Home Archive by category moodabidre

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕ ಹೃದಯಾಘಾತಕ್ಕೆ ಬಲಿ

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕನೊಬ್ಬ ಹೃದಯಾಘಾತವಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.ಪುತ್ತೂರು ಬೆಟ್ಟಂಪ್ಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್. (25ವ) ಹೃದಯಾಘಾತಕ್ಕೆ ಬಲಿಯಾದ ಯುವಕ.ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬಿದಿರೆ: ಕ್ರಾಸ್‌ಕಂಟ್ರಿ – ಆಳ್ವಾಸ್ ಸತತ 21ನೇ ವರ್ಷಗಳಿಂದ ಚಾಂಪಿಯನ್

ಮೂಡುಬಿದಿರೆ: ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿ ಪಡೆದಿದೆ.ಪುರುಷರ ವಿಭಾಗದಲ್ಲಿ ಮೊದಲ 5 ಸ್ಥಾನಗಳನ್ನು ಆಳ್ವಾಸ್ ಕಾಲೇಜಿನ ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೋಹಿತ್ (ಪ್ರಥಮ), ಆದೇಶ್ ಕುಮಾರ್ (ದ್ವಿತೀಯ), ಶುಭಂ(ತೃತೀಯ), ರೋಹಿತ್(4ನೇ

ಮೂಡುಬಿದಿರೆ ;ಪೋನ್ ಕರೆ ಮೂಲಕ ಮಹಿಳೆಗೆ ಕಿರುಕುಳ ತನ್ನದೇ ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ ಮೂಡುಬಿದಿರೆ ಇನ್ಸ್ ಪೆಕ್ಟರ್

ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೋವ೯ರ ಮೊಬೈಲ್ ನಂಬರ್ ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ. ಜಿ. ಅವರು ಕೇಸು ದಾಖಲಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಶಾಂತಪ್ಪ ಪ್ರಕರಣ ಆರೋಪಿ. ಈತ ಮೂಡುಬಿದಿರೆ ಠಾಣೆಯಲ್ಲಿ ಕಳೆದ ಕೆಲ ಸಮಯಗಳಿಂದ ಕರ್ತವ್ಯ ಪೊಲೀಸ್ ಸಿಬ್ಬಂದಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದ.ಕೆಲವು ದಿನಗಳ ಹಿಂದೆ ಈ ಭಾಗದ ಮಹಿಳೆಯೊಬ್ಬರು ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿ

ಮೂಡುಬಿದಿರೆ:18 ಮಂದಿ ಸಾಧಕರಿಗೆ ಸಮಾಜಮಂದಿರ ಗೌರವ

ವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ 18 ಮಂದಿ ಸಾಧಕರನ್ನು ಸಮಾಜ ಮಂದಿರ ಪುರಸ್ಕಾರದೊಂದಿಗೆ ಗೌರವಿಸಲಾಗುವುದೆಂದು ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.ಐದು ದಿನಗಳ ಉತ್ಸವದ ಅವಧಿಯಲ್ಲಿ ಹಂತ ಹಂತವಾಗಿ ಸಾಧಕರನ್ನು ಗೌರವಿಸಲಾಗುವುದು. ಸಮಾಜ ಮಂದಿರ ಗೌರವ 2025 ಕ್ಕೆ ಆಯ್ಕೆಯಾಗಿದ್ದಾರೆ. ವೇ.ಮೂ ಎಂ. ಹರೀಶ್ ಭಟ್ (ಧಾರ್ಮಿಕ), ಆಡ್ಲಿನ್ ಜೆ. ಜತನ್ನ (ಶಿಕ್ಷಣ), ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ)

ಮೂಡುಬಿದಿರೆ ; ಸಾವ೯ಜನಿಕ ಶ್ರೀ ಗಣೇಶೋತ್ಸವ ಹಸಿರು ಹೊರೆಕಾಣಿಕೆ ಮೆರವಣಿಗೆ

ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಆ.27ರಿಂದ 31ರವರೆಗೆ ಸಮಾಜ ಮಂದಿರದಲ್ಲಿ ನಡೆಯಲಿರುವ 62ನೇ ವರ್ಷದ ಗಣೇಶೋತ್ಸವಕ್ಕೆ ಪೂರಕವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಎಂಸಿಎಸ್ ಸೊಸೈಟಿ ಎದುರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ., ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಪ್ರಭು, ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಸುದಶ೯ನ್

ಮೂಡುಬಿದಿರೆ :ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025

ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 42 ಪದಕ . ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಮೂಡುಬಿದಿರೆ: ಕಬಡ್ಡಿ ಅಳಿಯೂರು ಸರ್ಕಾರಿ ಪ್ರೌಢ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದ 17ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಳಿಯೂರಿನ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ ಭಾಸ್ಕರ ಪಾಲಡ್ಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟ ಸ್ಪರ್ಧೆ

ಮೂಡುಬಿದಿರೆ ಹಳೆಯಂಗಡಿಯ ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಯ 14 ವರ್ಷ ವಯೋಮಿತಿಯ ಬಾಲಕರ ವಿಭಾಗದ 4ಕಿಮೀ ಓಟದಲ್ಲಿ ಓಂಕಾರ್ ಪ್ರಥಮ ಸ್ಥಾನ ಮತ್ತು ಪುನೀತ್ ಕುಮಾರ್ ತೃತೀಯ ಸ್ಥಾನ ಹಾಗೂ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ 4ಕಿಮೀ ಓಟದಲ್ಲಿ ದಿಶಾ ಆರನೇ ಸ್ಥಾನ ಪಡೆದರು.ಆ ಮೂಲಕ 14 ಹಾಗೂ 17 ವರ್ಷ

ಮೂಡುಬಿದಿರೆ : ಚಿಪ್ಪು ತೆಗೆದು ಮುತ್ತನ್ನು ಪಡೆಯುವ ಭಾಷೆ ಸಂಸ್ಕೃತ – ಡಾ. ಶ್ರೀಶ ಕುಮಾರ

ಸಂಸ್ಕೃತ ಭಾಷೆಯು ಸಮುದ್ರದ ಆಳದಿಂದ ಹುಟ್ಟುವ ಮುತ್ತಿನಂತೆ. ಮುತ್ತನ್ನು ಪಡೆಯಲು ಚಿಪ್ಪನ್ನು ಒಡೆದು ನೋಡುವ ಅಗತ್ಯವಿದ್ದಂತೆ ಸಂಸ್ಕೃತವನ್ನು ಅರಿಯಲು ಅದರ ಪಾಠಪುಸ್ತಕದ ಚಿಪ್ಪುಗಳನ್ನು ಮೀರಿ ಒಳನೋಟ ಬೀರಿದರೆ ಅದರ ನಿಜವಾದ ಮೌಲ್ಯವು ನಮ್ಮ ಜೀವನವನ್ನು ಅಂದಗೊಳಿಸುತ್ತದೆ.ಭಾಷೆಯು ವ್ಯಕ್ತಿಗೆ ಆತ್ಮವಿಶ್ವಾಸ ತುಂಬಿ ನೈತಿಕ ನೆಲೆಯಲ್ಲಿ ಬದುಕಿಗೆ ಪ್ರೇರಣೆಯಾಗಿ ಜೀವನದ ಎಲ್ಲಬಾಗಿಲುಗಳನ್ನು ತೆರೆಯುವ ಕೀಲಿಕೈ ಇದ್ದಂತೆ. ಭಾರತೀಯ ಜ್ಞಾನ ಪರಂಪರೆಗಳ ಮೂಲಾಧಾರವಾದ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಮೂಡಬಿದಿರೆಯ ಶ್ರೀ ಗೌರಿ ದೇವಸ್ಥಾನದಲ್ಲಿ ನಡೆಯಿತು. ತಂಡದ ಹೊಸ ಲೋಗೋವನ್ನು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಇವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ