ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಆಟಿ ಸಂಭ್ರಮ ‘ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಮ್ಮ ಶಾಲೆಯ ಹಿರಿಯ ಪೋಷಕರಾದ ಶ್ರೀಮತಿ . ಪುಷ್ಪಾವತಿ ಮಾಣಿಬೆಟ್ಟು , ಶ್ರೀಮತಿ. ಜಯಲಕ್ಷ್ಮಿ ಇವರು ಭಾಗವಹಿಸಿ ಆಟಿಯ ಮಹತ್ವದ ಬಗ್ಗೆ ಪುಟಾಣಿ ಮಕ್ಕಳಿಗೆ ತಿಳಿಸಿಕೊಟ್ಟರು . ಪೋಷಕರೆಲ್ಲರೂ ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ
ಮೂಡುಬಿದಿರೆ: ರಾಷ್ಟ್ರ ನಿರ್ಮಾಣದ ಶಿಲ್ಪಿಗಳು ಶಿಕ್ಷಕರು. ಮೌಲ್ಯಾಧಾರಿತ, ಚಾರಿತ್ರ್ಯವಂತ ವ್ಯಕ್ತಿತ್ವಗಳನ್ನು ರೂಪಿಸುವ ಸಂಕಲ್ಪ ಶಿಕ್ಷಕರಲ್ಲಿರಬೇಕು. ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಕರು ಅಂಧಕಾರವನ್ನು ದೂರಮಾಡಿ ಸಮಾಜವನ್ನು ಪ್ರಕಾಶಮಾನಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿವ೯ಹಿಸುತ್ತಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ವಿದ್ಯಾಗಿರಿಯ ವಿ.ಎಸ್
ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ (NLC) ಆಶ್ರಯದಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರ (ಸ್ಪೀಕರ್) ನೇತೃತ್ವದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅವಕಾಶ ಪಡೆದಿದ್ದಾರೆ. ಕರ್ನಾಟಕದ ವಿಧಾನಸಭೆಯ 224 ಸದಸ್ಯರುಗಳಲ್ಲಿ 14 ಶಾಸಕರು ಆಯ್ಕೆಯಾಗಿದ್ದು ಅದರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ
ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ಶನಿವಾರ ಮಧ್ಯಾಹ್ನ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದು ಸವಾರ ಗಾಯಗೊಂಡಿದ್ದಾರೆ.ನಿಡ್ಡೋಡಿ ನಿವಾಸಿ ವಿನೋದ್ ನಿಡ್ಡೋಡಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ, ಸಂಪಿಗೆ ಎಚ್.ಪಿ ಪೆಟ್ರೋಲ್‌ಬಂಕ್ ಬಳಿ ವಿದ್ಯುತ್ ಕಂಬ ಧರೆಗುರುಳಿದು ಬೈಕ್ ಮೇಲೆ ಬಿದ್ದಿದೆ. ಬೈಕ್‌ನ ಮಧ್ಯಭಾಗ ಜಖಂಗೊಂಡಿದ್ದು, ಸವಾರ ವಿನೋದ್ ಅವರ ಕಾಲಿಗೆ ಗಾಯವಾಗಿದೆ.
ಬೆಂಗಳೂರು, 26 ಜುಲೈ 2025 – “ಬಸ್ತರ್ 1862 ಕೃತಿಯು ವಸಾಹತುಶಾಹಿ ಮತ್ತು ಪ್ರಾದೇಶಿಕ ಕಣ್ಣುಗಳ ಮೂಲಕ ಇತಿಹಾಸವನ್ನು ನೋಡುವ ಮಹತ್ವದ ಕೃತಿಯಾಗಿದೆ. ಈ ಕೃತಿಯು ಕ್ಯಾಪ್ಟನ್ ಗ್ಲಾಸ್‌ಫರ್ಡ್‌ರ ವರದಿ ಮತ್ತು ಮಹಾರಾಜ ಪ್ರವೀರ್ ಚಂದ್ರ ಭಂಜದೇವ್‌ರ ಕಥನದ ಕುರಿತು ಚರ್ಚೆ ಉಂಟುಮಾಡಬಲ್ಲ ಕೃತಿಯಾಗಿದೆ. ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಈ ಈ ಕೃತಿಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ” ಎಂದು ಯುನೆಸ್ಕೋದ ಮಾಜಿ ರಾಯಭಾರಿ ಡಾ. ಚಿರಂಜೀವ್ ಸಿಂಗ್
ಬ್ಯಾಂಕಿಂಗ್’ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 24, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿತ್ 2025’ (Idea Summit 2025) ಅನ್ನು ಆಯೋಜಿಸಲಾಗಿತ್ತು.ಈ ಸಮ್ಮಿತ್’ನ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ವಹಿಸಿದ್ದರು. ಗಣ್ಯ
ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಬೈಂದೂರು ತಾಲೂಕಿನಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿದೆ. ಬೈಂದೂರಿನ ಸೌಪರ್ಣಿಕಾ, ಸುಮನಾವತಿ, ಸಂಕದ ಗುಂಡಿ, ಎಡ ಮಾವಿನ ಹೊಳೆ ತುಂಬಿ ಹರಿಯುತ್ತಿದ್ದು, ನದಿ ಪಾತ್ರ, ನಾಡ, ನಾವುಂದ, ಮರವಂತೆ, ಬಡಾಕೆರೆ ಚಿಕ್ಕಳ್ಳಿ ಪಡುಕೋಣೆ ಆನಗಳ್ಳಿ ಹಳಗೇರಿ ಜನರು ಎಚ್ಚರ ವಹಿಸಬೇಕು ಪಶ್ಚಿಮ ಘಟ್ಟದಲ್ಲಿ ಮಳೆ ಮುಂದುವರಿದರೆ ನೆರೆ ಕಟ್ಟಿಟ್ಟ ಬುತ್ತಿ ಪ್ರತಿ ವರ್ಷ
ಪಡುಹಿತ್ತು ಶ್ರೀ ಜಾರಂದಾಯ ದೈವಸ್ಥಾನ ಸೇವಾ ಸಮಿತಿ (ರಿ.) ಪಡುಬಿದ್ರಿ ಮಹಿಳಾ ಮಂಡಳಿ ಮತ್ತು ಪಡುಹಿತ್ಲು ಜವನೆರ್ ಇವರ ಆಶ್ರಯದಲ್ಲಿದಿನಾಂಕ : 27-07-2025ನೇ ಆದಿತ್ಯವಾರದಂದು ಆಟಿಡೊಂಜಿ ಕೂಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ಪರ್ಧೆಗಳು, ವಿದ್ಯಾರ್ಥಿ ಪ್ರೋತ್ಸಾಹ ಧನ, ಮಹಿಳೆಯರಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು ಹಾಗೂ ಪಡುಹಿತ್ಲು ಜವನೆರ್ ರಿಂದ ಆಟಿದ ವನಸ್ ಮತ್ತು ಬಹುಮಾನ ವಿತರಣೆ
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕದಾಸರ ಕುರಿತು ಕನಕ ಕಾವ್ಯ ವೈಭವ ಎಂಬ ಸಂಗೀತ- ನೃತ್ಯ ರೂಪಕ, ಕನಕದಾಸರ ಕುರಿತು ಉಪನ್ಯಾಸ, ಗಮಕ ವಾಚನ – ವ್ಯಾಖ್ಯಾನ ಒಳಗೊಂಡಂತೆ ಒಂದು ದಿನದ “ಕನಕ ಉತ್ಸವ” ಕಾರ್ಯಕ್ರಮವು ಗೋವಾದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ಉಪನ್ಯಾಸ ನೀಡಲು ಕರ್ನಾಟಕದಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಡಾ.
ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಇದೀಗ ಸಂಭವಿಸಿದ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿಗೆ ಮಡಿಕೇರಿಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.




























