ಬ್ರೇಕ್ ಪೈಲ್ ಆಗಿ ಖಾಸಗಿ ಬಸ್ ಕಾಂಪೌಂಡ್‌ಗೆ ಢಿಕ್ಕಿ: ಬಸ್ ನಲ್ಲಿದ್ದ 19 ಮಂದಿ ಪ್ರಯಾಣಿಕರಿಗೆ ಗಾಯ

ಬ್ರೇಕ್ ಫೈಲ್ ಆಗಿ ಖಾಸಗಿ ಬಸ್ಸೊಂದು ಕಾಂಪೌಂಡ್ ಗೆ ಗುದ್ದಿದ ಘಟನೆ ವಿಟ್ಲದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಶನಿವಾರ ನಡೆದಿದ್ದು, ಸುಮಾರು 19 ಮಂದಿ ಗಾಯಗೊಂಡಿದ್ದಾರೆ.

ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಜನರನ್ನು ಹತ್ತಿಸಿಕೊಂಡು ಕನ್ಯಾನ ಮೂಲಕ ಆನೆಕಲ್ಲು ಕಡೆಗೆ ತೆರಳುತ್ತಿದ್ದ ವಿಟ್ಲದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಬ್ರೇಕ್ ಫೈಲ್ ಆಗಿದ್ದು, ನೇರವಾಗಿ ಬಸ್ ಮೆಸ್ಕಾಂ ಕಚೇರಿ ಮುಂಭಾಗದ ಕಾಂಪೌಂಡ್ ಗೆ ಡಿಕ್ಕೆ ಹೊಡೆದಿದೆ.
ಬಸ್ಸಿನಲ್ಲಿ ಅಂದಾಜು 20ರಿಂದ 30 ರಷ್ಟು ಪ್ರಯಾಣಿಕರಿದ್ದು, ಅವರ ಪೈಕಿ ಸುಮಾರು 19 ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತೀವ್ರತೆಗೆ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಬಸ್ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.