Home Archive by category Fresh News (Page 159)

ಕುಂದಾಪುರದ ಗೇರುಕಟ್ಟೆ ಸಮೀಪ ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿ

ಕುಂದಾಪುರ: ನಿನ್ನೆ ರಾತ್ರಿ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗೇರುಕಟ್ಟೆ ಸಮೀಪ ನಡೆದಿದೆ. ಗೇರುಕಟ್ಟೆ ನಿವಾಸಿ ಫಕೀರ ಸಾಹೇಬರ ವಠಾರದ ಅಬ್ದುಲ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಚಾವಣಿ, ವಿದ್ಯುತ್ ಪರಿಕರಗಳು ಹಾಗೂ ಮನೆಯ ಕೆಲವು ಸಾಮಾಗ್ರಿಗಳು ಭಾಗಶಃ

ಕಾರು ಚಾಲಕನ ನಿದ್ದೆಯ ಮಂಪರು ತೆಂಕ ಎರ್ಮಾಳಿನಲ್ಲಿ ಸರಣಿ ಅಪಘಾತ

ತೆಂಕ ಎರ್ಮಾಳು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒರ್ವ ಗಾಯಗೊಂಡು ಮೂರು ವಾಹನಗಳು ಜಖಂಗೊಂಡಿದೆ. ಗೂಡ್ಸ್ ಟೆಂಪೆÇವೊಂದು ಎರ್ಮಾಳು ಜಂಕ್ಷನ್ ನ ಸತ್ಕಾರ್ ಹೊಟೇಲ್ ಮುಂಭಾಗ ರಸ್ತೆ ಬಿಟ್ಟು ನಿಂತಿದ್ದು, ಮಂಗಳೂರು ಕಡೆಯಿಂದ ವೇಗವಾಗಿ ಬಂದ ಹೊಂಡಾ ಸಿಟಿ ಕಾರೊಂದು ನೇರವಾಗಿ ರಸ್ತೆಬಿಟ್ಟು ಕೆಳಗಿಳಿದು ಗೂಡ್ಸ್ ಟೆಂಪೋಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಟೆಂಪೋ ಹೊಟೇಲ್ ನ ಮುಂಭಾಗಕ್ಕೆ ಹಾರಿ ಅಲ್ಲೇ ನಿಲ್ಲಿಸಲಾಗಿದ್ದ ಅಟೋ

ಭಾರತೀಯ ಸಾಂಪ್ರದಾಯಿಕ ಯುದ್ಧ ಕಲೆ ಥಾಂಗ್ – ತಾ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಗ್ರಾಮೀಣ ಪ್ರತಿಭೆ

ಬಂಟ್ವಾಳ: ಮಧ್ಯಪ್ರದೇಶದ ಥಾಂಗ್-ತಾ ಅಸೋಸಿಯೆಷನ್ ವತಿಯಿಂದ‌ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ತಾಂಗ್- ತಾ( ಮಣಿಪುರ ಕಳರಿ ಫೈಟ್) ಚಾಂಪಿಯನ್ ಶಿಪ್ ನಲ್ಲಿ ಸುಂಕದಕಟ್ಟೆ ನಿರಂಜನಾನಂದ ಸ್ವಾಮಿ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಪ್ರಥಮ‌ ವರ್ಷದ ಡಿಪ್ಲೋಮ ವಿದ್ಯಾರ್ಥಿ ಸತೀಶ್ ಎಸ್. ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅ.5 ರಿಂದ ಅ.7 ರವರೆಗೆ ತಾಂಗ್- ತಾ ಫೆಡರೇಷನ್ ಆಫ್ ಇಂಡಿಯದ ಸಹಕಾರದೊಂದಿಗೆ ನಡೆದ ಈ

ಮಂಗಳೂರು: ಸಾಮಾಜಿಕ ಮುಂದಾಳು ಮುಮ್ತಾಜ್ ಆಲಿ ಮೃತದೇಹ ಪತ್ತೆ

ಮರ್ಮ ರೀತಿಯಲ್ಲಿ ನಾಪತ್ತೆಯಾಗಿದ್ದ ಮಂಗಳೂರು ಬಡಗಣ ಕ್ಷೇತ್ರದ ಮಾಜೀ ಶಾಸಕ ಮೊಯ್ದಿನ್ ಬಾವಾ ಅವರ ಸಹೋದರ ಮಮ್ತಾಜ್ ಆಲಿ ಖಾನ್ ಅವರ ಮೃತ ದೇಹವು ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಪಕ್ಕದಲ್ಲೇ ಪತ್ತೆಯಾಗಿದೆ. ಅವರ ಕಾರು ಅಪಘಾತ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಕೀ ಮತ್ತು ಮೊಬಾಯಿಲ್ ಕೂಡ ಸಿಕ್ಕಿತ್ತು. ಮಮ್ತಾಜ್ ಆಲಿ ಖಾನ್ ತಾಕೊಲೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿತ್ತು. ರಕ್ಷಣಾ ತಂಡಗಳು ಕೂಡಲೆ ಹುಡುಕಾಟದಲ್ಲಿ ತೊಡಗಿದರೂ ಒಂದು ದಿನದಷ್ಟು ಕಾಲ

ವಿಟ್ಲ: ಕೇಪುನಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ವಿಟ್ಲ: ರವಿವಾರ ಸಂಜೆ ಗುಡುಗು- ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಕೇಪುನಲ್ಲಿ ಮನೆಗೆ ಸಿಡಿಲು ಬಡಿದು ಹಾನಿಯಾಗಿರುವ ಜೊತೆಗೆ ನರಿಕೊಂಬುವಿನಲ್ಲಿ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಕೇಪು ಗ್ರಾಮದ ಕೋಡಂದೂರಿನಲ್ಲಿ ಜಯರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ. ಅಳಿಕೆ ಗ್ರಾಮದ ಅರುಂಬು ನಾರಾಯಣ ಮೂಲ್ಯ ಅವರ ಮನೆಗೆ ಸಿಡಿಲು ಬಡಿದು ಗೋಡೆಗೆ ಹಾನಿಯಾಗಿದೆ.

ವಿಟ್ಲ: ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

ವಿಟ್ಲ : ಭಾನುವಾರ ವಿಟ್ಲ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದೆ. ಈ ವೇಳೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ ವೇಳೆ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲೇ‌ ಇದ್ದ ಯುವಕರು ನದಿಯ ಪ್ರವಾಹವನ್ನೂ ಲೆಕ್ಕಿಸದೆ ಹಾರಿ ಈಜಾಡಿಕೊಂಡು ಹೋಗಿ

ಮಂಗಳೂರು: ಕಪಿತಾನಿಯೋ ಕ್ರೀಡಾಂಗಣದಲ್ಲಿ ದ.ಕ. ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಕಪಿತಾನಿಯೋ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟವು ಕಪಿತಾನಿಯೋ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವದ ಉಪನಿರ್ದೇಶಕರಾದ ಜಯಣ್ಣ ಸಿ.ಡಿ. ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಪಿತಾನಿಯೋ ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಪ್ರೆಸಿಲ್ಲ ಮಿನೇಜಸ್ ವಹಿಸಿದ್ದರು.

ಮಂಗಳೂರು: ಅ.8 ರಂದು ದಸರಾ ಬಹುಭಾಷಾ ಕವಿಗೋಷ್ಠಿ

ಮಂಗಳೂರು : ದಸರಾ ಬಹುಭಾಷಾ ಕವಿಗೋಷ್ಠಿಯು ಅ.8ರ ಮಂಗಳವಾರ ಅಪರಾಹ್ನ 3.00 ಗಂಟೆಗೆ ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಮೂರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ

ಮಂಗಳೂರು: ಶ್ರೀ ರಾಮಕೃಷ್ಣ ಶಾಲೆಯಲ್ಲಿ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಮಂಗಳೂರಿನ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಶಾಲೆಯ ಅಡಿಟೋರಿಯಂನಲ್ಲಿ ಸಂಭ್ರಮದಿಂದ ಆಚರಿಸಿದರು. ಶಾಲೆಯ ಪ್ರಾಂಶುಪಾಲರಾದ ಡಾ. ಪ್ರೆಸಿಲ್ಲಾ ಮತ್ತು ಉಪಪ್ರಾಂಶುಪಾಲರಾದ ರೂಪಾ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಇಬ್ಬರು ಮಹಾತ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಾಲೆಯ

ಕೊಲ್ಯ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ಎಂಬಲ್ಲಿ ಬೆಳಕಿಗೆ ಬಂದಿದೆ.ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತಪಟ್ಟವರು. ಅ.4ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮನೆ ಸುತ್ತಮುತ್ತಲೂ , ಸಂಬಂಧಿಕರ