Home Archive by category karavali (Page 22)

‘ಬಲೆ ತುಳು ಓದುಗ’ ;ನ.12 ರಂದು ಅಕಾಡೆಮಿಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಭೇಟಿ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿ, ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ ; ಬಲೆ ತುಳು ಓದುಗ’ ಅಭಿಯಾನದ ಹನ್ನೆರಡನೇ ಕಾರ್ಯಕ್ರಮ ನ.12 ರಂದು ನಡೆಯಲಿದೆ.ಬುಧವಾರದಂದು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ 30 ವಿದ್ಯಾರ್ಥಿಗಳು ಉರ್ವಾಸ್ಟೋರ್ ನಲ್ಲಿರುವ

ಬೆಳ್ಳೆ ಗ್ರಾಮ ಪಂಚಾಯತ್ ಸಂತೃಪ್ತಿ ನಗರದಲ್ಲಿ “ಹೈ- ಮಾಸ್ಟ್ ದೀಪ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಕಾಪು:ಬೆಳ್ಳೆ ಗ್ರಾಮ ಪಂಚಾಯತ್ ಮತ್ತು ಹೃದಯಂ ಫೌಂಡೇಶನ್ ಸಹಯೋಗದೊಂದಿಗೆ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೃಪ್ತಿ ನಗರದ ಬಳಿ ಅಳವಡಿಸಲಾದ “ಹೈ- ಮಾಸ್ಟ್ ದೀಪದ ಎಂದರು ಉದ್ಘಾಟನೆಯನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು. ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ ಹೈ ಮಾಸ್ಟ್ ದೀಪದವನ್ನು ಕೊಡಮಾಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಆಚಾರ್ಯ,

ಕರ್ನುರೂ ಕಾರ್ಯಕ್ಷೇತ್ರದಲ್ಲಿ ದಾರಿದೀಪ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಪುತ್ತೂರು ತಾಲೂಕಿನ ಅರಿಯಡ್ಕ ವಲಯದ ಕರ್ನುರೂ ಕಾರ್ಯಕ್ಷೇತ್ರದಲ್ಲಿ ದಾರಿದೀಪ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಕರ್ನುರೂ ಶಾಲೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಸದಾಶಿವ ರೈ ಇವರು ಉದ್ಘಾಟಿಸಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡ ಈ ಜ್ಞಾನ ವಿಕಾಸ ಕಾರ್ಯಕ್ರಮ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ಹಾಗೂ ನಮ್ಮ ಸಂಸ್ಕೃತಿ

ಸೇವಾರ್ಥ ಏಕಾದಶೋತ್ತರ ಶತಾಧಿಕ ಸಹಸ್ರ ನಾಳೀಕೇರ ಮಹಾಗಣಪತಿ ಯಾಗ

ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ವಂಡಾರು ಇಲ್ಲಿ ವೇದಮೂರ್ತಿ ಶ್ರೀ ರಮೇಶ ಬಾಯರಿ ವಂಡಾರು ಇವರ ನೇತೃತ್ವದಲ್ಲಿ ಶ್ರೀ ಜಯಕುಮಾರ ಅಳಗುಂಡಗಿ ಶ್ರೀಮತಿ ಶ್ವೇತಾ ಜಯಕುಮಾರ ಇವರ ಸೇವಾರ್ಥ ಏಕಾದಶೋತ್ತರ ಶತಾಧಿಕ ಸಹಸ್ರ ನಾಳೀಕೇರ ಮಹಾಗಣಪತಿ ಯಾಗ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು. ವೇದಮೂರ್ತಿ ರಮೇಶ್ ಬಾಯರಿ ಮಾತನಾಡಿ ಮಹಾಗಣಪತಿಯನ್ನು ಪರಮಾತ್ಮನ ಮತ್ತು ಸೃಷ್ಟಿಕರ್ತನ ರೂಪವಾಗಿ ಪರಿಗಣಿಸಲಾಗುತ್ತದೆ. ಬ್ರಹ್ಮಾಂಡದ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, 18 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025 ಪರಮಪೂಜ್ಯ

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಇಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, 18 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025 ಪರಮಪೂಜ್ಯ ಜಗದ್ಗುರುಗಳಾದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸಿ ಅರ್ಚನೆಯೊಂದಿಗೆ ಸರಸ್ವತಿ ವಂದನದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಶ್ರೀ.

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ-2025 ಸಮಾರೋಪ ಮತ್ತು ಸನ್ಮಾನ

ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಭ್ರಮ -2025 ಇದರ ಸಮಾರೋಪ ಸಮಾರಂಭ- ಸನ್ಮಾನ , ಗಾನ ವೈಭವ ಕಾರ್ಯಕ್ರಮ ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಹಾಗೂ ಕುರಲ್ ತುಳುಕೂಟ ದುಗ್ಗಲಡ್ಕ ಇದರ ಸಹಯೋಗದೊಂದಿಗೆ ದುಗ್ಗಲಡ್ಕದ ಅಯ್ಯಪ್ಪ ಭಜನಾ ಭಜನಾ ಮಂದಿರದ ಸಭಾಭವನದಲ್ಲಿ ನ.7 ರಂದು ಸಂಜೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಮಾರೋಪ ಭಾಷಣ ಮಾಡಿದ ಸು‌ಳ್ಯ

ಕೀರ್ತನೆಯ ಹರಿಕಾರ ಸಂತಶ್ರೇಷ್ಠ ಕನಕದಾಸ ಜಯಂತಿ

ಆಲೂರು:ಪಟ್ಟಣದ ಮುಖ್ಯರಸ್ತೆಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಿ ನಂತರ ವೇದಿಕೆ ಕಾರ್ಯಕ್ರಮವನ್ನು ತಾಲ್ಲೂಕುವಕಚೇರಿ ಆವರಣದಲ್ಲಿ ಆಯೋಜಿಸಿದ್ದು,ಕಾರ್ಯಕ್ರಮವನ್ನು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕನಕದಾಸರ ಜನ್ಮ ದಿನವನ್ನು ‘ಕನಕದಾಸ ಜಯಂತಿ’ಎಂದು ಆಚರಿಸಲಾಗುತ್ತದೆ. ಕತ್ತಿ ಗುರಾಣಿ ಹಿಡಿದು ರಣರಂಗದಲ್ಲಿ

ಗಾಂಜಾ ಮಾರಾಟದಲ್ಲಿ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರ ಬಂಧನ

ಸಕಲೇಶಪುರ- ನಗರ ಪೊಲೀಸ್ ಠಾಣೆ ವ್ಯಾಪ್ತಿಯ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ಎಂಬ ಇಬ್ಬರನ್ನು ಪೊಲೀಸರು ದಸ್ತಗಿರಿಮಾಡಿದ್ದಾರೆ. ಇವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸುಮಾರು 500 ಗ್ರಾಂ (ಅರ್ಧ ಕಿಲೋ) ಗಾಂಜಾ ಸೊಪ್ಪನ್ನು ಮಾರಾಟಮಾಡುತ್ತಿದ್ದ ವೇಳೆ ಹಿಡಿಯಲ್ಪಟ್ಟಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಂತರ ಅವರನ್ನು

ಮಕ್ಕಳಲ್ಲಿ ಯಕ್ಷಗಾನದ ಒಲವು ತುಂಬಿಸಬೇಕು : ಕರಿಂಜೆ ಶ್ರೀ

ಮೂಡುಬಿದಿರೆ: ಮಕ್ಕಳಲ್ಲಿ ಯಕ್ಷಗಾನದ ಒಲವನ್ನು ತುಂಬಿದಾಗ ತುಳುನಾಡಿನಲ್ಲಿ ಯಕ್ಷಗಾನ ಕಲೆ ಇನ್ನಷ್ಟು ಶ್ರೀಮಂತ ಕಲೆಯಾಗಿ ಬೆಳೆಯಲು ಸಾಧ್ಯ ಎಂದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ಶ್ರೀ ಯಕ್ಷನಿಧಿ ಮೂಡುಬಿದಿರೆ ಇದರ ದಶಮಾನೋತ್ಸವದ ಅಂಗವಾಗಿ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಭಾ ಕಾಯ೯ಕ್ರಮದಲ್ಲಿ ಆಶೀರ್ವಚನ ನೀಡಿದರು. ಜೈನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಭಾತ್ ಕುಮಾರ್ ಬಲ್ನಾಡ್ ಮುಖ್ಯ ಅತಿಥಿಯಾಗಿ

ಮಣಿಪಾಲ: ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರ

ಉಡುಪಿ: ಅಪ್ರಾಪ್ತ ಬಾಲಕಿಯ ಜೊತೆ ಯುವಕನೋರ್ವ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಘಟನೆ ಮಣಿಪಾಲದಲ್ಲಿ ನಡೆದಿದೆ. ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ. ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (೨೦) ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದರ