Home Archive by category karavali (Page 3)

ಮೂಡುಬಿದಿರೆ : ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ : ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೀತA ಬಸವರಾಜ್ ಪಟ್ಟಣಶೆಟ್ಟಿ (121), ದೀಕ್ಷಿತ್ ಕುಮಾರ್

ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮ

ಸಜೀಪ ನಡು; ಇಲ್ಲೀಯ ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮವು ಜನವರಿ 22 ರಿಂದ 25 ವರೇಗೆ ಬಹಳ ವಿಜೃಂಭಣೆಯಿಂದ ಜರುಗಲಿರುವ ಅಲ್ ಹಾಜಿ ಅಬ್ದುಲ್ ಲತೀಫ್ ನಿಝಾಮೀ, ಅಬ್ದುಲ್ ಸಲಾಂ ಫೈಝಿ ಎಡಪಾಲ, ವಿಧಾನ ಸಭಾ ಸ್ಪೀಕರ್ ಡಾಕ್ಟರ್ ಯು.ಟಿ.ಖಾದರ್, ಯು.ಕೆ.ಅಬ್ದುಲ್‌ ಅಝೀಝ್ ದಾರಿಮಿ, ಕೆ.ಐ.ಅಬ್ದಲ್ ಖಾದಿರ್ ದಾರಿಮಿ, ಇಬ್ರಾಹೀಂ ಬಾತಿಷಾ ತಂಙಳ್,ಎಚ್.ಎಸ್.ಹೈದರ್ ದಾರಿಮಿ ಮುಂತಾದ ಉಲೇಮಾ,ಉಮರಾಗಳು

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ

ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ: 60/2009, ಕಲಂ:420 ಐಪಿಸಿ ಪ್ರಕರಣದಲ್ಲಿ, ಬಯೋಗ್ಯಾಸ್ ಸಂಪರ್ಕ ಮಾಡಿಸುವುದಾಗಿ ನಂಬಿಸಿ, ಹಣ ಪಡೆದು ಮೋಸ ಮಾಡಿದ ಪ್ರಕರಣದಲ್ಲಿ, ಸುಮಾರು 10 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಾಸನ ಚನ್ನರಾಯಪಟ್ಟಣ ನಿವಾಸಿ S N ಚಂದ್ರೆಗೌಡ ಎಂಬಾತನನ್ನು, ಹಾಸನ ಚನ್ನರಾಯಪಟ್ಟಣದ ಬೆಳಗಿಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ದಿನಾಂಕ 20/01/2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಗೆ “ಕನ್ನಡ ಪಯಸ್ವಿನಿ ಅವಾರ್ಡ್- 2026” ಪ್ರದಾನ

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026″ ಅಂತರ್ ರಾಜ್ಯ ಪ್ರಶಸ್ತಿಯನ್ನು ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಭಾನುವಾರ ಗಣ್ಯ ಸಾಹಿತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ ಅಂಕಣಕಾರರಾಗಿ ಹಾಗೂ ಕ್ರೀಡಾ ವಿಮರ್ಶಾತ್ಮಕ ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಎಸ್.

ಮಾ. 1 ರಿಂದ 3 ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿ ಪ್ರಯುಕ್ತ ಮಾತೃ ವೈಭವ

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿಯ ಪ್ರಯುಕ್ತ ಮಾರ್ಚ್ 1 ರಿಂದ 3 ರ ವರೆಗೆ ಕಾಪುವಿನ ಅಮ್ಮನ ಸನ್ನಿದಾನದಲ್ಲಿ ಭಕ್ತರ ಸಹಕಾರದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ” ಮಾತೃ ವೈಭವ ” ವನ್ನು ವಿಜೃಂಭಣೆಯಿಂದ ಆಚರಿಸಲು ಭಾನುವಾರ ಶ್ರೀಮಾತಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು. ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ

ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 50 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಯಾರು ಮುಖ್ಯ ರಸ್ತೆಯಿಂದ ಬಬ್ಬುಸ್ವಾಮಿ ರಸ್ತೆ ಅಭಿವೃದ್ಧಿ – 10 ಲಕ್ಷ, ಪಡು ಗುಡ್ಡೆ ಸುಧಾಕರ್ ಕುಲಾಲ್ ತಾಂಡೂರು ರಸ್ತೆ ಅಭಿವೃದ್ಧಿ – 10 ಲಕ್ಷ, ಕಳತ್ತೂರು

ವಿಶ್ವ ಬ್ಯಾಂಕ್ ಕುಡಿಯುವ ನೀರು ಸರಬರಾಜು ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಜಿ. ಬಂಗೇರರವರು ಆಯ್ಕೆ

ಮೂಲ್ಕಿ:ವಿಶ್ವ ಬ್ಯಾಂಕ್ ನೆರವಿನ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿ 10ನೇ ತೋಕೂರು, ಕ್ಲಸ್ಟರ್-2, ಮುಲ್ಕಿ ತಾಲೂಕು, ಇದರ 28ನೇ ವಾರ್ಷಿಕ ಮಹಾಸಭೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಕಾರ್ಯಾಲಯದ ಮುಂಭಾಗದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷರಾಗಿ ಗಣೇಶ್ ಜಿ. ಬಂಗೇರವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯರಾಮ ಆಚಾರ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಕುಸುಮ ಎಚ್ ಕೋಟ್ಯಾನ್ ಕೋಶಾಧಿಕಾರಿಯಾಗಿ ಮಹಮ್ಮದ್ ಶರೀಫ್, ಜೊತೆಕೋಶಾಧಿಕಾರಿಯಾಗಿ ಥೋಮಸ್ ಕುಟಿನ್ಹೊ,

ಗಾಳಿಪಟಕ್ಕೆ ಬಣ್ಣ ಹಚ್ಚೋಣ ಬನ್ನಿ

ಟೀಮ್ ಮಂಗಳೂರು ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ಆಯೋಜಿಸಿದ ಇಂಟರ್ನ್ಯಾಷನಲ್ ಕೈಟ್ ಫೆಸ್ಟಿವಲ್ ನಲ್ಲಿ ರಂಗ ಸ್ವರೂಪ ದ ಆಶ್ರಯ ದಲ್ಲಿ ಗಾಳಿಪಟ ಕ್ಕೆ ಬಣ್ಣ ಹಚ್ಚೋಣ ಬನ್ನಿ ಕಾರ್ಯಕ್ರಮ ನಡೆಯಿತು. ಕಲಾವಿದ ಝುಬೆeರ್ ಖಾನ್ ಕುಡ್ಲ ರ ನಿರ್ದೇಶನ ದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪುಟಾಣಿ ಗಳು ಕ್ಯಾನ್ವಾಸಿ ನಲ್ಲಿ ಗಾಳಿಪಟದ ಚಿತ್ರಬಿಡಿಸಿ ಚಿತ್ರಗಳಿಗೆ ಬಣ್ಣತುಂಬಿ ಸಂಭ್ರಮಿಸಿದರು. ಕಾರ್ಯಕ್ರಮ ದಲ್ಲಿ ಟೀಮ್ ಮಂಗಳೂರು ತಂಡದ ಸದಸ್ಯ ರಾದ ಖ್ಯಾತ ಕಲಾವಿದ ದಿನೇಶ್

ಮೂಡುಬಿದಿರೆ: ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಲಿಖಿತಾ ಪ್ರಜ್ವಲ್ ಅವರಿಗೆ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’

ಮೂಡುಬಿದಿರೆ: ವೀರರಾಣಿ ಅಬ್ಬಕ್ಕ ೫೦೦ನೇ ವರ್ಷದ ಸಂಭ್ರಮದ ಅಂಗವಾಗಿ ‘ಜವನೆರ್ ಬೆದ್ರ’ ಸಂಘಟನೆಯು ನೀಡುವ ಪ್ರತಿಷ್ಠಿತ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’ಕ್ಕೆ ವಿ೪ ನ್ಯೂಸ್‌ನ ನಿರೂಪಕಿ ಲಿಖಿತಾ ಪ್ರಜ್ವಲ್ ಅವರು ಆಯ್ಕೆಯಾಗಿದ್ದು ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಚೌಟ ರಾಣಿ ಅಬ್ಬಕ್ಕಳ ೫೦೦ನೇ ಜನ್ಮಶತಾಭ್ದಿಯ ವರ್ಷಾಚರಣೆಯ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆಯಿAದ ೫೦ ವನಿತೆಯರಿಗೆ ‘ಚೌಟ ರಾಣಿ

ಮೂಡುಬಿದಿರೆ: 500 ಪ್ರೇರಣಾದಾಯಿ 99ನೇ ಉಪನ್ಯಾಸ ಕಾರ್ಯಕ್ರಮ – ಸೇವಾ ಸಾಧಕರಿಗೆ ಸಮ್ಮಾನ

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗವು ಮೂಡುಬಿ ದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ‘ಅಬ್ಬಕ್ಕ : 500 ಪ್ರೇರಣಾ ದಾಯಿ 100 ಸರಣಿ ಉಪನ್ಯಾಸದ 99ನೇ ಕಾರ್ಯಕ್ರಮ ಮತ್ತು ಸಾಧಕರ ಸಮ್ಮಾನ ಸಮಾರಂಭ ವಿದ್ಯಾಸಂಸ್ಥೆಯ ‘ರಾಜ ಸಭಾಂಗಣ’ ದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮೂಡಬಿದಿರೆ ಚೌಟ ಮನೆತನದ ಅಬ್ಬಕ್ಕ ವಂಶಸ್ಥೆ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ,