ನಾಟಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರವಿ ರಾಮಕುಂಜ ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ 66ನೇ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ 15 ವರ್ಷಗಳಿಂದ ತುಳು ನಾಟಕ ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡು
ಮಂಗಳೂರು: ಹೂವಿನ ಮಕರಂದ ಹೀರಿ ಜೇನು ನೊಣ, ಸಿಹಿಯಾದ ಜೇನು ತುಪ್ಪ ತಯಾರಿಸುತ್ತದೆ ಅಂತ ಎಲ್ಲರಿಗೂ ಗೊತ್ತು. ಆದ್ರೀಗ, ಇದೇ ಜೇನು ನೊಣಗಳ ದೇಹದಿಂದ ಉತ್ಪತ್ತಿಯಾಗುವ ವಿಷ, ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಅತ್ಯಂತ ಬೆಲೆಬಾಳುವ ಈ ನೊಣಗಳ ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿ, ಮಂಗಳೂರಿನ ಯುವಕನೊಬ್ಬ ಯಶಸ್ವಿಯಾಗಿದ್ದಾರೆ. ಜೇನು ವಿಷ ಅಂದ್ರೆ ಬೀ ವೇನಮ್ ಪಡೆಯುವ ಯಂತ್ರವನ್ನು ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿರೋದು.
ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ.ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಇವರು ಮೂಲತ: ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಸದ್ಯ ಪೆರಮೊಗರಿನಲ್ಲಿ ವಾಸವಾಗಿದ್ದರು . ಇವರಿಗೆ ಪುಣ್ಚಪ್ಪಾಡಿಯಲ್ಲಿ ತೋಟವಿದ್ದು ಅಲ್ಲಿ ಕೆಲಸ ಮಾಡಿಸಿ ವಾಪಸ್ಸು ಪೆರಮೊಗರುವಿಗೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಕಂಚಿಬೈಲು ಅರ್ಬಿ ಫಾಲ್ಸ್ ಬಳಿಯಲ್ಲಿ ಶೆಡ್ಡ್ ಒಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ನಿನ್ನೆ ನಡೆದಿದ್ದು, ಈ ದುರ್ಘಟನೆಯಲ್ಲಿ ಸಿಡಿಲಿಗೆ ಬಲಿಯಾದಪುತ್ತಿಗೆಯ ನಿವಾಸಿಗಳಾದ ಯಶವಂತ (22) ಮತ್ತು ಮಣಿ ಪ್ರಸಾದ್ (22) ಮನೆಗೆ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್
ಕಡಬ : ಸಾಮಾನ್ಯವಾಗಿ ಹಾವು ಇಲಿಯನ್ನು ತಿನ್ನುವುದನ್ನು ಕೇಳಿದ್ದೇವೆ , ನೋಡಿದ್ದೇವೆ . ಆದರೆ ಇಲ್ಲೊಂದು ಹಾವು ಇಲಿ ಫೈಟ್‍ನಲ್ಲಿ ಇಲಿಯೇ ಹಾವನ್ನು ಹಿಡಿದಳೆದು ನುಂಗಲು ಪ್ರಯತ್ನಪಡುವ ವೀಡಿಯೋವೊಂದು ವೈರಲ್ ಆಗಿದೆ . ಇದು ನಡೆದದ್ದು ಕಡಬ ಸಮೀಪದ ಕಳಾರದಲ್ಲಿ ಇಲ್ಲಿನ ಗಣೇಶ್ ಸ್ಟೋರ್ ಸಮೀಪ ಹಾವು ಮತ್ತು ಇಲಿಯ ಪೈಟ್‍ನಲ್ಲಿ ಕೊನೆಗೆ ಇಲಿಯೇ ಹಾವನ್ನು ಕಚ್ಚಿ ಎಳೆದಾಡುವ ದೃಶ್ಯ ಕಂಡು ಬಂದಿದೆ . ಈ ವಿಶ್ವಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದೆ .
ಲಂಡನ್ ನಗರದಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಳಿಗೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ರವರು ಉದ್ಘಾಟಿಸಿದರು. ಇವರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಜಯ್ ಶರ್ಮ, ನಿರ್ದೇಶಕರಾದ ಶ್ರೀಮತಿ ಸಿಂಧು ಬಿ ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕರಾದ ಯುವರಾಜ್ ರವರು ಭಾಗವಹಿಸಿದ್ದರು. ಕೋವಿಡ್
ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಂಗಳೂರಿನ ಬೊಕ್ಕಪಟ್ಣದ ಅಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಎಸ್. ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ನವೆಂಬರ್ 2ರಿಂದ 1-5ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನಡೆಯಿತು. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿತು. ಬಳಿಕ ಅಧಿಕಾರಿಗಳು ಎಡವಟ್ಟು ಸರಿಪಡಿಸಿದರು.
ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ. ರಾಜೀವ್ ಮೆಂಡನ್ ನಿಧನ ಮಂಗಳೂರು ತಾಲೂಕಿನ ತೊಕ್ಕೊಟ್ಟು ಭಟ್ನಗರ ನಿವಾಸಿ ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ.ರಾಜೀವ್ ಮೆಂಡನ್ (87) ಅವರು ಶನಿವಾರ ನಿಧನರಾದರು .ಅವರು ಒಬ್ಬರು ಮಗಳು ಮತ್ತು ಇಬ್ಬರು ಮೊಮ್ಮಕಳನ್ನು ಅಗಲಿದ್ದಾರೆ. ರಾಜೀವ್ ಮೆಂಡನ್ ಅವರು ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಥಾಪಕರಲ್ಲೊಬ್ಬರು . ವ್ಯಾಯಾಮ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ತೊಕ್ಕೊಟ್ಟು



















