ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವೈಟ್ ಬೋರ್ಡ್ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಸುನೀಲ್ ಕುಮಾರ್ ಬಜಾಲ್ , ಪೊಲೀಸ್ ಇಲಾಖೆ ಹಾಗೂ ಆರ್ ಟಿ ಓ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು, ಇಲ್ಲದ್ರೆ ಆರ್ ಟಿಓ ಕಚೇರಿ ಮುತ್ತಿಗೆ ಹಾಕುವ ಅನಿವಾರ್ಯ ಬರುತ್ತೆ ಎಂದು
ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಉಡುಪಿ ಜಿಲ್ಲೆಯ ಅಲ್ಲಲ್ಲಿ ಕೃತಕ ನೆರೆ ಉಂಟಾಗಿದೆ. ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷವೂ ಇಲ್ಲಿ ನೆರೆಹಾವಳಿಯ ಸಮಸ್ಯೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯೇ ಮನೆಯವರನ್ನ ಸುರಕ್ಷಿತ
ಉಳ್ಳಾಲದ ಮದನಿ ನಗರದಲ್ಲಿ ಕಂಪೌoಡ್ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆಗೆ ಸ್ಪೀಕರ್ ಖಾದರ್ ಅವರ ಜೊತೆಗಿದ್ದರು.ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರಾ.ಪಂ ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್‌ಗಳನ್ನು ಸರ್ವೇ ನಡೆಸಲು ಸೂಚಿಸಲಾಗಿದೆ. ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ.
ಭಾರತೀಯ ಗ್ರಾಹಕರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ದ್ವಿಚಕ್ರವಾಹನಗಳ ಮಾರಾಟ ಮತ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್‌ನ ವಿಡಾ ಹಬ್ ಎಕ್ಸ್‌ಕ್ಲೂಸಿವ್ ನೂತನ ಎಲೆಕ್ಟ್ರಿಕ್ ಶೋರೂಂ ಮಂಗಳೂರಿನ ವೆಲೆನ್ಸಿಯಾದಲ್ಲಿ ಲೋಕಾರ್ಪಣೆಗೊಂಡಿತು. ದೇಶದ ಅತ್ಯುನ್ನತ ದ್ವಿಚಕ್ರವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಹೀರೋ ಮೋಟೋಕಾರ್ಪ್ ಗ್ರಾಹಕರ ಮನೆಮಾತಾಗಿದೆ. ಪರಿಸರ ಸ್ನೇಹಿ ಹಾಗೂ ಇಂದಿನ ಗ್ರಾಹಕರಿಗೆ ಅಗತ್ಯವಾಗಿರುವ
ನಮ್ಮೂರಿನ ಇಲ್ಲವೇ ಯಾವುದೇ ಒಂದು ಊರಿನ ಚಿತ್ರ ಅಲ್ಲವೇ ನೆಲಪಟ ಬಿಡಿಸಿದರೆ ಅದರಲ್ಲಿ ನೀವು ಇಲ್ಲವೇ ನಾವೊಂದು ಬೊಟ್ಟು.ಕರ್ನಾಟಕದ ಅಥವಾ ಭಾರತದ ಭೂಪಟ ಬರೆದರೆ ಪೇರೂರು ಇಲ್ಲವೇ ನಿಮ್ಮೂರು ಒಂದು ಬೊಟ್ಟು. ನಮ್ಮ ಲೋಕ ಭೂಪಟದಲ್ಲಿ ಕರ್ನಾಟಕ ಒಂದು ಬೊಟ್ಟು. ನೇಸರ ಸಂಸಾರದ ಚಿತ್ರದಲ್ಲಿ ಭೂಮಿಯೇ ಒಂದು ಬೊಟ್ಟು. ನಮ್ಮ ಬೆಂಗದಿರ ಕುಟುಂಬದಲ್ಲಿ ಎಂಟು ಗ್ರಹಗಳಿರುವುದು ನಮಗೆ ಗೊತ್ತು. ಆದರೆ ಹನ್ನೆರಡು ಗ್ರಹಗಳು ಇದ್ದು ನಾಲ್ಕನ್ನು ಸಣ್ಣದೆಂದು ಹೊರಗಿಡಲಾಗಿದೆ. ಇತರ
ಪುತ್ತೂರಿನ ಬನ್ನೂರು ಜೈನರ ಗುರಿಯಲ್ಲಿ ಭಾರೀ ಮಳೆಗೆ ಧರೆ ಕುಸಿತಗೊಂಡು ಮನೆ ಹಾನಿಗೊಳಗಾಗಿದ್ದು ,ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಶಾಸಕರು ಮನೆಯ ಮಾಲಿಕ ಮಜೀದ್ ರವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಶಾಸಕರು ಬೆಂಗಳೂರಿನಲ್ಲಿದ್ದು ಘಟನಾ ಸ್ಥಳಕೆ ಶಾಸಕರ ಕಚೇರಿ ಸಿಬಂದಿಗಳು ಭೇಟಿ ನೀಡಿದ್ದು ಕುಟುಂಬಕ್ಕೆ ಕರೆಮಾಡಿದ ಶಾಸಕರು ಸಾಂತ್ವನ ಹೇಳಿದ್ದು ಸರಕಾರದಿಂದ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಮೂಡುಬಿದಿರೆ : ಕಡಂದಲೆ ಗ್ರಾಮ ವ್ಯಾಪ್ತಿಯ ಬಾರಬೆಟ್ಟುವಿನ ಅಣ್ಣಿ ಎಂಬವರ ಮನೆ ಮೇಲೆ ಬುಧವಾರ ಸಂಜೆ ಭಾರೀ ಗಾತ್ರದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು. ಸ್ಥಳಕ್ಕೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಿನೇಶ್ ಕಂಗ್ಲಾಯಿ, ಪಿಡಿಓ ರಕ್ಷಿತಾ, ವಿಎ ಅನಿಲ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು.
ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ದುರಂತ ಸಾವನ್ನಪ್ಪಿದ ಘಟನೆ ನಗರದ ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ಬಳಿ ನಡೆದಿದೆ. ಪುತ್ತೂರು ರಾಮಕುಂಜ ನಿವಾಸಿ ದೇವರಾಜ್ ಗೌಡ(46), ಹಾಸನ ಜಿಲ್ಲೆಯ ಆಲೂರು ಮೂಲದ ರಾಜು (50) ಮೃತರು. ಇವರು ರೊಸಾರಿಯೋ ಸ್ಕೂಲ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಇವರ ಮನೆ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಎಂದಿನಂತೆ ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಚಾಲಕ ರಾಜು
ತೊನ್ನು ಏನಿದರ ಮರ್ಮ? ತೊನ್ನು ಎನ್ನುವುದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ಆಂಗ್ಲಭಾಷೆಯಲ್ಲಿ ಈ ರೋಗವನ್ನು ‘ವಿಟಿಲಿಗೊ’ ಎಂದು ಕರೆಯುತ್ತಾರೆ. ಈ ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಅದೇ ರೀತಿ ತೊನ್ನು ರೋಗಕ್ಕೂ ಕುಷ್ಠ ರೋಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತೊನ್ನು ರೋಗ ಯಾವುದೇ ವಯಸ್ಸಿನಲ್ಲಿ, ಯಾವುದೇ ಜಾತಿಯ, ಧರ್ಮದ ಮತ್ತು ಲಿಂಗದ ವ್ಯಕ್ತಿಗೆ ಬರಬಹುದು.
ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ. ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ




























