ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ – ಆಯುರ್ವೇದ ದಿನಾಚರಣೆ

ಸೆ. 23 ರಂದು ಹತ್ತನೇ ಆಯುರ್ವೇದ ದಿನಾಚರಣೆಯ ಅಂಗವಾಗಿ “ಮಾನವ ಮತ್ತು ಪ್ರಕೃತಿಗಾಗಿ ಆಯುರ್ವೇದ” ಎಂಬ ಧ್ಯೇಯ ವಾಕ್ಯ ದೊಂದಿಗೆ ಕಾರ್ಯಕ್ರಮವನ್ನು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಡಾ ರಾಮ್ಮೋಹನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಯುರ್ವೇದದ ಮಹತ್ವದ ಮಾಹಿತಿ ಜನ ಸಾಮಾನ್ಯರಿಗೆ ಅತ್ಯಾವಶ್ಯಕ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ ವಿ ಯವರು ಮಾತನಾಡಿ ಆಯುರ್ವೇದವು 5000 ವರ್ಷಕ್ಕೂ ಅಧಿಕ ಇತಿಹಾಸವುಳ್ಳ ಆರೋಗ್ಯ ಪದ್ಧತಿ ಹಾಗೂ ಜೀವನ ಶೈಲಿಯಾಗಿದ್ದು, ಇದರ ಪಾಲನೆಯಿಂದ ರೋಗಿಗಳಿಗೆ ರೋಗ ನಿವಾರಣೆ ಹಾಗೂ ಆರೋಗ್ಯವಂತರ ಸ್ವಾಸ್ತ್ಯ ರಕ್ಷಣೆಯು ಆಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರು ಅಡ್ವೊಕೇಟ್ ಲ. ದೀಪಕ್ ಕುತ್ತಮೊಟ್ಟೆ ಇವರು ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದವು ಅತ್ಯಮೂಲ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಕಾಯಚಿಕಿತ್ಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಅನಿತಾ ಎಸ್ ರವರು ತೂಕ ನಿಯಂತ್ರಣಕ್ಕೆ ಆಯುರ್ವೇದದ ಆಹಾರ ಕುರಿತು ವಿಧ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಆಯುರ್ವೇದದ ಮಹತ್ವದ ಅರಿವು ಮೂಡಿಸುವ ಸಲುವಾಗಿ ಆಯುರ್ವೇದದ ಕಡೆ ನಮ್ಮ ನಡೆ ಎಂಬ ಧ್ಯೇಯದೊಂದಿಗೆ ಸಾರ್ವಜನಿಕ ಜಾಥವನ್ನು ಆಯೋಜಿಸಲಾಗಿತ್ತು.
ಆಯುರ್ವೇದ ದಿನಾಚರಣೆಯ ಅಂಗವಾಗಿ ಕಾಲೇಜಿನ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸುಳ್ಯದ ಕಾರ್ಯದರ್ಶಿ ಲ. ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಲ. ಜತ್ತಪ್ಪ ರೈ, ಸದಸ್ಯರಾದ ಲ. ರಾಮಚಂದ್ರ ಪಲ್ಲತ್ತಡ್ಕ, ಲ. ಚಂದ್ರಾವತಿ ಬಡ್ಡಡ್ಕ, ಲ. ಸೂರಯ್ಯ ಸೂಂತೋಡು, ರೋಟರಿ ಕ್ಲಬ್ ಸುಳ್ಯದ ರೊ. ಪ್ರಭಾಕರನ ನಾಯರ್, ಇನ್ನರ್ ವೀಲ್ ಕ್ಲಬ್ ಸುಳ್ಯದ ಶ್ರೀಮತಿ ಚಿಂತನ ಸುಬ್ರಮಣ್ಯ, ಶ್ರೀಮತಿ ಸೌಮ್ಯ, ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ ವಿನಯ್ ಶಂಕರ್ ಭಾರಧ್ವಾಜ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪಂಚಕರ್ಮ ವಿಭಾಗದ ಡಾ. ಸ್ಮಿತಾ ತಂಬನ್ ಹಾಗೂ ಸಂಹಿತ ಸಿದ್ಧಾಂತ ವಿಭಾಗದ ಡಾ. ದೇವಿಕಾ ಶೆಟ್ಟಿ ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಕು ಸುಜ್ಯಶ್ರೀ ಹಾಗೂ ಕು ಗಾನವಿ ನಿರೂಪಿಸಿ, ಕು ಸ್ಪಂದನ ಸ್ವಾಗತಿಸಿ, ಕು ಮಹಾಲಕ್ಷ್ಮಿ ವಂದಿಸಿದರು.
