ಕಟಪಾಡಿ ಕೋಟೆ ಶ್ರೀ ಪಂಡರಿನಾಥ ಭಜನಾ ಮಂದಿರ ಕೋಟೆ ಶ್ರೀ ನಾಗ ಬ್ರಾಮ್ಮದಿ ಪಂಚ ದೈವಿಕ ಸನ್ನಿದಿ ಕೋಟೆ ಸಭಾ ಭವನ ನಿರ್ಮಾಣ ಕ್ಕೆ ಶ್ರೀ ಕ್ಷೇತ್ರದಿಂದ 2.ಲಕ್ಷ ಸಹಾಯ ಧನದ ಮಂಜೂರಾತಿ ಪತ್ರ ವಿತರಣೆ
ಕಾಪು: ಕಾಪು ತಾಲೂಕಿನ ಕಟಪಾಡಿ ಕೋಟೆ ಶ್ರೀ ಪಂಡರಿನಾಥ ಭಜನಾ ಮಂದಿರ ಕೋಟೆ
ಶ್ರೀ ನಾಗ ಬ್ರಾಮ್ಮದಿ ಪಂಚ ದೈವಿಕ ಸನ್ನಿದಿ ಕೋಟೆ ಸಭಾ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ 2.ಲಕ್ಷ ಸಹಾಯ ಧನದ ಮಂಜೂರಾತಿ ಪತ್ರವನ್ನು ಇಂದು ವಿತರಣೆ ಮಾಡಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ ಅವರು
ಸಮಿತಿ ಅಧ್ಯಕ್ಷರಾದ ಮಧುಕರ ಮತ್ತು ಸಮಿತಿ ಪದಾಧಿಕಾರಿಗಳ ಮುಖಾಂತರ ಸಭಾ ಭವನ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ಸಹಾಯ ಧನದ ಮಂಜೂರಾತಿ ಪತ್ರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರು ಸತ್ಯೇoದ್ರ ಪೈ, ಮೇಲ್ವಿಚಾರಕರು ಕುಮುದ ಹಾಗೂ ಒಕ್ಕೂಟ ಅಧ್ಯಕ್ಷರು ಅಶ್ವಿನಿ ಮತ್ತು ಸೇವಾಪ್ರತಿನಿಧಿ ಮಾಲತಿ ಉಪಸ್ಥಿತರಿದ್ದರು.















