ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಕುಸಿದು ಬಿದ್ದು ಸಾವು

ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಶಾಲೆಯ ಕ್ರೀಡಾ ಸ್ಪರ್ಧೆಯ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಂಗಲ್ಪಾಡಿ ಜಿಎಲ್‌ಪಿ ಶಾಲೆಯ ವಿದ್ಯಾರ್ಥಿ ಹಸನ್ ರಝಾ (10) ಸಾವನ್ನಪ್ಪಿದ ದುರ್ದೈವಿ . ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಶಾಲೆಯ ಕ್ರೀಡಾ ಸ್ಪರ್ಧೆ ನಡೆಯುವಾಗ ಈ ದುರ್ಘಟನೆ ಸಂಭವಿಸಿದೆ.
ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಸನ್ ರಝಾ ಉತ್ತರ ಪ್ರದೇಶದ ಮುರ್ಶಿದಾಬಾದ್ ಮೂಲದ ಇಲ್ಸಾಫಲಿ ಅವರ ಪುತ್ರನಾಗಿದ್ದಾರೆ.
