Home Archive by category Fresh News (Page 882)

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ:ಕೂಡಗಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿತ

ವಿಜಯಪುರ ನಗರದಲ್ಲಿ ಶನಿವಾರ ರಾತ್ರಿ 11-47 ಮತ್ತು 11-48ಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೊನಿ, ಗಣೇಶ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲೆಯ ಕೂಡಗಿ, ಮುಳವಾಡ, ಬಬಲೇಶ್ವರ ಇನ್ನು ಹಲವೆಡೆ ಎರಡು ಬಾರಿ ದೊಡ್ಡದಾಗಿ ಶಬ್ಧವಾಗಿದೆ. ಜೊತೆಗೆ ಭೂಮಿಯೂ ಕಂಪಿಸಿದೆ. ಇನ್ನೂ ಕೂಡಗಿ

ಹುತಾತ್ಮ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ: ಗೌರಿ ನೆನಹು ಕಾರ್ಯಕ್ರಮ

ಹಿಂದೂತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ ನೆನಪಿನಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮವು ಚಾಮರಾಜಪೇಟೆಯಲ್ಲಿ ನಡೆಯಿತು. ಸೆಪ್ಟಂಬರ್ 05 ಅಂದರೆ ಇಂದು ಗೌರಿ ಲಂಕೇಶ್‌ರವರ ಹತ್ಯೆಯಾಗಿ 4 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 8.30ಕ್ಕೆ ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್‌ರವರ ಸಮಾಧಿ ಬಳಿ ಗೌರವ ಸಲ್ಲಿಸಲಾಯಿತು. ಗೌರಿ ಲಂಕೇಶ್‌ರವರ ನಮ್ಮನ್ನು ಅಗಲಿ ನಾಲ್ಕು

ಮಿಸ್ಬಾ ವುಮೆನ್ಸ್ ಕಾಲೇಜು ಕಾಟಿಪಳ್ಳ:ನಾಲ್ವರು ಮಹಿಳಾ ಸಾಧಕರಿಗೆ ಸಮ್ಮಾನ

ಸುರತ್ಕಲ್:ಮಿಸ್ಬಾ ವುಮೆನ್ಸ್ ಕಾಲೇಜ್ ಕಾಟಿಪಳ್ಳ ಇದರ ವತಿಯಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ  ಮೂವರು ವೈದ್ಯರ ಸಹಿತ ಅಲ್ಪಸಂಖ್ಯಾತ ಮಹಿಳಾ ಸಾಧಕರಿಗೆ  ಸಮ್ಮಾನ ಕಾರ್ಯಕ್ರಮ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಗಾಟನೆ  ಮಿಸ್ಬಾ ವುಮೆನ್ಸ್ ಕಾಲೇಜಿನ ಕ್ಯಾಂಪಸ್ ನಲ್ಲಿ  ಜರಗಿತು. ಈ ಸಂದರ್ಭ ಅತಿಥಿಗಳು ಮಿಸ್ಬಾ ವುಮೆನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆ ವೀಕ್ಷಿಸಿದರು. ಕಾಲೇಜಿನ ಕಂಪ್ಯೂಟರ್ ಲ್ಯಾಬ್ ನ್ನು  ಗಣ್ಯರು ಉದ್ಘಾಟಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಗೆ ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ  ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್  ಚಿನ್ನದ ಪದಕವನ್ನು ಜಯಿಸಿದರು. ಶನಿವಾರ ನಡೆದ ಫೈನಲ್ ನಲ್ಲಿ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17  ಗೇಮ್ ಗಳಿಂದ ಸೋಲಿಸಿದರು. 33ರ ಹರೆಯದ ಪ್ರಮೋದ್ ವಿಶ್ವದ ನಂ.1 ಆಟಗಾರನಾಗಿದ್ದು, ಹಾಲಿ ಏಶ್ಯನ್ ಚಾಂಪಿಯನ್ ಆಗಿದ್ದಾರೆ. ಶನಿವಾರ 36 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಎಸ್

ಕೋವಿಡ್ ನಿಯಂತ್ರಣಕ್ಕೆ ಪುತ್ತೂರಿನಲ್ಲಿ ಕಟ್ಟುನಿಟ್ಟಿನ ಕ್ರಮ: ಪುತ್ತೂರು ಎಸಿ ಡಾ.ಯತೀಶ್ ಉಳ್ಳಾಲ್

ಕೇರಳ ಗಡಿಭಾಗವನ್ನು ಹಂಚಿಕೊಂಡಿರುವಂತಹ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ. ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 16 ಹಾಗೂ 17 ರ ಆಸುಪಾಸಿನಲ್ಲಿರುವ ಕಾರಣ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಹೇಳಿದರು. ಅವರು ಪುತ್ತೂರಿನ ತಮ್ಮ ಕಚೇರಿಯಲ್ಲಿ

ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 22 ಕದ್ರಿ ಬಿ ನಲ್ಲಿರುವ ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಉಚಿತ ಕೋವಿಡ್ ಲಸಿಕಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಿದರು. 5೦೦ ಕ್ಕೂ ಹೆಚ್ಚು ನಾಗರಿಕರು ಈ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಂಡರು.ಶಿಬಿರದಲ್ಲಿ ಮನಪಾ ಸದಸ್ಯರಾದ ಜಯಾನಂದ ಅಂಚನ್, ಶಾಲಾ ಮುಖ್ಯೋಪಾಧ್ಯಾಯರಾದ ಮಂಜಪ್ಪ ಬಿ, ಡಾ. ಮಹಿಮ ಗುಪ್ತ, ಆಶಾ ಕಾರ್ಯಕರ್ತೆಯಾದ ಸುಶೀಲ,

ವಿದ್ಯುತ್ ಬಿಲ್ ನಲ್ಲಿ ಅಕ್ರಮ, ಮೂವರ ಅಮಾನತು: ಸಚಿವ ಸುನಿಲ್ ಕುಮಾರ್

ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ ,ಈ ಮೂವರು ಅಮಾನತಿ ಗೊಳಗಾದ ಸಿಬ್ಬಂದಿ ಯಾಗಿದ್ದಾರೆ. ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ

ನವಮಂಗಳೂರು ಬಂದರು ಟ್ರಸ್ಟ್‌ನ ಹೊಸ ಸಾಧನೆ: ಮೊದಲ ಬಾರಿಗೆ 22,825 ಟನ್ ಕಬ್ಬಿಣದ ಸರಕು ರಫ್ತು

ಮಂಗಳೂರು: ನಗರದ ನವ ಮಂಗಳೂರು ಬಂದರು ಟ್ರಸ್ಟ್ ಹೊಸ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಇಲ್ಲಿಂದ 22,825 ಟನ್ ಕಬ್ಬಿಣದ ಸರಕನ್ನು ರಫ್ತು ಮಾಡಲಾಗಿದೆ.ಎಂ.ವಿ. ಮಿನಿಯನ್ ಗ್ರೇಸ್ ಹಡಗು ನಗರದ ಎನ್‌ಎಂಪಿಟಿಗೆ ಬಂದಿತ್ತು. ಇದರಿಂದ ಜೆಎಸ್‌ಡಬ್ಲ್ಯು ಕಂಪನಿಗೆ ಸೇರಿದ 22,825 ಟನ್ ಕಬ್ಬಿಣದ ಸರಕನ್ನು ತುಂಬಲಾಗಿದೆ. ಸರಕು ಹೊತ್ತ ಹಡಗು ಈಜಿಪ್ಪನ ಡಾಮಿಯೆಟ್ಟ, ಇಟಲಿಯ ಮರ್ಗೇರಾ ಹಾಗೂ ಸ್ಪೇನ್‌ನ ಸಗುಂಟೋ ಬಂದರಿಗೆ ತೆರಳಲಿದೆ. ಎನ್‌ಎಂಪಿಟಿಯ 3 ನೇ ದಕ್ಕೆ ಮಿನಿಯನ್

ಅಫ್ಘಾನ್ ತಾಲಿಬಾನ್ ವಶದ ಬೆನ್ನಲ್ಲೇ ಭಾರತದ ಡ್ರೈ ಫ್ರೂಟ್ ಉದ್ಯಮಕ್ಕೆ ಹೊಡೆತ..!

ಜಾಗತಿಕವಾಗಿ ಡ್ರೈ ಫ್ರೂಟ್ ಮಾರಾಟ ಕ್ಷೇತ್ರದಲ್ಲಿ ಅಫ್ಘಾನಿಸ್ತಾನ ಪಾರುಪತ್ಯ ಹೊಂದಿದೆ. ಅಲ್ಲದೇ ಭಾರತದಲ್ಲಿ ಅಫ್ಘಾನಿಸ್ತಾನದ ಡ್ರೈ ಫ್ರೂಟ್‍ಗೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ ಆದರೆ ಈಗ ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಹೋಗಿ ಶಾಂತವಾಗಿದ್ದ ನೆಲ ನಲುಗಿ ಹೋಗಿದ್ದು. ಭಾರತದ ಡ್ರೈ ಫ್ರೂಟ್ ಉದ್ಯಮ ಅಕ್ಷರಶಃ ನೆಲಕಚ್ಚಿದಂತಾಗಿದೆ. ಹೌದು ಅಫ್ಘಾನಿಸ್ತಾನ ತಾಲಿಬಾನ್ ವಶ ಪಡಿಸಿಕೊಂಡ ನಂತರ ಶಾಂತವಾಗಿದ್ದ ಅಫ್ಘಾನ್ ನೆಲ ನಲುಗಿ ಹೋಗಿದೆ. ಇನ್ನು ಅಫ್ಗಾನ್ ನೆಲದಲ್ಲಿ

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ:ಶೂಟರ್ ಮನೀಶ್ ನರ್ವಾಲ್ ಗೆ ಚಿನ್ನ

ಶೂಟರ್ ಮನೀಶ್ ನರ್ವಾಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.  ಇನ್ನೋರ್ವ ಶೂಟರ್ ಸಿಂಗ್ ರಾಜ್ ಅಧಾನ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಈ ಇಬ್ಬರು ಶನಿವಾರ ನಡೆದ ಪಿ4 ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.19ರ ರ ಹರೆಯದ ನರ್ವಾಲ್ ಒಟ್ಟು 218.2 ಅಂಕ ಗಳಿಸಿ ಒಲಿಂಪಿಕ್ಸ್ ದಾಖಲೆ  ನಿರ್ಮಿಸಿ ಚಿನ್ನ ಜಯಿಸಿದರು. ಮಂಗಳವಾರ ಕಂಚು ಗೆದ್ದಿದ್ದ ಅಧಾನ 216.7 ಅಂಕ ಗಳಿಸಿ