ಮಂಗಳೂರು: ಜ.23ರಂದು ಕಟ್ಟೆಮಾರ್ ಸಿನಿಮಾ ಬಿಡುಗಡೆ

ತುಳು ಚಿತ್ರರಂಗದಲ್ಲಿ ಹೊಸಬಗೆಯ ಚಿತ್ರಗಳು ಬರುತ್ತಿದೆ. ಮೂಲ ಸೊಗಡನ್ನು ಹಿಡಿದು ಉತ್ತಮ ಕಥೆಗಳನ್ನು ಹೊಸ ನಿರ್ದೇಶಕರು ಹೊರ ತರುತ್ತಿದ್ದಾರೆ. ಈ ಸಾಲಿಗೆ ಇದೀಗ ಕಟ್ಟೆಮಾರ್ ಸೇರ್ಪಡೆಯಾಗುತ್ತಿದೆ. ಲಂಚುಲಾಲ್ ಕೆ.ಎಸ್. ನಿರ್ಮಾಣದ ಕಟ್ಟೆಮಾರ್ ಸಿನಿಮಾ ಜನವರಿ 23ರಂದು ಸಿನಿಮಾ ರಿಲೀಸ್ ಅಗಲಿದೆ.

ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ನಿರ್ದೇಶನದ ‘ಕಟ್ಟೆಮಾರ್’ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಪವರ್ ಫುಲ್ ಡೈಲಾಗ್ ಹೊಂದಿರುವ ಟೀಸರ್ ನೋಡುಗರಲ್ಲಿ ಕುತೂಹಲ ಮೂಡಿಸಿದೆ.

ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿದ್ದಾರೆ. ಅಸ್ತ್ರ ಪ್ರೊಡಕ್ಷನ್ ನಲ್ಲಿ ಲಂಚುಲಾಲ್ ಕೆ.ಎಸ್. ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲ್ಲದೆ ಲಂಚುಲಾಲ್ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 2026ರ ಜನವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಜೆಪಿ ತುಮಿನಾಡ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಮೈಮ್ ರಾಮದಾಸ್, ಬಾಸುಮ ಕೊಡಗು, ಭಗವಾನ್ ಸುರತ್ಕಲ್, ನಮಿತಾ ಕಿರಣ್ ಮುಂತಾದವರು ಚಿತ್ರದಲ್ಲಿದ್ದಾರೆ.

ಕಾರ್ತಿಕ್ ಮೂಲ್ಕಿ ಸಂಗೀತ, ಗಣೇಶ್ ನೀರ್ಚಾಲು ಸಂಕಲನ, ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಟೀಸರ್ ನಲ್ಲಿ ಭರವಸೆ ಮೂಡಿಸಿರುವ ಚಿತ್ರವನ್ನು ತೆರೆಯ ಮೇಲೆ ಕಾಣಲು ಜನವರಿ 23ರ ವರೆಗೆ ಕಾಯಬೇಕಿದೆ.

Related Posts

Leave a Reply

Your email address will not be published.