Home Archive by category Fresh News (Page 5)

ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ

ಕಾಪು: ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಉಡುಪಿ ಕಂಬಳ ನಡೆಯಲ್ಲಿದ್ದು ಇದರ ಪೂರ್ವಭಾವಿ ಸಭೆ ದಿನಾಂಕ 23-02-2026 ಸೋಮವಾರ ದಂದು ಶಾಂಭವಿ ಹೋಟೆಲ್ ನಲ್ಲಿ ನಡೆಯಿತು. ಸಭೆಯಲ್ಲಿ ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ಇದೇ ತಿಂಗಳ 28 ರಂದು ಪೂರ್ವಾಹ್ನ 11

ಶೈಕ್ಷಣಿಕ ಸಾಧನೆಯಲ್ಲಿ ಸೈಂಟ್ ಅಲೋಶಿಯಸ್‌ನ ಹಳೆ ವಿದ್ಯಾರ್ಥಿ ರಶಾ ಫಾತಿಮಾ

ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿನಿ ರಶಾ ಫಾತಿಮಾ ಅವರು ಕಳೆದ ಡಿಸೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ನಡೆಸಿದ ಸುಧಾರಿತ ಹಣಕಾಸು ನಿರ್ವಹಣೆಯ ವಿಷಯದಲ್ಲಿ ವಿಶ್ವದಲ್ಲಿ 10 ರ್‍ಯಾಂಕ್ ಮತ್ತು ಅಖಿಲ ಭಾರತದಲ್ಲಿ 3ನೇ ರ್‍ಯಾಂಕ್ ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ರಶಾ ಫಾತಿಮಾ ಅವರ ಸಾಧನೆ ವಿಶ್ವವಿದ್ಯಾನಿಲಯಕ್ಕೆ ಮತ್ತು ವಾಣಿಜ್ಯ ಹಣಕಾಸು ಮತ್ತು

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ “ಮಾತೃ ವೈಭವ”: ಸುಗಮ ವಾಹನ ಸಂಚಾರ ವ್ಯವಸ್ಥೆ ,ಪಾರ್ಕಿಂಗ್ ವ್ಯವಸ್ಥೆ ಕುರಿತು ಪೂರ್ವಭಾವಿ ಸಭೆ

ಕಾಪು:ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಧಂತಿ “ಮಾತೃ ವೈಭವ” ಕಾರ್ಯಕ್ರಮ ದಿನಾಂಕ 28-02-2026 ರಿಂದ 02-03-2026 3 ದಿನಗಳ ಕಾಲ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಹಾಗೂ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮಣ್ಣು ಸಾಗಾಣಿಕೆ ಕುರಿತಂತೆ ಸಭೆ

ಕಾಪು:ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಟಿಪ್ಪರ್ ಮಣ್ಣನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಟಿಪ್ಪರ್ ಗಳನ್ನು ಆಡ್ಡಗಟ್ಟುತ್ತಿರುವುದರಿಂದ ನೈಜ ರೈತರು ಹಲವಾರು ಕಡೆ ಸಮಸ್ಯೆ ಎದುರಿಸುತ್ತಿದ್ದು ಈ ಸಂಬಂಧ ಇಂದು ದಿನಾಂಕ 23-02-2026 ರಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಉಡುಪಿ

ವಿಟ್ಲ:ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ

ವಿಟ್ಲ: ಕೊಡಂಗಾಯಿ ಬಳಿಯ ಮೂರುಕಜೆ ಎಂಬಲ್ಲಿ ಮೈತ್ರೆಯೆ ಗುರುಕುಳ ವಿದ್ಯಾಸಂಸ್ಥೆಯಲ್ಲಿನ 10 ನೇ ತರಗತಿಯ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿನಿ ಬೆಂಗಳೂರು ಮೂಲದ ವೈಗ ಲಕ್ಷ್ಮಿ ಎಂಬವರು ನಿನ್ನೆ ಯಿಂದ ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದಾಗ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕೆರೆಯಲ್ಲಿದ್ದ ವಿದ್ಯಾರ್ಥಿನಿಯ ಮೃತದೇಹವನ್ನು

ಮುಕುಂದ್ ರಿಯಾಲ್ಟಿಯ ಹೊಸ ಯೋಜನೆ ‘ರುದ್ರಾಕ್ಷ ಕೊಟ್ಟಾರದ ಇನ್ಫೋಸಿಸ್ ಬಳಿ ಐಷಾರಾಮಿ ಜೀವನದ ಹೊಸ ಅನುಭವ

ಮಂಗಳೂರು: ನಗರದ ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ವಸತಿ ಯೋಜನೆ ‘ರುದ್ರಾಕ್ಷ’ ಹೈ ಲಿವಿಂಗ್ ಲಕ್ಷುರಿ ಹೋಮ್ಸ್, ಕೊಟ್ಟಾರದ ಇನ್ಫೋಸಿಸ್ ಸಮೀಪ ನಿರ್ಮಾಣವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ವಸತಿ ಮತ್ತು ಐಟಿ ಕಾರಿಡಾರ್ ಪ್ರದೇಶದಲ್ಲಿ ನೂತನ ಯೋಜನೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಮೂಲಕ ಆಧುನಿಕ ಶೈಲಿಯಲ್ಲಿ ನಗರ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ. ವೃತ್ತಿಪರರು

ಪೇರಾಲು: ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದಲ್ಲಿ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ

ಮಂಡೆಕೋಲು ಗ್ರಾಮದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ವಿಕ ವಿಧಿ ವಿಧಾನಗಳು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗದೇವರು ಮತ್ತು ಇರುವೆರು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ

ಮಂಡೆಕೋಲು: ಇಂದಿನಿಂದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ

ಸುಳ್ಯ::ಮಂಡೆಕೋಲು ಗ್ರಾಮದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿದ್ದು, ಫೆ. 22ರ ವರೆಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗದೇವರು ಮತ್ತು ಇರುವೆರು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ

ಮಂಗಳೂರು: ನೆಕ್ಸಾ ಮಾಂಡವಿ ಮೋಟಾರ್‍ಸ್‌ನಲ್ಲಿ ಮಾರುತಿ ಸುಝುಕಿಯ “ಇ ವಿಟಾರ” ಕಾರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಮಾಂಡವೀ ಮೋಟಾರ್‍ಸ್‌ನಲ್ಲಿ ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು “ಇ ವಿಟಾರ” ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಸಮಾರಂಭ ನಡೆಯಿತು. ನಗರದ ಗಣ್ಯರು, ಉದ್ಯಮ ವಲಯದ ಪ್ರತಿನಿಧಿಗಳು ಮತ್ತು ವಾಹನ ಪ್ರಿಯರ ಸಮ್ಮುಖದಲ್ಲಿ ನಡೆದ ಈ ಮಹಾ ಅನಾವರಣ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಲಾಂಚ್ ಸಮಾರಂಭವನ್ನು ನೆನಪಿಸುವಂತಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿಕ್ರಮ್ ಪೈ, ಸಮಿಟ್

ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕುಲಾಧಿಪತಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅಸ್ತಂಗತ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ, ಗೌರವಾನ್ವಿತ ಕುಲಾಧಿಪತಿ, ಎ. ಶಾಮರಾವ್ ಫೌಂಡೇಶನ್ ಅಧ್ಯಕ್ಷರು ಮತ್ತು ದೂರದೃಷ್ಟಿಯ ಧೀಮಂತ ನಾಯಕ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರು 17 ಫೆಬ್ರವರಿ 2026ರಂದು ಚೆನ್ನೈನಲ್ಲಿ 88ನೇ ವಯಸ್ಸಿನಲ್ಲಿ ಇಹಲೋಕವನ್ನು ಅಗಲಿದ್ದಾರೆ. 1937ರ ಅಕ್ಟೋಬರ್ 16ರಂದು ಉಡುಪಿ ಜಿಲ್ಲೆಯ ಅಡ್ಕ ಗ್ರಾಮದ ದಿ. ಶ್ರೀ ಎ. ಶಾಮರಾವ್ ಮತ್ತು ದಿ. ಶ್ರೀಮತಿ ಎ. ಇಂದಿರಮ್ಮ ದಂಪತಿಗೆ ಜನಿಸಿದ ಡಾ. ರಾವ್