Home Archive by category Fresh News (Page 896)

ಉಳ್ಳಾಲ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಉಳ್ಳಾಲ ನೇತ್ರಾವತಿ ನದಿ ಸಮೀಪದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟೆಪುರ – ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ ಎಂದು ಗುರುತಿಸಲಾಗಿದ್ದು, ಇತನ ದ್ವಿಚಕ್ರ ವಾಹನ ಉಳ್ಳಾಲದ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ

ದ.ಕ., ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಸದ್ಯ ಶಾಲಾರಂಭ ಇಲ್ಲ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತು ಸೋಂಕುಪೀಡಿತರ ಸಾವು ಏರಿಳಿಕೆಯಾದರೂ ಸತತ ಒಂದು ವಾರದಿಂದ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆ ವರದಿಯಾಗುತ್ತಿದೆ. ಈ ಮೂಲಕ ಮೂರನೇ ಅಲೆ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ. ಇದರ ಮಧ್ಯೆ ಸೋಮವಾರದಿಂದ ರಾಜ್ಯದಲ್ಲಿ ಶಾಲಾರಂಭ ಆಗಲಿದ್ದರೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ತರಗತಿ ಆರಂಭವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಈ ಮೊದಲು ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

ವ್ಯಕ್ತಿಯೋರ್ವನಿಂದ ಮಂಗಳೂರಿನ ಹೊಟೇಲ್ ಗಳಿಗೆ ಪಂಗನಾಮ: ಬಂಧನ

ವ್ಯಕ್ತಿಯೊಬ್ಬ ನಗರದ ವಿವಿಧ ಹೊಟೇಲ್ ಗಳಲ್ಲಿ ಉಳಿದುಕೊಂಡು ಮೋಸ ಎಸಗಿರುವ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದಾನೆ. ಈತ ದೆಹಲಿ ಏಮ್ಸ್ ಆಸ್ಪತ್ರೆಯ ಡಾಕ್ಟರ್ ಅಂತ ಹೇಳಿಕೊಂಡು , ಪ್ರೊಫೆಸರ್ ಮತ್ತು ಸರ್ಜನ್ ಆಗಿರುವ ಐಡಿ ತೋರಿಸಿದ್ದ.  ನಗರದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಹೊಟೇಲ್ ಸಿಟಿ ವಾಕ್ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ಕೊನೆಗೆ ಚೆಕ್ ಔಟ್ ವೇಳೆ, ಹಣ ಕೊಡದೆ ಪರಾರಿಯಾಗಿದ್ದ. ಹೊಟೇಲ್

ತಿರಸ್ಕೃತದ ಪುಸ್ತಕಕ್ಕೆ ಮತ್ತೊಮ್ಮೆ ಮಣೆ : ಮಂಗಳೂರು ವಿ.ವಿ. ಪುಸ್ತಕ ವಿವಾದ !!

ಮಂಗಳೂರು ವಿಶ್ವವಿದ್ಯಾನಿಯಲದ ಪ್ರಸಾರಾಂಗದ ಸಂಶೋಧನಾ ಮಾಲಕೆಯ ಕೃತಿ ಪ್ರಕಟನೆಯಲ್ಲಿ ಈ ಹಿಂದೆ ತಿರಸ್ಕೃತವಾಗಿದ್ದ ಪುಸ್ತಕಕ್ಕೆ ಇದೀಗ ವಿಶ್ವವಿದ್ಯಾನಿಲಯದ ಅಧಿಕೃತ ಮುದ್ರೆ ಲಭಿಸುವ ಸಾಧ್ಯತೆ ಕಂಡು ಬಂದಿದೆ. ಮಂಗಳೂರು ನಗರದ ಕಾಲೇಜೊಂದರ ನಿವೃತ್ತ ಉಪನ್ಯಾಸಕ ಡಾ.ಪಿ. ಅನಂತಕೃಷ್ಣ ಭಟ್ ಅವರು ಬರೆದಿರುವ “ಭಾರತ ಸಂವಿಧಾನ ” ಎಂಬ ಕನ್ನಡ ಕೃತಿ ಹಾಗೂ ಆಂಗ್ಲ ಭಾಷೆಯ ” ಇಂಡಿಯನ್ ಕ್ವಾನ್ಸಿಟಿಟ್ಯೂಶನ್ ” ಎಂಬ ಪುಸ್ತಕಕ್ಕೆ

ಕೆ.ಪಿ.ಎಸ್.ಸಿಯನ್ನು ಸ್ವಚ್ಛಗೊಳಿಸಿ-ಅನರ್ಹ ಅಧ್ಯಕ್ಷರನ್ನು ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

“ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುವುದನ್ನು ತಪ್ಪಿಸಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು” ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ ಅವರು ಹೇಳಿದರು. ಕೆ.ಪಿ.ಎಸ್.ಸಿ.ಯನ್ನು ಭ್ರಷ್ಟ ಆಢಳಿತಗಾರರಿಂದ ಸ್ವಚ್ಛಗೊಳಿಸಲು ಆಗ್ರಹಿಸಿ ಹಾಗೂ ಅನರ್ಹ

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಪ್ರತಿನಿಧಿಗಳ ಸಭೆ

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮ  ಜಿಲ್ಲಾ ಕಾಂಗ್ರೆಸ್ ಕಛೇರಿ ಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಅಧ್ಯಕ್ಷ ಸಿ.ನಾರಾಯಣ್ ಸ್ವಾಮಿ, ಸಂಚಾಲಕರಾದ ವಿಜಯ್ ಸಿಂಗ್, ರಾಷ್ಟೀಯ ಸಲಹಾ ಮಂಡಳಿಯ ಸದಸ್ಯರಾದ D.R. ಪಾಟೀಲ್,V.Y. ಘೋರ್ಪಡೆ, ಮಾಜಿ ಸಚಿವ ರಮಾನಾಥ ರೈ,

ರಾಜ್ಯದ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ರಾಜ್ಯದ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹಾಗೂ ಕೇಂದ್ರ ಸ್ಥಾನಿಕ ಕಾರ್ಯದರ್ಶಿ ಪಿ.ಗೋಪಾಲ್ ರವರ ನಿಯೋಗದಿಂದ ಒತ್ತಾಯಪತ್ರ ಸಲ್ಲಿಸಿ ಮನವರಿಕೆ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪೂರಕವಾಗಿ ಸ್ಪಂದಿಸಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸು ಭರವಸೆ ನೀಡಿದರು.

ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ ಇಂದಿನ ಅಗತ್ಯತೆ: ಡಾ. ಗೋಪಾಕೃಷ್ಣ ಎಂ. ಗಾಂವ್ಕರ್

ಉಡುಪಿ : ಪ್ರಸ್ತುತ ಜಾಗತಿಕವಾಗಿ ಕಂಡು ಬರುವ ಹಿಂಸಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಪರಿಕಲ್ಪನೆ ಅಗತ್ಯವಾಗಿದೆ. ತಾನು ಚನ್ನಾಗಿ ಬದುಕಿ ಇತರರನ್ನೂ ಬದುಕಲು ಅವಕಾಶ ನೀಡುವ ಮನೋಸ್ಥಿತಿ ಬೆಳೆದಾಗ ಉತ್ತಮ ಬದುಕುವ ವಾತಾವರಣ ನಿರ್ಮಾಣವಾಗಲು ಸಾಧ್ಯ. ಸಂವಿಧಾನದ ಅಶಯವಾದ ಶಾಂತಿ, ಸಹಬಾಳ್ವೆ ಹಾಗೂ ಸಮಾನತೆಯ ಚಿಂತನೆಗಳು ಇಂದಿನ ಯುವ ಸಮುದಾಯದಲ್ಲಿ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸರಕಾರಿ

ತ್ರಾಸಿ ಪ್ರವಾಸಿ ಮಂದಿರದ ಬಳಿ ಗಾಂಜಾ ಮಾರಾಟ: ಆರೋಪಿ ಸಹಿತ ಗಾಂಜಾ ವಶಕ್ಕೆ

ಕುಂದಾಪುರ ತಾಲೂಕು ತ್ರಾಸಿ ಪ್ರವಾಸಿ ಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಎಸ್.ಪಿ. ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿ ಸಹಿತ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಎಸ್.ಪಿ ಮಾರ್ಗದರ್ಶನದಲ್ಲಿ ಡಿಎಸ್ಪಿ, ಸಿಪಿಐ ಸಂತೋಷ್ ಕಾಯ್ಕಿಣಿ, ಪ್ರೊಬೆಷನರಿ ಪಿಎಸ್‌ಐ ವಿನಯ್ ಕುಮಾರ್ ಮತ್ತು ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕರಾದ ನಂಜಾನಾಯ್ಕ್ ಎನ್, ನೇತ್ರತ್ವದಲ್ಲಿ ಅಪಾದಿತರಾದ ನಿಶಾನ್ ಮತ್ತು ಪ್ರಥಮ್ ಕುಮಾರ್ ಗಾಂಜಾ ಮಾರಾಟ

ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್‌ : ಓಣಂ ಹಬ್ಬ ಆಚರಣೆ

ಆಯುರ್ವೇದ ಚಿಕಿತ್ಸೆಯ ಮೂಲಕ ಮಂಗಳೂರಿನ ಜನತೆಯ ಮನೆ ಮಾತಾಗಿರುವ ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್‌ನಲ್ಲಿ ಕೇರಳದ ಜನಪ್ರೀಯ ಓಣಂ ಹಬ್ಬವನ್ನು ಆಚರಿಸಲಾಯಿತು. ನಗರದ ವೆಲೆಂಸ್ಸಿಯಾ ಮತ್ತು ಕದ್ರಿಯಲ್ಲಿ ಕಾರ್ಯಚರಿಸುತ್ತಿರುವ ವೇದಂಆರೋಗ್ಯ ಆಯುರ್ವೇದ ಹೆಲ್ತ್ ಸೆಂಟರ್ ಕಳೆದ ಹಲವು ವರ್ಷಗಳಿಂದ ಜನತಗೆ ನಗುಮುಗದ ಸೇವೆಯನ್ನು ನೀಡುತ್ತಾ ಜನತೆಯ ಮನೆಮತಾಗಿದೆ. ಇಂದು ಮುಂಜಾನೆ ಕದ್ರಿಯ ಆಯುರ್ವೇದ ಹೆಲ್ತ್ ಸೆಂಟರ್ ಪೂಕಳಂ ಹಾಕಿ ಸಾಂಪ್ರದಾಯಿಕವಾಗಿ ಓಣಂ ಹಬ್ಬವನ್ನು