Home Archive by category Fresh News (Page 903)

ಸ್ವಾತಂತ್ರ್ಯದಿಂದಲೇ ಅಭಿವೃದ್ಧಿ : ಹರ್ಷಾದ್ ವರ್ಕಾಡಿ

ಮಂಜೇಶ್ವರ:ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ಸಾಧ್ಯ, ಇದಕ್ಕೆ ಭಾರತದೇಶ ಸಾಕ್ಷಿಯಾಗಿದೆ, ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ,

ಕಾರ್ಕಳದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಾರ್ಕಳ: 75ನೇ ಅಮೃತ ಮಹೋತ್ಸವ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ನಿಯಮಾನುಸಾರವಾಗಿ ಬಹಳ ಸರಳವಾಗಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.  ಕಾರ್ಕಳ ತಾಲೂಕು ತಹಶೀಲ್ದಾರರಾದ ಪ್ರಕಾಶ್ ಮರಬಳ್ಳಿ ಧ್ವಜಾರೋಹಣ ಮಾಡಿ ಮಾತನಾಡಿದರು. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತಿ ಗೊಂಡ ಭವ್ಯ ಭಾರತವು ನಡೆದು ಬಂದ ದಾರಿ ಹಾಗೂ ಸಾಧನೆ ತುಂಬಾ ಮಹತ್ವವಾದದ್ದು. ಭಾರತವು ಕೃಷಿ ಪ್ರಧಾನ ದೇಶವಾಗಿದೆ. ರಾಷ್ಟ್ರದ ಬೆನ್ನೆಲುಬಾದ ಕೃಷಿಕನ ಕೈ ಬಲಪಡಿಸುವುದು ನಮ್ಮ

ಮೂಡುಬಿದರೆಯಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ಮೂಡುಬಿದಿರೆಯ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಧ್ವಜವನ್ನುಅರಳಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಂತರ ಮಾತನಾಡಿದ ಕೋಟ್ಯಾನ್ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಜಾತ ಶಶಿಕಿರಣ್ ಮತ್ತು ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ

ದ.ಕ. ಜಿಲ್ಲಾಡಳಿತದಿಂದ 75ನೇ ಸ್ವಾತಂತ್ರ್ಯೋತ್ಸವ: ಸಚಿವ ಅಂಗಾರ ಅವರಿಂದ ತುಳುವಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದೇಶ

ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ತುಳುವಿನಲ್ಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದೇಶ ನೀಡಿದ ಅವರು ನಮ್ಮ ದೇಶವಿಂದು ವಿಶ್ವದಲ್ಲೇ ಚಾರಿತ್ರಿಕ ಕಾಲಘಟ್ಟದಲ್ಲಿದೆ. ನಮಗೆ ಸಿಕ್ಕಿದ ಈ ಸ್ವಾತಂತ್ರ್ಯಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಅದೆಷ್ಟೋ ಕಷ್ಟನಷ್ಟಗಳನ್ನು ಹಿರಿಯರು

ಪೂರಕ ದಾಖಲೆ ಪಡೆಯದೆ ಮನೆ ಕಟ್ಟಲು ಅನುಮತಿ:ಕಟಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿರುದ್ಧ ಆರೋಪ

ಪಹಣೆ ಪತ್ರದಲ್ಲಿ ಹತ್ತು ಮಂದಿ ಹಕ್ಕುದಾರರಿದ್ದರೂ, ಒರ್ವ ವ್ಯಕ್ತಿ ನೀಡಿದ ಅರ್ಜಿಗೆ ಗ್ರಾ.ಪಂ.ನ ಅಧ್ಯಕ್ಷೆ, ಉಪಾಧ್ಯಕ್ಷೆ ಸಹಿತ ಪಿಡಿಒ ಒಳ ಒಪ್ಪಂದ ನಡೆಸಿ ಅನುಮತಿ ನೀಡುವ ಮೂಲಕ ಅಕ್ರಮ ನಡೆಸಿದ್ದಾರೆ ಎಂಬುದಾಗಿ ಒರ್ವ ಹಕ್ಕುದಾರ ಜಾನ್ ರಿಚಾರ್ಡ್ ತಿಳಿಸಿದ್ದಾರೆ. ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಪಾರ್ಮ್ ನಂಬರ್ ೧೦ ಸಹಿತ ಪೂರಕ ದಾಖಲೆಗಳೇ ಇಲ್ಲದೆ ನೀಡಿದ ಅರ್ಜಿಗೆ ಕಟಪಾಡಿ ಗ್ರಾ.ಪಂ. ಪಿಡಿಒ ಮಮತ ವಿ.

ಕೋವಿಡ್-19 ನಿಯಂತ್ರಿಸಲು ಸಿಎಂ ನೀಡಿದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ:  ಜಿಲ್ಲಾಧಿಕಾರಿ

ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹಾಗೂ ಅದರ ಪಾಸಿಟಿವಿಟಿಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ

ಆಪಲ್ ಮೊಬೈಲ್ ಶೋರೂಂನಿಂದ ಕಳವು ಪ್ರಕರಣ: ಓರ್ವ ಆರೋಪಿ ಸೆರೆ, 40ಮೊಬೈಲ್ ವಶಕ್ಕೆ

 ಮಂಗಳೂರಿನ ಆಪಲ್ ಮೊಬೈಲ್ ಶೋರೂಂ ಒಂದರಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಓರ್ವ ಆರೋಪಿ ಸಹಿತ ಕಳವಾದ 40 ಮೊಬೈಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಯನ್ನು ಮುಂಬೈನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದು, ಸುಮಾರು 41 ಲಕ್ಷ ರೂ. ವೌಲ್ಯದ ಕಳವಾದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ಹೇಳಿದ್ದಾರೆ. ಈ ಕುರಿತು

‘ಸೌಹಾರ್ದ ಸಾಮೂಹಿಕ ವಿವಾಹ’ಕ್ಕೆ ಅರ್ಜಿ ಆಹ್ವಾನ

ಆರ್ಥಿಕವಾಗಿ ತೀರಾ ಹಿಂದುಳಿದಿರುವ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಬಜ್ಪೆ ಝಕರಿಯಾ ಫೌಂಡೇಶನ್ ಹಮ್ಮಿಕೊಂಡಿದ್ದ, ಲಾಕ್ ಡೌನ್ ಕಾರಣದಿಂದ ಮುಂದೂಡಲಾದ ‘ಸೌಹಾರ್ದ ಸಾಮೂಹಿಕ ವಿವಾಹ ಸಮಾರಂಭ’ವು ಅಕ್ಟೋಬರ್ 16ರಂದು ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಂಗಣ ‘ಝರಾ ಆಡಿಟೋರಿಯಂ’ನಲ್ಲಿ ನಡೆಯಲಿದೆ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು

ಕಡಬ: ಬೈಕ್ ಗೆ ಕಾರು ಢಿಕ್ಕಿ : ಸವಾರನಿಗೆ ಗಂಭೀರ ಗಾಯ

ಕಡಬ: ಬೈಕಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕಡಬ- ಸುಬ್ರಹ್ಮಣ್ಯ ರಸ್ತೆಯ ಮರ್ಧಾಳದಲ್ಲಿ  ನಡೆದಿದೆ. ಬಂಟ್ರ ಗ್ರಾಮದ ಕಂಪ ತುಂಬಿ ಮನೆ ನಿವಾಸಿ ಮೋನಪ್ಪ ಗೌಡ (60 )ಗಾಯಗೊಂಡವರು. ಕಲ್ಲಾಜೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮರ್ಧಾಳ ಜಂಕ್ಷನ್ ಬಳಿಯ ತಿರುವಿನಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ

ಮಾಣಿಲ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆಸಿದ ಪ್ರಕರಣ:ಇಬ್ಬರು ಆರೋಪಿಗಳ ಬಂಧನ

ವಿಟ್ಲ: ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಮಾಣಿಲ ಗ್ರಾಮದ ಕೊಡಂದೂರು ನಿವಾಸಿ ವಿಜಯ ಕುಮಾರ್ ಕ್ರಾಸ್ತಾ(40), ಮತ್ತು ಮಂಜೇಶ್ವರ ತಾಲೂಕಿನ ಸೀತಂಗೋಳಿ ಬೆದ್ರಂಪಲ್ಲ ನಿವಾಸಿ ಜಯಪ್ರಕಾಶ್(40) ಬಂಧಿತ ಆರೋಪಿಗಳು. ಸಂಘದ ಮೇಲ್ಚಾವಣಿ ಹಂಚನ್ನು ಕಳ್ಳರು ತೆಗೆದು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದು