Home Archive by category Fresh News (Page 824)

94ನೇ ವಸಂತಕ್ಕೆ ಕಾಲಿಟ್ಟ ಎಲ್‌.ಕೆ ಅಡ್ವಾಣಿ: ಮೋದಿ ಸೇರಿದಂತೆ ಗಣ್ಯರ ಶುಭಾಶಯ

ನವದೆಹಲಿ: ಮಾಜಿ ಉಪಪ್ರಧಾನಿ, ಬಿಜೆಪಿಯ ಭೀಷ್ಮ ಎಂದೇ ಪರಿಗಣಿಸಲ್ಪಟ್ಟಿರುವ ಎಲ್ ಕೆ ಅಡ್ವಾಣಿ ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರುಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು

ಅಕ್ಷರ ಸಂತ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

 ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ `ಪದ್ಮಶ್ರೀ’ ಇಂದು ಪ್ರದಾನ ಮಾಡಲಾಯಿತು.ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಜರುಗಿದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಮ್ಮ ಎಂದಿನ ಸರಳ ಉಡುಗೆಯಲ್ಲಿ ವೇದಿಕೆಯೇರಿದ ಹಾಜಬ್ಬ ಪ್ರಶಸ್ತಿ ಸ್ವೀಕರಿಸಿದರು. ಬಡಮಕ್ಕಳಿಗಾಗಿ ಸ್ವಂತ ದುಡಿಮೆಯಲ್ಲಿ ಶಾಲೆ ನಿರ್ಮಿಸಿದ, ನೂರಾರು

ಯಶಸ್ವಿ `ಆಪರೇಷನ್ ಚೀತಾ’ ಕಾರ್ಯಾಚರಣೆ

ಕಡಬ : ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಅವರ ಮನೆ ಬಳಿಯ ಬಾವಿಯ ದಂಡೆಯ ಮೇಲೆ ಕುಳಿತಿದ್ದ ಕೋಳಿಯನ್ನು ಬೇಟೆಯಾಡಲು ಹೋದ ಚಿರತೆಯೊಂದು ನೀರು ತುಂಬಿದ ಬಾವಿಗೆ ಬಿದ್ದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ . ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬಂದಿಗಳು ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸತತ 3 ತಾಸುಗಳ ಕಾರ್ಯಾಚರಣೆ ನಡೆಸಿಚಿರತೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತುವ ಯಶಸ್ವಿಯಾಗಿದ್ದಾರೆ . ಬಾವಿಯ

ಉಳ್ಳಾಲ ದರ್ಗಾದಲ್ಲಿ 21ನೇ ಉರೂಸ್

ದಕ್ಷಿಣ ಭಾರತದ ಅಜ್ಮಿರ್ ಎಂದೇ ಪ್ರಸಿದ್ಧಗೊಂಡ ಇತಿಹಾಸ ಪ್ರಸಿದ್ಧ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಝಮಾನ್ ಸಯ್ಯದ್ ಶರೀಫುಲ್ ಮದನಿ ರವರ ಹೆಸರಲ್ಲಿ 21ನೇ ಉರೂಸ್ ಸಮಾರಂಭ ಡಿಸೆಂಬರ್ 23 ರಂದು ನಡೆಯಲಿದ್ದು, ಇದರ ಪ್ರಚಾರ ಸಮಾರಂಭ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಜನತಾದಳ ರಾಷ್ಟ್ರೀಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಬಿ. ಎಂ ಫಾರೂಕ್ ರವರು ಹಾಗೂ ಶಾಸಕರಾದ ಯು. ಟಿ ಖಾದರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಈ

ಐಕಳ ಹರೀಶ್ ಶೆಟ್ಟಿವರಿಗೆ ಮುಲ್ಕಿ ಸುಂದರ ರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಸಮಾಜ ಸೇವಕ ಐಕಳ ಹರೀಶ್ ಶೆಟ್ಟಿ ಅವರು ದಿವಂಗತ ಮುಲ್ಕಿ ಸುಂದರ ರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ನವಂಬರ್ 7 ರಂದು ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರು ಬಂಟರ ಸಂಘದ ಆಶ್ರಯದಲ್ಲಿ ವಿಜಯ ನಗರದಲ್ಲಿರುವ ಶ್ರೀಮತಿ ರಾಧಾ ಭಾಯಿ ತಿಮ್ಮಪ್ಪ ಭಂಡಾರಿ ಸಭಾ ಭವನದಲ್ಲಿ ದೀಪಾವಳಿ ಸಡಗರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು ಸಮಾಜದ ನಮ್ಮ ನಿಮ್ಮೊಳಗಿನ ಅಪರೂಪದ ಹಾಗೂ ಅಸಾಮಾನ್ಯ ಸಾಧಕ,ಸೌಮ್ಯ

ಸಾವರ್ಕರ್ ವಿಜೃಂಭಣೆಯ ಹಿಂದೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆಮಾಚುವ ಹುನ್ನಾರ : ಮುನೀರ್ ಕಾಟಿಪಳ್ಳ ಆರೋಪ

ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ಪ್ರಸ್ತಾಪದ ಹಿಂದೆ ಬಿಜೆಪಿಯ ಹಿಡೆನ್ ಅಜೆಂಡಾ ಅಡಗಿದೆ. ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಜೊತೆಗೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆ ಮಾಚುವ ಹುನ್ನಾರವೂ ಇದರ ಹಿಂದೆ ಇದೆ ಎಂದು ಸಿಪಿಐಎಂ ‌ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ ಹೇಳಿದರು. ಅವರು ನಗರದ ಬಜಾಲ್ ನ ಭಗತ್ ಸಿಂಗ್ ಭವನದಲ್ಲಿ ಜರುಗಿದ 23ನೇ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ: ಜೆಎಲ್ಆರ್ ಅಧ್ಯಕ್ಷ  ಅಪ್ಪಣ್ಣ

ಮ್ಯಾಂಚೆಸ್ಟರ್ ಹಾಗೂ ಬರ್ಮಿಂಗ್ಹ್ಯಾಮ್ ನಗರಗಳಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶದ ಅಂಗವಾಗಿ ನಡೆದ ಸಭೆಯಲ್ಲಿ ಕರ್ನಾಟಕ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ರವರು ಉಪಸ್ಥತರಿದ್ದರು.ಇವರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಜಯ್ ಶರ್ಮ, ನಿರ್ದೇಶಕರಾದ ಶ್ರೀಮತಿ ಸಿಂಧು ಬಿ ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕರಾದ ಯುವರಾಜ್, ಸ್ಕೃವೇ ಮನು

ನ.8ರಂದು ಲೇಡಿಹಿಲ್‌ನಲ್ಲಿ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಹೊಸ ಮಳಿಗೆ ಉದ್ಘಾಟನೆ

ಚಿನ್ನ ಮತ್ತು ವಜ್ರಾಭರಣಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ನ ಹೊಸ ಮಳಿಗೆ ನವಂಬರ್ 8ರಂದು ನಗರದ ಲೇಡಿಹಿಲ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ  ಉದ್ಘಾಟನೆಗೊಳ್ಳಲಿದೆ. 1947ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಚಿನ್ನಾಭರಣ ಮಳಿಗೆ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ ನೆರೆಹೊರೆಯ ಜಿಲ್ಲೆಯವರಿಗೂ ಚಿರಪರಿಚಿತವಾಗಿದೆ. ಆಭರಣಗಳ ಸುಂದರ ವಿನ್ಯಾಸ ಮತ್ತು ಕಸೂತಿ ಕೌಶಲದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ

ಕಡಬದ ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆ

ಕಡಬ: ಕೋಳಿ ಹಿಡಿಯಲೆಂದು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ.ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆಯ ರಕ್ಷಣಾ ಕಾರ್ಯ ಅರಣ್ಯ ಇಲಾಖೆಯಿಂದ ಆರಂಭಗೊಂಡಿದೆ.

ಐಡಿಯಲ್ ಐಸ್ ಕ್ರೀಮ್ ಮಾಲಕರು ಪ್ರಭಾಕರ ಕಾಮತ್ ನಿಧನ

ನಾಡಿನ ಪ್ರಸಿದ್ಧ ಸಂಸ್ಥೆಯಾಗಿರುವ ಐಡಿಯಲ್ ಐಸ್‍ಕ್ರೀಂ ಸ್ಥಾಪಕರಾದ ಶಿಬರೂರು ಪ್ರಭಾಕರ ಕಾಮತ್ (79) ಶನಿವಾರ ಮುಂಜಾನೆ 3.30ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರು ಅ.29ರಂದು ಬಿಜೈನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ