ಕೆಯ್ಯೂರು: ಪ್ರಗತಿ ಬಂಧು ಒಕ್ಕೂಟಗಳ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಮತ್ತೂರು ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೆಯ್ಯೂರು ಇವರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಹಾಗೂ ಸ್ವ-ಸಹಾಯ ಸಂಘಗಳಿಗೆ 1001 ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ನಡೆಯಿತು.

ಬೆಳಗ್ಗೆ ಭಜನಾ ಸೇವೆ ನಡೆದು ಬಳಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭಗೊಂಡಿತು. ಬಳಿಕ ಕೇಂದ್ರ ಒಕ್ಕೂಟದ ಅಧ್ಯಕ್ಷರು ಉದಯ ಕುಮಾರ್‌ ಜಿ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಶಿಧರ ಎಂ, ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕರು ಶ್ರೀಮತಿ ಹರಿಣಿ ಪುತ್ತೂರಾಯ, ಕೆಯ್ಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷರು ಕೆ. ಶರತ್‌ ಕುಮಾರ್‌ ಮಾಡಾವು, ಪುತ್ತೂರು ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷರು ಸಾಜ ರಾಧಕೃಷ್ಣ ಆಳ್ವ, ಕೆಯ್ಯೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಎ.ಕೆ ಜಯರಾಮ ರೈ, ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎಸ್‌.ಬಿ ಜಯರಾಮ್‌ ರೈ ಬಳಜ್ಜ, ಜಯಕರ್ನಾಟಕ ಸಭಾಭವನದ ಸಂಚಾಲಕರು ದಿವಾಕರ ರೈ ಸಣಂಗಳ, ಜನಜಾಗೃತಿ ವಲಯಾಧ್ಯಕ್ಷರು ಶ್ಯಾಮ್‌ ಸುಂದರ್‌ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಳಿನಿ ಪ್ರಾರ್ಥಿಸಿ, ಯುವರಾಜ ಪೂಂಜಾ ಸ್ವಾಗತಿಸಿದರು. ವಾರಿಜ ವಂದಿಸಿ, ಮೇಲ್ವಿಚಾರಕಿ ಶುಭಾವತಿ ಪಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೆದಂಬಾಡಿ ವಲಯದ ದೇರ್ಲ, ದೇವಿನಗರ, ಬೊಳಿಕ್ಕಳ, ಪಾಲ್ತಾಡಿ, ಕೊಳ್ತಿಗೆ, ಪೆರ್ಲಂಪಾಡಿ, ಮೊಗಪ್ಪೆ ಹಾಗೂ ಮಣಿಕ್ಕರ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.