Home Archive by category Fresh News (Page 956)

“ಹಡಿಲು ಭೂಮಿ ಕೃಷಿ ಅಂದೋಲನ”ರಾಷ್ಟ್ರಕ್ಕೆ ಮಾದರಿ: ಸಚಿವ ಬಿ.ಸಿ. ಪಾಟೀಲ್

ಫಲವತ್ತಾದ ಕೃಷಿ ಭೂಮಿಗಳನ್ನು ಹಡಿಲು ಬಿಡುವುದು ರಾಷ್ಟ್ರಕ್ಕೆ ಮಾಡುವ ದ್ರೋಹ. ಭೂಮಿ ತಾಯಿಯನ್ನು ಹಸನಾಗಿಸಿದರೆ ಆ ತಾಯಿ ನಮಗೆ ಚಿನ್ನದಂತಹ ಬೆಳೆಯನ್ನು ನೀಡುತ್ತಾಳೆ. ಹಡಿಲು ಭೂಮಿಯನ್ನು ಕೃಷಿ ಮಾಡುವಂತಹ ಈ ಪುಣ್ಯದ ಕಾರ್ಯವನ್ನು ಉಡುಪಿಯಲ್ಲಿ ಹಮ್ಮಿಕೊಂಡು ರಾಷ್ಟ್ರಕ್ಕೆ ಮಾದರಿಯಾಗಿದ್ದೀರಿ ಎಂದು ಕೃಷಿ ಸಚಿವರಾದ ಶ್ರೀ ಬಿ. ಸಿ. ಪಾಟೀಲ್ ಹೇಳಿದರು. ಹಡಿಲು ಭೂಮಿ

ಎಚ್ ಆರ್ ಪಿ ಹಗರಣ : ಕಂದಾಯ ನಿರೀಕ್ಷಕ ಮಂಜುನಾಥ್ ಬಂಧನ

ಸಕಲೇಶಪುರ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಹಗರಣಕ್ಕೆ ಸಂಬಂಧಿಸಿದಂತೆ ಯಸಳೂರು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇಡೀ ರಾಜ್ಯದ ಗಮನ ಸೆಳೆದಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಎಚ್‌ಆರ್‌ಪಿ ಭೂ ಹಗಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.   ಆಲೂರು ತಾಲ್ಲೂಕಿನ ಹೆಚ್‌ಆರ್‌ಪಿ  ಸಂತ್ರಸ್ತರಿಗೆ ಸಕಲೇಶಪುರ

ಮಂಗಳೂರಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ

ಮಂಗಳೂರು: ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 354 ಕೆಜಿ ಮಾದಕ ದ್ರವ್ಯ ವಸ್ತುಗಳನ್ನು ಮುಲ್ಕಿ ಕೊಲನಾಡ್ ಜಂಕ್ಷನ್ ಸಮೀಪದ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಶನಿವಾರ ನಾಶಪಡಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ನಡೆಸಿದ ಕಾರ್ಯಾಚರಣೆ ಹಾಗೂ ವಿವಿಧ ಪೊಲೀಸ್

ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ: ಬೆಳ್ತಂಗಡಿಯಲ್ಲಿ ರೈತ ಸಂಯುಕ್ತ ಮೋರ್ಚಾದಿಂದ ಪ್ರತಿಭಟನೆ

“ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ” ಘೋಷಣೆಯಡಿಯಲ್ಲಿ ಭಾರತಾದ್ಯಂತ ಪ್ರತಿಭಟನೆ ನಡೆಸಿ ದೆಹಲಿಯಲ್ಲಿ ಕಳೆದ ಏಳು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಹೋರಾಟ ನಡೆಸಲು ರೈತ ಸಂಯುಕ್ತ ಮೋರ್ಚ ನೀಡಿದ ಕರೆಯಂತೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಮಾತಾಡುತ್ತಾ ಕೊರೋನಾ ಸಂಕಷ್ಟದ ಲಾಕ್ ಡೌನ್ ಸಮಯದಲ್ಲಿ ರೈತ ವಿರೋದಿಯಾಗಿ ರೈತ ಪರ ಮಸೂದೆಗಳ ತಿದ್ದುಪಡಿ ಮಾಡಿದ ಬಿಜೆಪಿ

ಸ್ವಚ್ಚ ಪರಿಸರ ನಿರ್ಮಾಣ ಮಲೇರಿಯಾ ನಿಯಂತ್ರಣದಲ್ಲಿ ಯಶಸ್ವಿಗೆ ದಾರಿ- ಡಾ. ದೀಪಕ್ ರೈ 

ಪುತ್ತೂರು: ದೇಶದಲ್ಲಿ ಸೊಳ್ಳೆಗಳ ಮೂಲಕ ಹರಡುವ ಹಲವು ರೋಗಗಳಿದ್ದು, ಈ ಪೈಕಿ ಮಲೇರಿಯಾ ರೋಗವೂ ಒಂದಾಗಿದೆ. ನಮ್ಮ ಸುತ್ತ ಮುತ್ತ ನೀರು ನಿಲ್ಲದಂತೆ ಮಾಡಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವುದರಿಂದ ಮಲೇರಿಯಾ ನಿಯಂತ್ರಣದಲ್ಲಿ ನಾವು ಯಶಸ್ವು ಕಾಣಲು ಸಾಧ್ಯ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ಅವರು ದ.ಕ.ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು ಇದರ ವತಿಯಿಂದ ಮಲೇರಿಯಾ

ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ’ ಬಗ್ಗೆ ಜೂ.28ರಂದು ವರ್ಚುವಲ್ ವಿಚಾರ ಸಂಕಿರಣ

ಮಂಗಳೂರು: ಶ್ರೀನಿವಾಸ ವಿ.ವಿ ಯ ಶಿಕ್ಷಣ ವಿದ್ಯಾಲಯದ ವತಿಯಿಂದ ‘ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ’ ಬಗ್ಗೆ ಜೂ.28ರಂದು ವರ್ಚುವಲ್ ವಿಚಾರ ಸಂಕಿರಣ ನಡೆಯಲಿದೆ. ಈ ವಿಚಾರಸಂಕಿರಣದಲ್ಲಿ ಮಹಾತ್ಮ ಜ್ಯೋತಿ ಬಾಪುಲೆ ರೋಹಿಲ್ ಖಂಡ್, ಉತ್ತರ ಪ್ರದೇಶ ವಿ.ವಿಯ ಶಿಕ್ಷಣ ವಿಭಾಗದ ಪ್ರೊ. ಗೌರವ್ ರಾವ್, ದಿಕ್ಸೂಚಿ ಭಾಷಣವನ್ನು ಮಂಡಿಸಲಿದ್ದಾರೆ. ಶ್ರೀನಿವಾಸ್ ವಿ.ವಿಯ ಸಹ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್, ಇವರ ಉತ್ತರಾಧಿತ್ವದಲ್ಲಿ ನಡೆಯುವ,

ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ

ಬೈಕಂಪಾಡಿ ಮಹಿಳಾ ಸಮಾಜದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಇಂದಿರಾ ಮಾಧವ ವಿದ್ಯಾರ್ಥಿ ಭವನದಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ.ಬೈಕಂಪಾಡಿಯ ಎಲ್ಲಾ ವಯೋ ಮಾನದ ಜನರಿಗೆ ಮತ್ತು ಮುಖ್ಯವಾಗಿ ಮೀನುಗಾರಿಕಾ ವೃತ್ತಿಯವರಿಗೆ ಲಸಿಕೆಯನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್ ಸಾಲ್ಯಾನ್ ಅವರು ಮಾತನಾಡಿ,

ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಮಾದಕ ವಸ್ತುಗಳ ನಾಶ

ಪಡುಬಿದ್ರಿ: ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಪ್ಪಿ ಮಾಡಿದ ಒಂದು ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಉಡುಪಿ ಜಿಲ್ಲೆಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್ಯ್ ಎನ್ವಯರ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ನಾಶಪಡಿಸಲಾಯಿತು.  ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್

ವಿಟ್ಲದಲ್ಲಿ ವಾರಾಂತ್ಯದ ಕರ್ಪ್ಯೂ ಯಶಸ್ವಿ

ವಿಟ್ಲ: ಜಿಲ್ಲಾಡಳಿತ ಆದೇಶ ನೀಡಿದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಯಶಸ್ವಿಯಾಗಿದೆ. ವಿಟ್ಲದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಮಂಜುನಾಥ ಮತ್ತು ಪೊಲೀಸರ ತಂಡ ನಾಕಾಬಂಧಿ ಅಳವಡಿಸಿದ್ದರು. ಹಾಲು ಮತ್ತು ಮೆಡಿಕಲ್ ಹೊರತುಪಡಿಸಿ, ಅನಗತ್ಯವಾಗಿ ಪೇಟೆಗೆ ಬಂದ ವಾಹನಗಳನ್ನು ಮುಟ್ಟುಗೋಲು ಹಾಕಲಾಯಿತು. ವಿಟ್ಲ ಪೇಟೆಯಲ್ಲಿ ಜನಸಂಚಾರ, ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದು, ಪೇಟೆ ಸಂಪೂರ್ಣ ಸ್ತಬ್ಧಗೊಂಡಿದೆ.

ಡ್ರಗ್ಸ್ ಮುಕ್ತ ಮಂಗಳೂರಿಗೆ ಸಹಕರಿಸಿ: ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್

ಮಂಗಳೂರು ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ಪತ್ತೆಹಚ್ಚಿರುವುದಲ್ಲದೆ, ಪ್ರಮುಖ ಆರೋಪಿಗಳನ್ನೂ ಬಂಧಿಸಲಾಗಿದೆ. ಡ್ರಗ್ಸ್ ಮುಕ್ತ ಮಂಗಳೂರು ಮಾಡುವಲ್ಲಿ ಇಲಾಖೆ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಅವರು ಮಂಗಳೂರಲ್ಲಿ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗಳ ವೀಕ್ಷಣೆ ಮಾಡಿ,