Home Archive by category Fresh News (Page 953)

ರಾಜ್ಯದಲ್ಲಿ ಜು.5ರಿಂದ 3.0 ಅನ್‌ಲಾಕ್ ಜಾರಿ: ಮತ್ತಷ್ಟು ಸಡಿಲಿಕೆ ಮಾಡಿ ಸರ್ಕಾರ ಆದೇಶ

ರಾಜ್ಯಾದ್ಯಂತ ಜುಲೈ 5ರಿಂದ 3.0 ಅನ್‍ಲಾಕ್ ಜಾರಿಯಾಗಲಿದ್ದು, ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ರದ್ದುಗೊಳಿಸಿ, ಮಾಲ್‍ಗಳ ಓಪನ್ ಗೆ ಗ್ರೀನ್ ಸಿಗ್ನಲ್ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅನ್ ಲಾಕ್ 3.0 ಜಾರಿಯಾಗುವ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮಹತ್ವದ ಸುದ್ದಿಗೋಷ್ಟಿ ನಡೆಸಿ ಈ ಕುರಿತು ಘೋಷಣೆ ಮಾಡಿದ್ದಾರೆ. ಮಾಲ್‍ಗಳ ಓಪನ್‍ಗೆ ರಾಜ್ಯ

ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಟರ್ಪಾಲ್‍ಗಳ ವಿತರಣೆ

ನಗರದ ಹೊಯಿಗೆ ಬಜಾರ್, ಜಪ್ಪಿನಮೊಗರು, ಕೂಳೂರು, ಮುಳಿಹಿತ್ಲು, ತೋಕೂರು ಪರಿಸರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿದ್ದ ಅಲೆಮಾರಿ ಸಮುದಾಯದ ಶಿಳ್ಳೆಕ್ಯಾತ ಕುಟುಂಬಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಟರ್ಪಾಲ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾದ

ಅಕ್ರಮ ಗಾಂಜಾ ಸಾಗಾಟ ಪ್ರಕರಣ: ಇಬ್ಬರ ಬಂಧನ

ಮಂಗಳೂರು: ಆಂಧ್ರಪ್ರದೇಶದಿಂದ ಕಾಸರಗೋಡಿಗೆ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉರ್ವ ಪೊಲೀಸ್  ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಚೆಕ್ ಪೊಲೀಸ್  ಬಳಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್  ಡಿಸಿಪಿ ಹರಿರಾಂ ಶಂಕರ್ ಹೇಳಿದರು. ಅವರು ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ಮಾಧ್ಯಮಗೊಷ್ಟಿ ನಡೆಸಿ ಮಾತನಾಡಿ, ಉರ್ವ ಪೊಲೀಸ್  ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಚೆಕ್ ಪೊಲೀಸ್  ಬಳಿ ಖಚಿತ ಮಾಹಿತಿ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ನ್ಯೂಟ್ರೀಲೈಟ್ ಕಾರ್ಯಕ್ರಮ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಮಕ್ಕಳಲ್ಲಿ ಆರೋಗ್ಯ ಮತ್ತು ಪೋಷಕಾಂಶಯುಕ್ತ ಆಹಾರದ ಬಗ್ಗೆ ಅರಿವು ನೀಡುವ ಉದ್ದೇಶದಿಂದ ಜೂನ್ ತಿಂಗಳಲ್ಲಿ ನ್ಯೂಟ್ರೀಲೈಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರಗಿತು. ಈ ಪ್ರಯುಕ್ತ ಆಯೋಜಿಸಿರುವ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳ ಪ್ರಾತ್ಯಕ್ಷಿಕೆಗಳ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ನ್ಯೂಟ್ರಿಲೈಟ್ 2021 ಸಮಾಪನಗೊಂಡಿತು. ಸಂಸ್ಥೆಯ

ಕೋಳಿ ಮೊಟ್ಟೆಗೆ ಹೆಚ್ಚಿದ ಬೇಡಿಕೆ: ಮೊಟ್ಟೆ ದರದಲ್ಲೂ ಏರಿಕೆ

ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಿದ್ದು, ಸರಬರಾಜಿನಲ್ಲಿ ಕೂಡ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ ಹಾಗೂ ಬೆಲೆಯೂ ಗಗನಕ್ಕೆ ಏರಿರುವುದರಿಂದ ಮೊಟ್ಟೆಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಇದೆ. ಏಪ್ರಿಲ್ ಅಂತ್ಯದಿಂದ ಮೊಟ್ಟೆ ದರದಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಚಿಲ್ಲರೆ ಅಂಗಡಿಯಲ್ಲಿ 5ರೂ. ಇದ್ದ ದರ 6.50 ರಿಂದ 7 ರೂ. ತಲುಪಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಹಾಗೂ ಕಡಲ ಮೀನುಗಾರಿಕೆ ರಜೆಯ ಹಿನ್ನೆಲೆಯಲ್ಲಿ

ಮಂಗಳೂರು : ಗುಂಡು ಹಾರಿಸಿ ನಾಯಿ ಹತ್ಯೆ

ಮಂಗಳೂರು ನಗರದ ಶಿವಭಾಗ್‍ನ ಆಭರಣ ಜ್ಯುವೆಲ್ಲರ್ಸ್ ಮಳಿಗೆಯ ಹಿಂಭಾಗದ ರಸ್ತೆಯಲ್ಲಿ ಗುರುವಾರ ರಾತ್ರಿ ವೇಳೆ ಬೀದಿ ನಾಯಿಯೊಂದನ್ನು ಗುಂಡು ಹೊಡೆದು ಸಾಯಿಸಲಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬ ಈ ಕೃತ್ಯವೆಸಗಿರುವ ಬಗ್ಗೆ ಶಂಕೆ ಇದ್ದು, ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಭಾಗ್ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಬೀದಿ ನಾಯಿಗೆ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆ ಮಾಡಿದ ಈ ಪ್ರಕರಣ ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಘಟನೆ ಪ್ರಾಣಿ

ಕೊಟ್ಟಾರ ಕರ್ಲುಟ್ಟಿ ಸಾನಿಧ್ಯಕ್ಕೆ ಬೆಳ್ಳಿಯ ದರ್ಶನದ ಬೆತ್ತ ಸೇವೆ

ಕೊಟ್ಟಾರ ಶ್ರೀಯಾನ್ ಮಹಾಲಿನಲ್ಲಿರುವ ವಿದ್ಯಾ ಸರಸ್ವತಿ ಕ್ಷೇತ್ರದ ಪರಿವಾರ ದೇವರಾದ ಕರ್ಲುಟ್ಟಿ ಸಾನಿಧ್ಯಕ್ಕೆ ಬೆಳ್ಳಿಯ ಕವಚ ಇರುವ ೫ ದರ್ಶನದ ಬೆತ್ತ ಮತ್ತು ಕರ್ಲುಟ್ಟಿ ಅಲ್ಲ ಆರಾಧನೆಕ್ಕೆ ಬೇಕಾಗಿರುವ ಪೂಜಾ ಸಾಮಗ್ರಿಗಳನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದ ಸಹಾಯಕ ಪ್ರಬಂಧಕರಾದ ಪ್ರವೀಣ್ ಕುಮಾರ್ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ನವೀನ್ ಚಂದ್ರ ಶ್ರೀಯಾನ್ ರವರಿಗೆ ಹಸ್ತಾಂತರಿಸಿದರು. ನವಗ್ರಹ ಶಾಂತಿ ಹೋಮ ಮಾಡಿ ನವ ಕಲಶವನ್ನು ಬೆಳ್ಳಿಯ ಬೆತ್ತಕ್ಕೆ ಅಭಿಷೇಕ

ದ.ಕ. ಜಿಲ್ಲೆಯಲ್ಲಿ ಜುಲೈ 2ರಿಂದ ಮತ್ತಷ್ಟು ಅನ್‍ಲಾಕ್: ಸಂಜೆ 5ರ ವರೆಗೆ ಖರೀದಿ, ಸಂಚಾರಕ್ಕೆ ಅವಕಾಶ: ಜಿಲ್ಲಾಧಿಕಾರಿ

ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯನ್ನು ಜು.2ರಿಂದ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಮತ್ತು ಸಂಚಾರಕ್ಕೆ ಅನುಮತಿ ನೀಡಿ ರಾಜ್ಯ ಸರಕಾರ ಆದೇಶಿಸಿದೆ. ಸರಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುವುದಾಗಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 2ರಿಂದ ಮತ್ತಷ್ಟು ಅನ್‍ಲಾಕ್ ಜಾರಿಯಾಗಲಿದ್ದು, ಬೆಳಗ್ಗೆ 5ರಿಂದ

ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ: ಜುಲೈ2ರಿಂದ ಸಂಜೆ 7 ರ ತನಕ ಅವಕಾಶ: ಸಚಿವ ಕೋಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾದ ಹಿನ್ನೆಲೆಯಲ್ಲಿ ಜುಲೈ 2ರಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ರ ವರಗೆ ಅವಕಾಶಗಳನ್ನು ನೀಡಲಾಗಿದೆ ಎಂದು ವಿ4 ನ್ಯೂಸ್‌ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಬಸ್, ಮಾರ್ಕೆಟ್, ಸೂಚಿತ ಮಳಿಗೆಗಳಿಗೆ ಅವಕಾಶವನ್ನು ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದೆ. ಜುಲೈ 5ರ ವರೆಗೆ ಮಾರ್ಗಸೂಚಿ ಜಾರಿಯಲ್ಲಿರಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ