Home Archive by category Fresh News (Page 822)

ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಜಾಗ ರಾಜಾರೋಷವಾಗಿ ಅತಿಕ್ರಮಣ

ಹಣ, ಅಧಿಕಾರ ಇದ್ದಲ್ಲಿ ಯಾವ ಕಾನೂನುಬಾಹಿರ ಕೃತ್ಯ ಮಾಡಿದರೂ ತಡೆಯುವವರು ಇಲ್ಲ ಎನ್ನುವ ಮನೋಭಾವ ಕೆಲವರಲ್ಲಿದೆ. ಈ ಮನೋಭಾವಕ್ಕೆ ತಕ್ಕಂತೆ ಇಂಥಹ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವ ಅಧಿಕಾರಿ ವರ್ಗವೂ ಸುಮ್ಮನಿದ್ದರೆ, ಇಂಥವರ ದಬ್ಬಾಳಿಕೆಯೂ ಹೆಚ್ಚಾಗುತ್ತದೆ. ಇಂಥಹುದೇ ಒಂದು ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ರಸ್ತೆ

ಪುತ್ತೂರಿನ ಮೊಟ್ಟೆತಡ್ಕದಲ್ಲಿ ನಡೆದ ಅಪಘಾತ : ಸಹ ಸವಾರ ಮೃತ್ಯು

ಪುತ್ತೂರು: ನ.9ರಂದು ರಾತ್ರಿ ಮೊಟ್ಟೆತ್ತಡ್ಕ ಸಮೀಪ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರ ಪೈಕಿ ಸ್ಕೂಟರ್ ಹಿಂಬದಿ ಸವಾರ ಕುರಿಯ ನಿವಾಸಿ ವಸಂತ ರೈ ಬಳ್ಳಮಜಲು ಅವರು ಮೃತಪಟ್ಟಿದ್ದಾರೆ. ಪುತ್ತೂರನಲ್ಲಿ ಮೇಸ್ತ್ರಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆಂದು ಕುರಿಯ ನಿವಾಸಿ ನಾರಾಯಣ ನಾಯ್ಕ ಬಳ್ಳಮಜಲು ಅವರು ಚಲಾಯಿಸುತ್ತಿದ್ದ ಆಕ್ಟಿವಾ ಸ್ಕೂಟರ್ ಮೊಟ್ಟೆತ್ತಡ್ಕ ತಲುಪುತ್ತಿದ್ದಂತೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ

ಹೆಮ್ಮಾಡಿ ರಿಕ್ಷಾ ಚಾಲಕರಿಂದ ನಟ ಪುನೀತ್‍ಗೆ ಅಶ್ರುತರ್ಪಣ || Puneeth Rajkumar

ಕುಂದಾಪುರ: ನಟ ಪುನೀತ್ ರಾಜಕುಮಾರ್ ಸಮಾಜಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿದವರು. ಏನೂ ಪ್ರಚಾರ ಬಯಸದೆ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ ಅಪರೂಪದ ವ್ಯಕ್ತಿತ್ವದ ಪುನೀತ್ ಪರಿಪೂರ್ಣ ವ್ಯಕ್ತಿತ್ವ ಅನಾವರಣಗೊಂಡದ್ದೆ ಅವರ ಸಾವಿನ ಬಳಿಕ ಎನ್ನುವುದು ದುರಂತ ಎಂದು ಶಿಕ್ಷಕ ಉದಯ್ ಬಳೆಗಾರ್ ಹೇಳಿದರು. ಅವರು ಮಂಗಳವಾರ ಸಂಜೆ ಇಲ್ಲಿನ ಹೆಮ್ಮಾಡಿ ರಿಕ್ಷಾ ನಿಲ್ದಾಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ, ಇತ್ತೀಚೆಗಷ್ಟೇ ಅಗಲಿದ ನಟ

ಅಜಯ್‌ ಕೌಶಿಕ್ ನೊರೋನ್ಹಾಗೆ ಪಿಹೆಚ್‌ಡಿ ಪದವಿ

ಮುಕ್ಕ:  ಶ್ರೀನಿವಾಸ್‌ ವಿಶ್ವವಿದ್ಯಾಲಯವು ಅಜಯ್‌ ಕೌಶಿಕ್ ನೊರೋನ್ಹಾರಿಗೆ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ನೀಡಿದೆ. ಎ ಸ್ಟಡಿ ಆನ್‌ ಇಪ್ಲಿಮೆಂಟೇಶನ್‌ ಆಫ್‌ ಲೀನ್‌ ಸಿಕ್ಸ್‌ ಸಿಗ್ಮಾ ಸ್ಟ್ರಾಟರ್ಜಿ ಇನ್‌ ಡೆಂಟಲ್‌ ಹಾಸ್ಪಿಟಲ್‌ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಈ ಪದವಿಯನ್ನು ನೀಡಲಾಗಿದೆ. ಇವರು ಶ್ರೀನಿವಾಸ್‌ ವಿಶ್ವವಿದ್ಯಾಲಯದ ಡಾ. ಸುಮಾ ಭಟ್‌ ಹಾಗೂ ಸಂತ ಜೋಸೆಫ್‌ ಇಂಜಿನಿಯರಿಂಗ್‌ ಕಾಲೇಜಿನ ಡಾ. ಶ್ರೀರಂಗ ಭಟ್‌ ರವರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ : ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಸನ್ಮಾನ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ರಾಮಚಂದ್ರ ಬೈಕಂಪಾಡಿ ಅವರ ಗಣನೀಯ ಸೇವೆಯನ್ನು ಗುರುತಿಸಿ ಕರ್ನಾಟ ರಾಜ್ಯವು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆ ಹಿನ್ನೆಲೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೊಗವೀರ ಮಾಸಪತ್ರಿಕೆಯ ಸಂಪಾದಕರು

ವಿಜಯಾ ಮಹೇಶ್ ಅವರ ಪುಸ್ತಕ ಬಿಡುಗಡೆ – ಐವರಿಗೆ ವಿಜಯ ಪ್ರಶಸ್ತಿ ಪ್ರದಾನ 

ಬೆಂಗಳೂರು:  ಇತಿಹಾಸದ ನೈಜ ಚಿತ್ರಣವನ್ನು ಕಟ್ಟಿಕೊಡುವ ಅಗತ್ಯ ಹಿಂದೆಂದಿಗಿಂತ ಇದೀಗ ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ರಾಜ್ಯ ಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ. ಕನಕಪುರ ರಸ್ತೆಯ ಕಾನ್ಷಿ ಫೌಂಡೇಷನ್ ಆವರಣದಲ್ಲಿಂದು ಲೇಖಕಿ, ಸಂಶೋಧಕಿ, ಇತಿಹಾಸಕಾರ್ತಿ ವಿಜಯಾ ಮಹೇಶ್ ಅವರ ನಾಲ್ಕಡಿ ಭಾಷಣಗಳ ಸಂಗ್ರಹ, ನೆಲದ ಮಾತು, ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದು ಏಕೆ?, ಅಂಬೇಡ್ಕರ್ ಮತ್ತು ಗಾಂಧಿ ಮುಖಾಮುಖಿ ಪುಸ್ತಕಗಳನ್ನು ರಾಜ್ಯಸಭಾ

ಪದ್ಮಶ್ರೀ ಪುರಸ್ಕಾರಗೊಂಡ ಹಾಜಬ್ಬ ಶಾಲೆ ಹಾಗೂ ಮನೆಯಲ್ಲಿ ಸಂಭ್ರಮ

ಹರೇಕಳ ಹಾಜಬ್ಬ ಅವರು ಕಟ್ಟಿ ಬೆಳೆಸಿದ ನ್ಯೂಪಡ್ಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲೆ ಯಜಮಾನನಿಗೆ ಪ್ರಶಸ್ತಿ ಪ್ರಧಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳುವ ಮೂಲಕ ಗೌರವ ಸಮರ್ಪಿಸಿದರು. ಮನೆಯಲ್ಲಿ ಪತ್ನಿ , ಮೂವರು ಮಕ್ಕಳು ಹಾಗೂ ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ಪದ್ಮಶ್ರೀ ಪುರಸ್ಕಾರ ಪಡೆಯುವುದನ್ನು ನೋಡಿ ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿ ಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ

ಸುಬ್ರಹ್ಮಣ್ಯ ಪೊಲೀಸ್ ಠಾಣಾ ಕಾಮಗಾರಿ ಶೀಘ್ರ ಪ್ರಾರಂಭ : ಗೃಹ ಸಚಿವ ಅರಗ ಜ್ಞಾನೇಂದ್ರ

ಕಡಬ: ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಲವರ್ಧನೆಗೆ ನಮ್ಮ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಸುಮಾರು ೧೦೦ ಪೊಲೀಸ್ ಠಾಣೆಗಳ ಹೊಸ ಕಟ್ಟಡವನ್ನು ೨೦೦ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ರೂ. ೧ ಕೋಟಿ ಅನುದಾನ ಇಡಲಾಗಿದೆ ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಸೋಮವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬೇಟಿ ನೀಡಿ ಪತ್ರಕತ್ರರೊಂದಿಗೆ ಮಾತನಾಡಿದರು.

ಕುಕ್ಕೆ ಸುಬ್ರಹ್ಮಣ್ಯ: ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸೋಮವಾರ ಸಾಯಂಕಾಲ ಬೇಟಿ ನೀಡಿದರು.ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಗೃಹ ಸಚಿವರು ಶ್ರೀ ದೇವರ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ದೇವಳದ ಹೊರಾಂಗಣದಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಂಡರು. ಕಾರ್ಯನಿರ್ವಹಣಾ ಅಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ,

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ದ.ಕ. ಜಿಲ್ಲಾಡಳಿತದಿಂದ ಸನ್ಮಾನ

ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ, ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಹರೇಕಳ ಹಾಜಬ್ಬ ಅವರನ್ನು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಅಧಿಕಾರಿಗಳು ಉಪಸ್ಥಿತರಿದ್ದರು.