ಉತ್ತರ ಅಮೆರಿಕದ ದಕ್ಷಿಣದ ಹಣ್ಣು ಮೇಪಾಪ್

ಬಡಗಣ ಅಮೆರಿಕ ಖಂಡದ ತೆಂಕಣ ಭಾಗ ಮೂಲದ ಮೇಪಾಪ್ ಹಣ್ಣು, ಪ್ಯಾಶನ್ ಫ್ರುಟ್‌ಗಳಲ್ಲಿಯೇ ಅತಿ ಗಟ್ಟಿಯಾದುದಾಗಿದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗದ ಮೂಲದ್ದಾದರೂ ಇಂದು ಮೇಪಾಪ್ ಹಣ್ಣನ್ನು ಉಷ್ಣವಲಯದ ಸಾಕಷ್ಟು ಕಡೆ ಬೆಳೆಸುತ್ತಾರೆ. ಇದರ ಹೂವು ತುಂಬ ಆಕರ್ಷಕ; ನೀಲಿ ಕುಸುರಿಯ ಚಕ್ರದಂತೆ ಕಣ್ಸೆಳೆಯುತ್ತದೆ.

ಮೊಟ್ಟೆ ಆಕಾರದ ಇದರ ಕಾಯಿ ಹಸಿರು ಇದ್ದು, ಹಣ್ಣಾದಾಗ ಹಳದಿ ಆಗುತ್ತದೆ. ತಿರುಳು ಸಿಹಿ ಹುಳಿ ಮಿಶ್ರಿತ ರುಚಿಯೊಡನೆ ತನ್ನದೇ ಪರಿಮಳ ಹೊಂದಿರುತ್ತದೆ. ಇದನ್ನು ನೇರ ತಿನ್ನುವರು. ಶರಬತ್ತು ತಯಾರಿಸುವುದಲ್ಲದೆ ಜೆಲ್ಲಿ, ಜಾಮ್ ಇತ್ಯಾದಿ ತಯಾರಿಸಲು ಬಳಸಲಾಗುತ್ತದೆ.

ಇದು ಇಪ್ಪತ್ತೈದು ಅಡಿ ಉದ್ದ ಬೆಳೆಯುವ ಬಳ್ಳಿ. ವಿಟಮಿನ್‌ಗಳು, ಫೈಬರ್ ನಾರು ಸತ್ವ, ಆಂಟಿ ಆಕ್ಸಿಡೆಂಟ್ ಇತ್ಯಾದಿ ಸತ್ವಭರಿತ ಹಣ್ಣು ಇದು.

Related Posts

Leave a Reply

Your email address will not be published.