ಮೂಡುಬಿದಿರೆ: ಧರ್ಮಸ್ಥಳ ಮ್ಯೂಸಿಯಂಗೆ ಮೂಡುಬಿದಿರೆ ಶ್ರೀಗಳ ಕಾರು

ಮೂಡುಬಿದಿರೆ: ಇಲ್ಲಿನ‌ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003 ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಕಾರ್ ಮ್ಯೂಸಿಯಂಗೆ ಸ್ವಾಮೀಜಿ ವಾಹನ ವರ್ಗಾವಣೆ ಸಹಿ ವರ್ಗಾಹಿಸಿದರು.

108 ಶಾಂತಿ ಸಾಗರ ಆಚಾರ್ಯ ಪಾದರೋಹಣ ಶತಾಬ್ದಿ ಮಹೋತ್ಸವ ಶ್ರೀ ಮಠದ ವತಿಯಿಂದ ವೇಣೂರು ಮಹಾ ಮಸ್ತಕಾಭಿಷೇಕ ಸಂಧರ್ಭ ನೆರವೇರಿಸಿದ ನೆನಪಿನಲ್ಲಿ ಶ್ರೀ ಡಿ ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಸ್ವಾಮೀಜಿ ಗೌರವಿಸಿ ಹರಸಿ ಅಭಿನಂದನಾ ಪತ್ರ , ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ಹೆಗ್ಗಡೆಯವರು ವಾಹನ ವಸ್ತು ಸಂಗ್ರಹಾಲಯಕ್ಕೆ ಮೋಟಾರ್ ಕಾರ್ ಕೊಡುಗೆ ನೀಡಿದ ಸ್ವಾಮೀಜಿ ಗಳವರಿಗೆ ಅಭಿನಂದನಾ ಪತ್ರ ನೀಡಿದರು .

ಶೈಲೇoದ್ರ ಜೈನ್, ಪ್ರವೀಣ್ ಇಂದ್ರ ವೇಣೂರು ಯಂ ಬಾಹುಬಲಿ ಪ್ರಸಾದ್, ನಾಗವರ್ಮ ಆದಿತ್ಯ ಜೈನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.