ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆ ಶ್ರೀ ಕ್ಷೇತ್ರದಿಂದ ಬ್ಯಾಗ್ ವಿತರಣೆ
ಕಾಪು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ )ಕಾಪು ತಾಲೂಕು ಇದರ ಸಹಯೋಗದೊಂದಿಗೆ ಬೆಳ್ಳೆ, ಬೆಳ್ಮಣ್ -ಸೂಡ, ಮುದರಂಗಡಿ, ಹಾಗೂ ಮಜೂರು ಘಟಕಗಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆ
ಇಂದು ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಭೆ ನಡೆಸುವ ಮೂಲಕ ಶ್ರೀ ಕ್ಷೇತ್ರದಿಂದ ನೀಡಲ್ಪಟ್ಟ ಬ್ಯಾಗ್ ಗಳನ್ನು ಶೌರ್ಯ ವಿಪತ್ತು ತಂಡದ ಎಲ್ಲಾ ಸ್ವಯಂಸೇವಕರಿಗೆ
ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯ ವಿತರಣೆ ಮಾಡಿದರು.
ವಿತರಣೆ ಮಾಡಿದ ಅವರು ಸ್ವಯಂಸೇವಕರ ಮತ್ತು ಘಟಕಗಳ ಕಾರ್ಯ ವೈಖರಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಸೇವೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಮಮತಾ ಶೆಟ್ಟಿ ಸೂಕ್ತ ಸಲಹೆ ನೀಡಿದರು. ಜಲ ಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳಾದ ಶ್ರೀ ಶಂಕರ್ ಕುಂದರ್ ಹಾಗೂ ಸುಜಾತಾ ಸುವರ್ಣ ಶುಭ ಹಾರೈಸಿದರು.
ವಲಯಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಶ್ರೀ ಪ್ರಸಾದ್ ಆಚಾರ್ಯ ಹಾಗೂ ಎಲ್ಲಾ ಘಟಕಗಳ ಘಟಕ ಪ್ರತಿನಿಧಿಗಳು ಮತ್ತು ಸಂಯೋಜಕರು ಉಪಸ್ಥಿತರಿದ್ದರು.


















