ದ.ಕ ಜಿಲ್ಲೆಯ ವಿಶೇಷ ಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರವಾಹನ ವಿತರಣಾ ಕಾರ್ಯಕ್ರಮ

ಮಂಗಳೂರು; ಸಚಿವರಾದ ಸಂತೋಷ್ ಲಾಡ್ ಗೆ, ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಇದೆ, ಆ ಕಾರಣದಿಂದ ಈ ರೀತಿಯ ಅತ್ಯುತ್ತಮ ಕಾರ್ಯಕ್ರಮಗಳು ನಡೆಯುತಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಬೆಂಗಳೂರು ಇದರ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಅವರು ಪದವಿನಂಗಡಿಯ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಬೆನಕ ಸಭಾಭವನದಲ್ಲಿ ನಡೆದ ದ.ಕ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದ.ಕ ಜಿಲ್ಲೆ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಇವರ ಸಹಯೋಗದಲ್ಲಿ, ದ.ಕ ಜಿಲ್ಲೆಯ ವಿಶೇಷ ಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರವಾಹನ ವಿತರಣಾ ಕಾರ್ಯಕ್ರಮ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ, ನಾವೆಲ್ಲರೂ ಸಮಾನರು ಅದರಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.


ಎಂ.ಆ‌ರ್.ಪಿ.ಎಲ್, ಪಾಸ್ಟೇಟ್ಸ್ ಲಿ, ಬಿ.ಎ.ಎಸ್.ಎಫ್, ಯೇನೆಪೋಯಾ ಯುನಿವರ್ಸಿಟಿ, ಮಾಂಡೋವಿ ಮೋಟಾರ್ಸ್ ಪ್ರೈ ಲಿ, ಅರವಿಂದ ಮೋಟಾರ್ಸ್ ಪ್ರೈ ಲಿ., ರೋಹನ್ ಕಾರ್ಪೊರೇಶನ್ ಲಿ, ಕ್ಯಾಂಪ್ಲೋ ಲಿ., ಇನ್ವೆಂಜರ್ ಟೆಕ್ನಾಲಜಿ ಪ್ರೈ ಲಿ ಸಹಕಾರದಲ್ಲಿ ಒಟ್ಟು 90 ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಈ ಸಂದರ್ಭ ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇಲ್ಲಿನ ಟಿ.ಎಂ ಅಧ್ಯಕ್ಷ ಶಾಹೀದ್ ತೆಕ್ಕಿಲ್, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೊಂಕಣಿ ಸಾಹಿತ್ಯ ಆಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ, ಅಲ್ವಾರಿಸ್, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಲ್ಲಾಳ್, ಎಂ.ಆರ್.ಪಿ.ಎಲ್. ನ CGM ಪ್ರಶಾಂತ್ ಬಾಳಿಗ, ಸಿ.ಎಸ್ ಆರ್ ವಿಭಾಗದ ಕೇಶವ ಪಾಟಾಳಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಧನ್ಯವಾದ ಸಮರ್ಪಿಸಿದರು.

Related Posts

Leave a Reply

Your email address will not be published.