ನೇತೃತ್ವದಲ್ಲಿ ಉತ್ಸವಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್:, ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವಲಯದ ಕಲ್ಮಕಾರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ(ನಿ.) ಇದರ ಕಟ್ಟಡ ರಚನೆಗೆ ಶ್ರೀ ಕ್ಷೇತ್ರದಿಂದ ರೂ.2,00,000/- ಮೊತ್ತ ಅನುದಾನ ಮಂಜೂರಾಗಿದ್ದು, ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಕಟ್ಟಡದ ಉಧ್ಘಾಟನೆಯನ್ನು ಶ್ರೀ ಕೆ.ಪಿ ಸುಚರಿತ ಶೆಟ್ಟಿ ಅಧ್ಯಕ್ಷರು ದ.ಕ

ಸುಳ್ಯ: ಬಾಲಕನಿಗೆ ವಾಹನ ಕೊಟ್ಟ ಪೋಷಕರಿಗೆ 25 ಸಾವಿರ ರೂ. ದಂಡ

ಅಪ್ರಾಪ್ತ ವಯಸ್ಸಿನ ಪುತ್ರನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಪರಿಸರದಲ್ಲಿ ಬಾಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಸುಳ್ಯ ಪೊಲೀಸರು ತಡೆ ಹಿಡಿದು ಪ್ರಕರಣ ದಾಖಲಿಸಿದ್ದರು. ಸುಳ್ಯ ನ್ಯಾಯಾಲಯ ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಾಲಕನಿಗೆ ವಾಹನ ಚಾಲನೆ ಮಾಡಲು ನೀಡಿದ್ದಕ್ಕಾಗಿ ಸುಳ್ಯ ಪಿಎಸ್‌ಐ ಸಂತೋಷ್‌ ಬಿ.ಪಿ. ಅವರು ವಾಹನ ಮಾಲಕರ ವಿರುದ್ಧ