Home Archive by category Fresh News (Page 890)

ಕಡಬದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ : 40 ಕೆಜಿ ದನದ ಮಾಂಸ ಸಹಿತ ಓರ್ವನ ವಶಕ್ಕೆ

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು 4೦ ಕೆಜಿ ದನದ ಮಾಂಸ, ಕಟ್ಟಿ ಹಾಕಿದ್ದ 4 ಕರುಗಳು ಸೇರಿದಂತೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಪರಾರಿಯಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕಳಾರ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಕಳಾರ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಶೆಡ್ ನಲ್ಲಿ

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಯುವತಿ ಮೃತ್ಯು

ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಗುಡಿಮನೆ ನಿವಾಸಿ ಸುಮಾರು 21ಪ್ರಾಯದ ಅಶ್ವಿನಿ ಎಂಬುವರು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ ೨೩ರಂದು ಕೋವಿಡ್ ಲಸಿಕೆಯ ಪ್ರಥಮ ಡೋಸನ್ನು ಪಡೆದುಕೊಂಡಿದ್ದರು, ಲಸಿಕೆ ಪಡೆದ ಮರುದಿನ ರಾತ್ರಿ ಅತೀಯಾಗಿ ವಾಂತಿಯಾದುದರಿಂದ ಅಸ್ವಸ್ಥತೆಗೊಂಡ ಅಶ್ವಿನಿಯವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಕಡಿಮೆ ರಕ್ತದೊತ್ತಡ ಎಂಬುದಾಗಿ ತಿಳಿಸಿ ಕೂಡಲೇ ಮಣಿಪಾಲ್ ಆಸ್ಪತ್ರೆಗೆ

ಕ್ರೀಡಾ ಭಾರತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ : ಆ.31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಕಾರ್ಯಕ್ರಮ

ಮಂಗಳೂರಿನ ಸಂಘನಿಕೇತನದ ಕ್ರೀಡಾ ಭಾರತಿಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಕ್ರೀಡಾ ಭಾರತಿ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅಗಸ್ಟ್ 31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಭಾರತಿಯ ಗೌರವಾಧ್ಯಕ್ಷರಾದ ಬಿ. ನಾಗರಾಜ್ ಶೆಟ್ಟಿ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮುಂದಿನ ದಿನಗಳಲ್ಲಿ

ನವದೆಹಲಿ: ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘಕ್ಕೆ ಗೌರವ

ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಅತ್ಯುತ್ತಮ ಸಂಘವೆಂದು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ನ್ಯೂ ಫ್ರೈಡ್ ಪ್ಲಾಜಾ ಹೋಟೆಲ್‌ನಲ್ಲಿ ಸಂಘವನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಹಣಕಾಸಿನ ನೆರವು, ವೈದ್ಯಕೀಯ ಸಹಾಯ, ಆಹಾರ ಕಿಟ್‌ಗಳು, ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇತ್ಯಾದಿ ಅನೇಕ ಖಾಸಗಿ

ಹೊಸಬೆಟ್ಟುವಿನ ತಾವರೆಕೊಳದಲ್ಲಿ ಕಿರು ಸೇತುವೆ ನಿರ್ಮಾಣ : ವಿ4 ನ್ಯೂಸ್ ನ ವರದಿಗೆ ಎಚ್ಚೆತ್ತ ಅಧಿಕಾರಿಗಳು

ಹೊಸಬೆಟ್ಟುವಿನ ತಾವರೆಕೊಳದಲ್ಲಿದ್ದ ಕಿರು ಸೇತುವೆಯನ್ನು ದಿಢೀರ್ ಕೆಡವಿ ಹಾಕಿದ್ದು, ಇದರಿಂದ ಸ್ಥಳೀಯರಿಗೆ ತೊಂಬಾ ತೊಂದರೆಯಾಗಿತ್ತು. ಈ ಬಗ್ಗೆ ವಿ4 ನ್ಯೂಸ್ ಸಮಗ್ರ ವರದಿಯನ್ನು ಭಿತ್ತರಿಸಿತ್ತು. ಮಾತ್ರವಲ್ಲದೆ ಶಾಸಕ ಡಾ. ವೈ ಭರತ್ ಶೆಟ್ಟಿಯವರ ಗಮನಕ್ಕೆ ತರಲಾಗಿತ್ತು. ಇದೀಗ ಶಾಸಕರಾದ ಡಾ.ಭರತ್ ಶೆಟ್ಟಿಯವರ ಸಹಕಾರದೊಂದಿಗೆ ತಾವರೆಕೊಳದಲ್ಲಿ 74 ಲಕ್ಷ ರೂ. ವೆಚ್ಚದಲ್ಲಿ ನೂತನ ಕಿರು ಸೇತುವೆ ನಿರ್ಮಾಣವಾಗಲಿದೆ. ಸ್ಥಳಕ್ಕೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯರಾದ

ವಾರಾಂತ್ಯದ ಕರ್ಫ್ಯೂನಿಂದ ಆರ್ಥಿಕ ನಷ್ಟ ಅನುಭವಿಸಿದ್ದೇವೆ : ಬೆಳ್ತಂಗಡಿಯಲ್ಲಿ ವರ್ತಕರ ಸಂಘದ ಅರವಿಂದ ಕಾರಂತ್ ಹೇಳಿಕೆ

ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 64 ರಿಂದ65ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಕೈಗಾರಿಕಾ ಸಂಘದ ಅಡಿಯಲ್ಲಿ ಬರುವ ವರ್ತಕರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೇವೆ. ಆ ನಂತರ ಜಿಲ್ಲಾಧಿಕಾರಿಗಳು ಮಾಡಿರುವ ವಾರಾಂತ್ಯದ ಕರ್ಪ್ಯುನಿಂದಾಗಿ ಅಂಗಡಿ ಮಾಲಕರಾದ ನಾವು ಆರ್ಥಿಕ ನಷ್ಟವನ್ನು ಅನುಭವಿಸಿದ್ದೇವೆ. ಅಲ್ಲದೆ ನೂರಾರು ನೌ ಕರರು ಕೆಲಸವನ್ನು ಕಳೆದು ಕೊಂಡು ಕಂಗಾಲಾಗಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್ ಹೇಳಿದರು. ಅವರು

ಕಿಟ್ ವಿತರಣೆಯಾಗದೆ ಕೆಟ್ಟು ಹೋಗುತ್ತಿರುವ ಆಹಾರ : ಕಾರ್ಕಳದಲ್ಲಿ ಸುಭೋದ್ ರಾವ್ ಆರೋಪ

ಕರ್ನಾಟಕದ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಊರಿನಲ್ಲಿ ಅಹಾರ ಕಿಟ್ಟ್ ವಿತರಣೆಯಾಗದೆ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ಟ್ ಬಿಡುಗಡೆಯಾಗಿದೆ. ಆದರೆ ಸಮರ್ಪಕವಾಗಿ ಕಿಟ್ಟ್ ವಿತರಣೆಯಾಗದೆ ಸಾವಿರಾರು ಕಿಟ್ಟ್ ಗಳ ಗೋಡಾನ್‍ನಲ್ಲಿ ರಾಶಿ ಬಿದ್ದು ಅದರ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಆಗೊಮ್ಮೆ ಈಗೊಮ್ಮೆ ಬಂದ ಕೆಲವು ಕಾರ್ಮಿಕರಿಗೆ

ದ.ಕ. ಜಿ.ಪಂ.ನಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2ರ ಮಾರ್ಗಸೂಚಿಗಳನ್ವಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಜಿಪಂ ಸಿಇಒ ಡಾ.ಕುಮಾರ್ ಚಾಲನೆ ನೀಡಿದರು.ವೈಜ್ಞಾನಿಕ ದ್ರವತ್ಯಾಜ್ಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನಗಳನ್ನು ಗುರುತಿಸಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಮತ್ತು ಅನುಷ್ಠಾನಗೊಳಿಸಲು ಬೆಂಗಳೂರಿನ ಸಿಡಿಡಿ ಸಂಸ್ಥೆಯ ತಾಂತ್ರಿಕ ಸಹಕಾರದೊಂದಿಗೆ ಆ.27ರಿಂದ 29ರವರಗೆ ಜಿಲ್ಲೆಯ ಎಲ್ಲಾ ತಾಂತ್ರಿಕ ವರ್ಗದ

ಕಾವೂರಿನಲ್ಲಿ ಬೀದಿ ಕಾಳಗಕ್ಕೆ ಮುಂದಾದ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು..!

ಮಂಗಳೂರು ನಗರದ ಕಾವೂರು ಜಂಕ್ಷನ್ ಬಳಿ ಸಂಜೆ ಏಳು ಗಂಟೆ ಸುಮಾರಿಗೆ ಬೀದಿ ಕಾಳಗ ನಡೆಯುವುದು ಪೊಲೀಸರ ಮುಂಜಾಗೃತ ಕ್ರಮದಿಂದ ತಪ್ಪಿದ್ದಂತಾಗಿದೆ. ಕಾವೂರು ಠಾಣೆಯ ಸ್ವಲ್ಪ ದೂರದಲಿಲ್ಪೀ ಘಟನೆ ನಡೆದಿದ್ದು ಎರಡು ಕೋಮುಗಳ ಯುವಕರು ಸೇರಿ ಬೀದಿ ಕಾಳಗಕ್ಕೆ ರೆಡಿಯಾಗಿದ್ದರು. ಯುವಕರಿದ್ದ ಕಾರು ಎದುರಿನಲ್ಲಿದ್ದ ಸ್ಕೂಟರಿಗೆ ಡಿಕ್ಕಿಯಾಗಿತ್ತು. ಸ್ಕೂಟರಿನಲ್ಲಿದ್ದ ಹಿಂದು ಸಂಘಟನೆಯ ಯುವಕರು ಮತ್ತು ಕಾರಿನಲ್ಲಿದ್ದ ಯುವಕರ ನಡುವೆ ಈ ವಿಚಾರಕ್ಕೆ ವಾಗ್ವಾದ ನಡೆದಿದೆ. ಎರಡೂ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ: ಶಶಿಕಲಾ ಜೊಲ್ಲೆ

ಮೈಸೂರು: ಮೈಸೂರಿನ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಮಾಡಿರುವುದು ಖಂಡನೀಯವಾಗಿದ್ದು, ಸಂತ್ರಸ್ಥ ಯುವತಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ರೀತಿಯ ದುಷ್ಕೃತ್ಯ ನಡೆದಿರುವುದು ನೋವಿನ ಸಂಗತಿ. ನಾನು ಒಬ್ಬ ಮಹಿಳೆಯಾಗಿ ಸರ್ಕಾರದಲ್ಲಿ ಮಹಿಳಾ ಸಚಿವೆಯಾಗಿ ಒಂದು ಹೆಣ್ಣಿನ ನೋವು ಒಬ್ಬಳು ಹೆಣ್ಣಾಗಿ ನನಗೆ ಅರ್ಥ ಆಗುತ್ತದೆ. ನಾಗರಿಕ ಸಮಾಜದಲ್ಲಿ ಈ ರೀತಿಯ ದುಷ್ಕೃತ್ಯವನ್ನು ಯಾರೂ ಸಹಿಸುವುದಿಲ್ಲ. ನಾಗರಿಕ