Home Archive by category Fresh News (Page 847)

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯನ್ನು ಖಂಡಿಸಿ ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಪ್ರತಿಭಟನಾ ಸಭೆ ಮಿನಿ ವಿಧಾನ ಸೌಧದ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ದೇಶದ ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತರ ಮೇಲೆ ಪಾಕಿಸ್ತಾನಿ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಶಾಸಕರಾದ ಡಾ. ಭರತ್ ಶೆಟ್ಟಿ ಭೇಟಿ

ಬೊಂದೇಲ್ – ಪಚ್ಚನಾಡಿ ಸಂಪರ್ಕಿಸುವ ಮಧ್ಯ ಭಾಗದಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಬಹುತೇಕ ಮುಗಿದಿದ್ದು, ಮುಂದಿನ ಹಂತವಾಗಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದು ಬದಿಯ ರಸ್ತೆ ಕಾಂಕ್ರಿಟೀಕರಣ ಕಾರ್ಯವು ಪ್ರಗತಿಯಲ್ಲಿದೆ. ಅಕ್ಟೋಬರ್ 10 ರಿಂದ ಇನ್ನೊಂದು ಬದಿಯ ರಾಜಕಾಲುವೆ ವರೆಗೆ ರಸ್ತೆ ಕಾಮಗಾರಿಗಾಗಿ ಮುಖ್ಯ ರಸ್ತೆಯನ್ನು ಒಂದು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಈ ಸಂಬಂಧ ಮಾಹಿತಿ ಪಡೆಯಲು ಹಾಗೂ ಕಾಮಗಾರಿ ಪರಿಶೀಲಿಸಲು

ಲೇಖಕರ ಸಂಘದ ಅಧ್ಯಕ್ಷರಾಗಿ ಉಮರ್ ಯು.ಹೆಚ್. ಪುನರಾಯ್ಕೆ

ಮುಸ್ಲಿಮ್ ಲೇಖಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ, ಅಂಕಣಕಾರ, ಕರಿಯರ್ ಕೌನ್ಸಿಲರ್ ಉಮರ್ ಯು.ಹೆಚ್. ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆ ಮತ್ತು  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಆಲಿ ಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ. ಮುಹಮ್ಮದ್ ಅಲಿ, ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್, ಕೋಶಾಧಿಕಾರಿಯಾಗಿ ಮುಹಮ್ಮದ್ ಮುಹ್ಸಿನ್ ಆಯ್ಕೆಯಾಗಿದ್ದಾರೆ. ಏ.ಕೆ. ಕುಕ್ಕಿಲ,

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಸುಧಾಕರ ಪೂಂಜ ಆಯ್ಕೆ

ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ 2021-2023 ಸಾಲಿನ ನೂತನ ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ ಹೊಸಬೆಟ್ಟು ಆಯ್ಕೆ ಗೊಂಡಿದ್ದಾರೆ. ಬಂಟರ ಭವನದಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಅಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜಾ ಹೊಸಬೆಟ್ಟು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್, ಜತೆ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ : ರೈತರಿಗೆ ಅನ್ಯಾಯ

ಮೂಡುಬಿದಿರೆ : ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ 169 ಚತುಷ್ಪಥ ಹೆದ್ದಾರಿ ಯೋಜನೆಗೆ ಭೂಸ್ವಾಧೀನಕ್ಕೊಳಪಡುವ ಹೆಚ್ಚಿನ ಭೂಮಿಯು ಕೃಷಿಗೆ ಸಂಬಂಧಿಸಿದ್ದಾಗಿದೆ ಜನಪ್ರತಿನಿಧಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಹೆದ್ದಾರಿ ಪಥವನ್ನು ಬದಲಾಯಿಸಿದಲ್ಲದೆ ಕಾನೂನುಬಾಹಿರ ನಡೆಯಿಂದ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಪರಿಹಾರವನ್ನು ನೀಡದೆ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನ್ಯಾಯ ಸಿಗುವವರೆಗೂ

ಹಿಂಜಾವೇ ಕಾರ್ಯಕರ್ತರಿಗೆ ಠಾಣಾಧಿಕಾರಿ ಹೊಡೆದಿದ್ದಾರೆಂಬ ಆರೋಪ ಕಾರ್ಯಕರ್ತರಿಂದ ನಗರ ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ ಅನ್ಯಧರ್ಮದ ಹುಡಗನೊಬ್ಬ ಚೈತ್ರಾ ಕುಂದಾಪುರ ಅವರ ಬಗ್ಗೆ ಅವಹೇಳನಕಾರಿ ವ್ಯಾಟ್ಸಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಆ ಹುಡುಗ ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಜಗಳ ನಡೆದಿತ್ತು. ಘಟನೆಯ ಬಳಿಕ ಹಿರಿಯರ ನೇತೃತ್ವದಲ್ಲಿ ನಗರ

ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮ ವ್ಯಾಪ್ತಿಯ ಕೆಂಪುಗುಡ್ಡೆ ಸಾರಿಗೆ ಎಂಬಲ್ಲಿನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯೊಂದು ಬೆಳಕಿಗೆ ಬಂದಿದೆ.ಬಾಲಕಿ ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ಶಾಲೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ಪರಿಚಿತ ವ್ಯಕ್ತಿಯೋರ್ವ ಕಾರಿನಲ್ಲಿ ಬಂದು ಬಾಲಕಿಯನ್ನು ಪುಸಲಾಯಿಸಿ ಇತರರೊಂದಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ. ಸಂತ್ರಸ್ತ ಬಾಲಕಿಯನ್ನು ಮಂಗಳೂರಿನ

ಉದ್ಯಾವರ: ರಸ್ತೆ ವಿಭಾಜಕಕ್ಕೆ ಢಿಕ್ಕಿಯಾಗಿ ಪಲ್ಟಿಯಾದ ಗೂಡ್ಸ್ ಟೆಂಪೋ

ರಸ್ತೆ ವಿಭಾಜಕಕ್ಕೆ ಗೂಡ್ಸ್ ಟೆಂಪೋವೊಂದು ಢಿಕ್ಕಿಯಾಗಿ ಪಲ್ಟಿಯಾದ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ಅಪಘಾತದಲ್ಲಿ ಟೆಂಪೋ ಚಾಲಕನ ಕೈ ಮೂಳೆ ಮುರಿತಕ್ಕೊಳಗಾಗಿದೆ. ಮಂಗಳೂರು ಕಡೆಯಿಂದ ಬಂದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿಯಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಿದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಕಾಪು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ತೆರವುಗೊಳಿಸಿದರು.  

ಅನಿಮಲ್ ಪ್ರಿಂಟ್ ಮೂಲಕ ಗಮನ ಸೆಳೆದ ಡಾ, ಜ್ಯೋತಿ ಬೆಹಲ್

ಬೆಂಗಳೂರಿನ ಜನಪ್ರಿಯ ಫ್ಯಾಶನ್ ಡಿಸೈನರ್ ಡಾ.ಜ್ಯೋತಿ ಬೆಹಲ್ ಅವರು ವೈವಿಧ್ಯಮಯ ಫ್ಯಾಶನ್ ಶೂಟ್‍ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಶಿವ ರೂಪಿಣಿಯಾಗಿ ಮಿಂಚಿದ್ದ ಅವರು ಇದೀಗ ಅನಿಮಲ್ ಪ್ರಿಂಟ್ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ. ತಾವೇ ಡಿಸೈನ್ ಮಾಡಿದ ಅನಿಮಲ್ ಪ್ರಿಂಟ್ ಡಿಸೈನರ್ ವೇರ್ ಗೆ ಸ್ವತಾ: ಡಾ.ಜ್ಯೋತಿ ಬೆಹಲ್ ಅವರು ಮೊಡೆಲ್ ಆಗಿ ಪೊಟೋ ಶೂಟ್ ನಲ್ಲಿ ಭಾಗವಹಿಸಿದರು. ಖ್ಯಾತ ಫ್ಯಾಶನ್ ಪೊಟೋಗ್ರಾಫರ್ ಲೀಜು ಮಾಧವನ್ ಅವರ ಪೊಟೋಗ್ರಪಿ ಕೂಡ

ಚೆಲುವಿನ ಚುಲುಬುಲೀಸ್ ಮಹಿಳೆಯರಿಂದ ದಾಂಡಿಯಾ ಸಂಭ್ರಮ

ಕೊರೊನಾ ಕಾರಣದಿಂದಾಗಿ ಅದೆಷ್ಟೋ ಮಂದಿ ಕಳೆದ ಎರಡು ವರ್ಷಗಳಿಂದ ಮನೆಯ ಹೊರಗಿನ ಆಯೋಜನೆಯ ಸಾಂಸ್ಕøತಿಕ ಕಾರ್ಯಕ್ರಮ , ಸಂಭ್ರಮದಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಸನ್ನಿವೇಶವು ಸಹಜ ಸ್ಥಿತಿಗೆ ಬರುತ್ತಿದ್ದು, ಸಾಂಸ್ಕøತಿಕ ಕಲರವ ಸಂಭ್ರಮ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನ ಚೆಲುವಿನ ಚುಲುಬುಲೀಸ್ ಮಹಿಳಾ ತಂಡದವರು ಖ್ಯಾತ ಡಿಸೈನರ್ ಹಾಗೂ ಮೋಡೆಲ್ ಪ್ರಿಯಾ ಕುಮಾರ್ ನೇತೃತ್ವದಲ್ಲಿ ದಾಂಡಿಯಾ ನೃತ್ಯ ಆಯೋಜನೆಯ ಮೂಲಕ ನವರಾತ್ರಿಯವನ್ನು ಸಂಭ್ರಮದಿಂದ ಬರಮಾಡಿಕೊಂಡರು.