ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಅವರು ಶಿವಮೊಗ್ಗದ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು. ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರು
ಬಂಟ್ವಾಳ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದ್ದು ಮುಂದೆ ನಡೆಯುವ ವಿಧಾನ ಪರಿಷತ್ ಚುನಾವಣೆ ಸರಕಾರದ ಬಗ್ಗೆ ಜನಾಭಿಪ್ರಾಯ ತಿಳಿಸುವ ಚುನಾವಣೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ವ್ಯಾಖ್ಯಾನಿಸಿದರು. ಅವರು ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್‍ನ ಚುನಾವಣೆಯ ಮೌಲ್ಯಮಾಪನವನ್ನು ಮಾಡಲಿದ್ದು
ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ನೀಡಲಾಗುವ ಅಡಕೆ ಅಡಮಾನ ಯೋಜನೆಗೆ ಪ್ರಸ್ತುತ ಕಂಟಕವೊಂದು ನಿರ್ಮಾಣವಾಗಿದೆ. ಪುತ್ತೂರು ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಇಲ್ಲ. ಹಾಗಾಗಿ ಇಲ್ಲಿ ಅಧಿಕಾರಿಗಳ ಕಾರುಬಾರು. ಹಲವು ವರ್ಷಗಳಿಂದ ಪುತ್ತೂರು ಎಪಿಎಂಸಿಗೆ ಕಾರ್ಯದರ್ಶಿಯೇ ಇರಲಿಲ್ಲ. ಇದೀಗ ಹಲವು ಸಮಯದ ಹಿಂದೆ ಕಾರ್ಯದರ್ಶಿ ಹುದ್ದೆಗೆ ಖಾಯಂ ಅಧಿಕಾರಿಯೊಬ್ಬರು ಬಂದಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಪುತ್ತೂರು ತಹಶೀಲ್ದಾರ್ ಕುಂಞ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ದೊಡ್ಡ ದೊಡ್ಡ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಮೊಗವೀರಪಟ್ಟಣದಲ್ಲಿ ಮೀನುಗಾರಿಕೆಗೆಂದು ಹಾಕಿದ್ದ ಬಲೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಕಲ್ಲಿಗೆ ಸಿಲುಕಿ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿತ್ತು. ಈ ನಡುವೆ ಸ್ಥಳೀಯ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಲಿದ್ದ ಕೆಲವು ದೋನಿಗಳು ಸಮುದ್ರದ ಅಲೆಗಳ ಕಾರಣದಿಂದ ಸಮುದ್ರದದ ದಡಕ್ಕೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಸಂಸ್ಥೆ ಅರ್ಬನ್ ಕ್ರೂಸರ್ ಟೈಸರ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಉಡುಪಿಯ ಉದ್ಯಾವರದ ಯುನೈಟೆಡ್ ಟೊಯೊಟಾ ಕಾರು ಶೋರೂಂನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಸಾಣೂರುನಲ್ಲಿ ಬಸ್ಸು ನಿಲ್ದಾಣಕ್ಕೆ ಜಾಗ ಕಾದಿರಿಸದೆ ಇರುವುದರಿಂದ ಪ್ರಯಾಣಿಕರು ರಸ್ತೆಯಲ್ಲಿ ಬಿಸಿಲು ಮಳೆಗೆ ಮೈಯೊಡ್ಡಿ ನಿಲ್ಲುವ ಕಠಿಣ ಪರಿಸ್ಥಿತಿ ಉಂಟಾಗಿದೆ. ಸಾಣೂರು ಗ್ರಾಮದ ಪುಲ್ಕರಿ ಬೈಪಾಸನಿಂದ ಮರತಂಗಡಿ ಸಾಣೂರು ಪದವಿಪೂರ್ವ ಕಾಲೇಜಿನವರೆಗೆ ಸಾಣೂರು ಸೇತುವೆ ಬಳಿ ಸುಮಾರು 500 ಮೀಟರ್ ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿ 4 ಬೃಹತ್ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಹಳೆ ಬಸ್ಸು
ಪುತ್ತೂರು: ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯಲ್ಲಿ ವಿಶೇಷ ಗಮನಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ. ಗರಿಷ್ಠ ಪ್ರಮಾಣದ ಮತದಾನದೊಂದಿಗೆ ಎರಡೂ ಅಭ್ಯರ್ಥಿಗಳ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ, ಶಿಕ್ಷಕರ ಕ್ಷೇತ್ರದ ದ.ಕ. ಜಿಲ್ಲಾ ಚುನಾವಣಾ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಪುತ್ತೂರಿನ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನೈರುತ್ಯ ಪದವೀಧರ ಮತ್ತು
2023ರಲ್ಲಿ ಪ್ರಪಂಚದಲ್ಲಿ 1,153 ಜನರಿಗೆ ಮರಣದಂಡನೆ ನೆರವೇರಿಸಿದ್ದು ಇದು ದಶಕದಲ್ಲೇ ಅತಿ ಹೆಚ್ಚು ಎಂದು ಲಂಡನ್ ಮೂಲದ ಅಮ್ನೆಸ್ಟಿ ಇಂಟರ್ನಾ್ಯಶನಲ್ ಹೇಳಿದೆ. ಇಷ್ಟೊಂದು ಮರಣದಂಡನೆ ನೆರವೇರಿರುವುದು 2015ರ ಬಳಿಕ ಅತಿ ಹೆಚ್ಚಿನದಾಗಿದೆ. 2023ರಲ್ಲಿ ಮರಣದಂಡನೆ ನೆರವೇರಿದ ಪ್ರಮಾಣವು 2022ಕ್ಕಿಂತ 30 ಶೇಕಡಾ ಹೆಚ್ಚು. ಮರಣದಂಡನೆ ಶಿಕ್ಷೆ ತೀರ್ಪು ನೀಡಿಕೆ ಕೂಡ 2023ರಲ್ಲಿ 20 ಶೇಕಡಾ ಅಧಿಕರಿಸಿದೆ ಎಂದು ಅಮ್ನೆಸ್ಟಿ ಇಂಟರ್ನಾ್ಯಶನಲ್ ಹೇಳಿದೆ. ಹಾಗಾದರೂ
ಪ್ರಚಾರ ನಡೆಸಬಾರದ 48 ಗಂಟೆಗಳ ಕಾಲ ಧ್ಯಾನ ಮಾಡುವ ಮೋದಿಯವರ ಕಾರ್ಯವು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಜೂನ್ 1ರಂದು ಮೋದಿಯವರ ವಾರಣಾಸಿ ಕ್ಷೇತ್ರಕ್ಕೂ ಸೇರಿ ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಅದರಲ್ಲಿ ಲಾಭ ಪಡೆಯಲು ಪ್ರಧಾನಿ ಮೋದಿಯವರು ಪ್ರಚಾರ ಮಾಡಬಾರದ 48 ಗಂಟೆಗಳ ಸದ್ದಿಲ್ಲದ ಕಾಲವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಮತದಾರರ ಮೇಲೆ ಧಾರ್ಮಿಕ
ಮೂಡುಬಿದಿರೆ: ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅವರು ಶಿವರಾಮ ಕಾರಂತ ಪ್ರತಿಷ್ಠಾನ ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ 2023ನೇ




























