ಮೂಡುಬಿದಿರೆ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ 15ನೇ ವಾರ್ಷಿಕ ಸಭೆಯು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2025/27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ , ಪ್ರಧಾನ ಕಾರ್ಯದರ್ಶಿಯಾಗಿ ನಮಿತ್
ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಮೂಡುಬಿದರೆಯ ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಗೆ ಮತ್ತು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸಾರ್ವಜನಿಕರಿಗೆ ಆಟಿದ ಅಮಾವಾಸ್ಯೆ ದಿನದ ಪ್ರಯುಕ್ತ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣಾ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ವಿಶ್ವ ತುಳುವೆರ್ ಸಂಘಟನೆ ಮಂಗಳೂರು ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾದ ಆಟಿ ಅಮಾವಾಸ್ಯೆಯ ದಿನದಂದು ಆಟಿ ಕಷಾಯ ಮತ್ತು ಮೆಂತ್ಯೆ ಗಂಜಿಯನ್ನು
ಬೈಂದೂರು: ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಇವರ 30ರ ಸಂಭ್ರಮ 2025ರ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಟಿ ಬುಧವಾರ ಸಂಜೆ ಬೈಂದೂರು ಬಂಟರ ಸಮುದಾಯ ಭವನದಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 30ನೇ ವರ್ಷದ ಸಂಭ್ರಮದ ಅವಧಿಯಲ್ಲಿ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಗಣಿತವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಲ್ಲಾ ತಾರ್ಕಿಕ ವಿಜ್ಞಾನಗಳಿಗೆ ಹೇಗೆ
ಅವೈಜ್ಞಾನಿಕ ಕಾಮಗಾರಿಗಳು ಪಶ್ಚಿಮ ಘಟ್ಟಗಳಿಗೆ ಇಂದು ಅಪಾರ ಹಾನಿ ತಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ನಾಶ ಮುಂದಿನ ದಿನಗಳ ಭೀಕರತೆಯನ್ನು ಈಗಲೇ ಸಾರುತ್ತಿದೆ. ಉಳಿದಿರುವ ಕಾಡುಗಳನ್ನಾದರೂ ಉಳಿಸುವ ನಿರ್ಧಾರ ನಾವು ಮಾಡದಿದ್ದರೆ ಪ್ರಪಂಚ ನಾಶವಾಗುವ ದಿನ ದೂರವಿಲ್ಲ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಾಬಾ
ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ವತಿಯಿಂದ ಪರಿಸರ ಜಾಗೃತಿ ಯಾನ ಪರಿಸರ ಗೀತೆ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.ಮನುಷ್ಯ ತನ್ನ ದುರಾಸೆಗೆ ಪರಿಸರ ವನ್ನು ವಿನಾಶದ ಅಂಚಿಗೆ ತಳ್ಳ ಬಾರದು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕಾರ್ಯಕ್ರಮ ಉದ್ಘಾಟಕರಾದ ಎ ಓ ಎಲ್ ಇ (ರಿ)ಕಾರ್ಯದರ್ಶಿ ಕೆವಿ ಹೇಮನಾಥ್ ಅವರು ಹೇಳಿದರು. ಕ ಸಾ ಪ ಅಧ್ಯಕ್ಷರಾದ ಚಂದ್ರ ಶೇಖರ್ ಪೇರಾಲು ಅಧ್ಯಕ್ಷತೆ
ದ. ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಸುಳ್ಯ ತಾಲೂಕು ಪಂಚಾಯತ್ ಗೆ ಭೇಟಿ ನೀಡಿದ ಸಿ ಇ ಓ ವಿನಾಯಕ್ ಖರ್ಬಾರಿ ಯವರನ್ನು ತಾಲೂಕು ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಸುಳ್ಯ ತಾಲೂಕಿಗೆ
ಕಾಪು ಪುರಸಭೆಯ ಸಾಮಾನ್ಯ ಸಭೆ ಕಾಪು ಪುರಸಭೆಯ ಇಂದಿರಾಗಾಂಧಿ ಸಭಾಂಗಣದಲ್ಲಿ ನಡೆಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಕಾಪು ಪುರಸಭೆಯ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಕಾರ್ಯಸೂಚಿಯಲ್ಲಿ ತಿಳಿಸಿದಂತೆ ಪುರಸಭೆಯ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ,
ಮಂಗಳೂರು: ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರೊಂದಿಗೆ ’ದಿ ನೋವಿಗೋ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.18ರಂದು ಬಿಜೈ ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿ ಜರುಗಿತು.ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರಗುರುದತ್ತ ಶೆಣೈಅವರು ’ಜಾಗತಿಕತಂತ್ರಜ್ಞಾನ ಶ್ರೇಷ್ಠತೆಯಲ್ಲಿ ಮಂಗಳೂರಿನ
ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಧರ್ಮಸ್ಥಳ ಮತ್ತು ಸೌಜನ್ಯ ವಿಚಾರಕ್ಕೆ ಸಂಬಂಧಿಸಿ ಈದಿನ ಡಾಟ್ ಕಾಮ್‌ಗೆ ಮೊದಲ ಗೆಲುವು ಸಿಕ್ಕಿದಂತಾಗಿದೆ. ಧರ್ಮಸ್ಥಳ ಮತ್ತು ಸೌಜನ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸದಂತೆ ಇದ್ದ ಸಿವಿಎಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಧರ್ಮಸ್ಥಳ ದೇವಸ್ಥಾನದ ಟ್ರಸ್ಟ್‌ನ ಕೆಲವರು ಈದಿನ ಡಾಟ್ ಕಾಮ್




























