ಸುಳ್ಯದ ಅಮರಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯತಿಥಿ: ಖಾಸಗಿ ಬಸ್ ನಿಲ್ದಾಣದಲ್ಲಿ ಡಾ.ಕುರುಂಜಿ ಪುತ್ಥಳಿಗೆ ಮಾಲಾರ್ಪಣೆ

ಸುಳ್ಯದ ಅಮರಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯತಿಥಿಯ ದಿನವಾದ ಆ.7ರಂದು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಕುರುಂಜಿ ಪುತ್ಥಳಿಗೆ ಸುಳ್ಯ ಪ್ರೆಸ್ ಕ್ಲಬ್, ಗಾಂಧಿ ಚಿಂತನ ವೇದಿಕೆ ಹಾಗೂ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಯ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.

ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಕುರುಂಜಿಯವರ ಸ್ಮರಣೆ ಮಾಡಿದರು.
ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಕೆವಿಜಿ ಸುಳ್ಯಹಬ್ಬ ಸಮಿತಿಯ ಅಧ್ಯಕ್ಷ ಕೆ.ಟಿ.ವಿಶ್ವನಾಥ, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಡಾ. ಎನ್.ಎ.ಜ್ಞಾನೇಶ್, ಚಂದ್ರಶೇಖರ ನಂಜೆ, ರಾಜು ಪಂಡಿತ್, ಚಂದ್ರಶೇಖರ ಪೇರಾಲು, ದಿನೇಶ್ ಅಂಬೆಕಲ್ಲು, ಜಯಶ್ರೀ ಕೊಯಿಂಗೋಡಿ, ಗಂಗಾಧರ ಮಟ್ಟಿ, ಶಿವಪ್ರಸಾದ್ ಆಲೆಟ್ಟಿ, ಯಶ್ವಿತ್ ಕಾಳಮ್ಮನೆ, ಪದ್ಮನಾಭ ಅರಂಬೂರು, ಗಣೇಶ್ ಕುಕ್ಕುದಡಿ, ಈಶ್ವರ ವಾರಣಾಶಿ, ಪೂಜಾಶ್ರೀ ವಿತೇಶ್, ಪ್ರಜ್ಞಾ ಎಸ್ ನಾರಾಯಣ, ಹಸೈನಾರ್ ಜಯನಗರ, ಗಿರೀಶ್ ಅಡ್ಪಂಗಾಯ ಮೊದಲಾದವರಿದ್ದರು.
ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.