ನೇತ್ರ ಜ್ಯೋತಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ, ಆಚರಣೆ

ಉಡುಪಿಯ ಪ್ರತಿಷ್ಠಿತ ಕಾಲೇಜು ನೇತ್ರ ಜ್ಯೋತಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಅರೋಗ್ಯ ಅಧಿಕಾರಿಗಳಾದ ಡಾಕ್ಟರ್ ಬಸವರಾಜ್ ಹುಬ್ಬಳ್ಳಿಯವರು ಮಾತನಾಡಿ ಅರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ನಿರಂತರವಾಗಿ ನೀಡುತಿರುವ ವೈದ್ಯರಿಗೆ ಗೌರವಿಸುತಿರುವುದು ಸಂತೋಷದ ವಿಷಯ ಎಂದರು.

ಇನ್ನೊರ್ವ ಮುಖ್ಯ ಅತಿಥಿಯಾಗಿ ಬಂದಿರುವ ಖ್ಯಾತ ವೈದ್ಯರೂ ಹೈ ಟೆಕ್ ಹಾಸ್ಪಿಟಲ್ ನಿರ್ದೇಶಕರಾದ ಡಾಕ್ಟರ್.ಟಿ ಶ್ರೀನಿವಾಸ್ ರಾವ್ ಮಾತನಾಡಿ ನೇತ್ರ ಜ್ಯೋತಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿ, ಮುಂದಿನ ದಿನಗಳಲ್ಲಿ ಈ ಕಾಲೇಜು ಮತಷ್ಟು ವಿಸ್ತಾರಗೊಂಡು ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಕೃಷ್ಣಪ್ರಸಾದ್ ಕೂಡ್ಲುರವರು ಮಾತನಾಡಿ ವೈದ್ಯರು ಸೇವಾ ಮನೋಭಾವನೆಯೆಂದ ದುಡಿಯುವವರು, ಮಾತ್ರವಲ್ಲದೆ ವೈದ್ಯ ವೃತ್ತಿ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಅದರಲ್ಲಿ ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆ ಸಲ್ಲಿಸಿದ ವೈದ್ಯರುಗಳಿಗೆ ಗೌರವಿಸುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮೀ ಕೃಷ್ಣಪ್ರಸಾದ್ ಮಾತನಾಡಿ ವೈದ್ಯರ ಸಮರ್ಪಣೆ ಮತ್ತು ತ್ಯಾಗ ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಸೇವೆಗೆ ನಾವು ಯಾವಾಗಲು ಋಣಿಯಾಗಿರಬೇಕು. ಸನ್ಮಾನ ಸ್ವೀಕರಿಸಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಟಿ ಶ್ರೀನಿವಾಸ ರಾವ್, ಡಾ.ಮುರಳೀಧರ ಪಾಟೀಲ್, ಡಾ. ಮಾಲಿನಿ ಬಂಗೇರ, ಡಾ. ಚಿಕ್ಕಮರಿ, ಡಾ. ಸುಬ್ರಮಣ್ಯ ಪ್ರಭು, ಡಾ. ಅಕ್ಷತಾ ನಾಯಕ್, ಹಾಗೂ ಡಾ. ಮೈತ್ರಿ ತುಂಗ ರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಆಶೆಲ್ ರಕ್ಷಾ ಎಲ್ಲರನ್ನು ಸ್ವಾಗತಿಸಿದರು, ಉಪನ್ಯಾಸಕಿ ಶ್ರೀಮತಿ ಶ್ರೀನಿಧಿಯವರು ಧನ್ಯವಾದಗಗಳನ್ನು ಅರ್ಪಿಸಿದರು. ಉಪನ್ಯಾಸಕಿ ಆಯೇಷ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅರೋಗ್ಯ ಅಧಿಕಾರಿಗಳಾದ ಡಾಕ್ಟರ್ ಬಸವರಾಜ್ ಹುಬ್ಬಳ್ಳಿ,ಖ್ಯಾತ ವೈದ್ಯರಾದ ಹೈ ಟೆಕ್ ಹಾಸ್ಪಿಟಲ್ ನಿರ್ದೇಶಕರಾದ ಡಾಕ್ಟರ್.ಟಿ ಶ್ರೀನಿವಾಸ್ ರಾವ್,ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಕೃಷ್ಣಪ್ರಸಾದ್ ಕೂಡ್ಲು,
ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮೀ ಕೃಷ್ಣಪ್ರಸಾದ್,ಡಾ.ಮುರಳೀಧರ ಪಾಟೀಲ್, ಡಾ. ಮಾಲಿನಿ ಬಂಗೇರ, ಡಾ. ಚಿಕ್ಕಮರಿ, ಡಾ. ಸುಬ್ರಮಣ್ಯ ಪ್ರಭು, ಡಾ. ಅಕ್ಷತಾ ನಾಯಕ್, ಹಾಗೂ ಡಾ. ಮೈತ್ರಿ ತುಂಗಕಾಲೇಜಿನ ಸಿ ಓ ಓ ಡಾ. ಗೌರಿ ಪ್ರಭು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.