ಪುಲ್ವಾಮದಲ್ಲಿ ಸೈನಿಕರ ಸಾವು ಆಕಸ್ಮಿಕವೇ, ಕೊಲೆಯೇ?

ಸತ್ಯಪಾಲ್ ಮಲಿಕ್ ಅವರ ಕಚೇರಿಗಳ ಮೇಲೆ ಆರು ತಿಂಗಳ ಹಿಂದೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳ ದಾಳಿಯೋ ದಾಳಿಗೆ ಕಾರಣ ಪುಲ್ವಾಮಾದ ಕೊಲೆಗಳು ಎಂಬುದು ಒಂದು ಮಾತು.
2019ರಲ್ಲಿ 40 ಸಿಆರ್‌ಪಿಎಫ್ ಸೈನಿಕರು ಪುಲ್ವಾಮಾದಲ್ಲಿ ಸ್ಫೋಟಕ್ಕೆ ಸಿಕ್ಕಿ ಸತ್ತರು. ಇದನ್ನು ಚುನಾವಣಾ ವಿಷಯ ಮಾಡಿ ಬಿಜೆಪಿಯು ಅದೇ ವರುಷ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ಕಳೆದ ವರುಷ ಹೇಳಿದ್ದರು. ಆ ಎತ್ತರದಲ್ಲಿ ಸೈನಿಕರನ್ನು ಸಾಗಿಸಲು ಪ್ರತ್ಯೇಕ ಸೇನಾ ವಿಮಾನಗಳು ಇವೆ. ಕೇಳಿದ ಅಯ್ದು ವಿಮಾನ ನೀಡದೆ ಕೇಂದ್ರ ಸರಕಾರವು ರಸ್ತೆ ಮೂಲಕವೇ ಹೋಗಲು ಸೂಚಿಸಿತ್ತು. ಅಲ್ಲದೆ ಸಂಪರ್ಕ ರಸ್ತೆಗಳನ್ನು ಸಹ ತಡೆಯದೆ ಬಿಡಲಾಗಿತ್ತು ಎಂದು ಸತ್ಯ ಪಾಲ್ ಹೇಳಿದ್ದರು.

ಇದು ನಮ್ಮ ತಪ್ಪು ಎಂದರು ಆಗ ಸತ್ಯ ಪಾಲ್ ಮಲಿಕ್. ಕೂಡಲೆ ಅವರನ್ನು ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಬಳಿ ಕರೆಸಿಕೊಂಡ ಪ್ರಧಾನಿ ಮೋದಿಯವರು ನೀವೀಗ ಏನೂ ಮಾತನಾಡಬಾರದು ಎಂದು ಬಾಯಿ ಮುಚ್ಚಿಸಿದರು ಎಂದರು ಬಳಿಕ ಸತ್ಯ ಪಾಲ್.
ಸೈನಿಕರ ಸಾವಿನ ಆರೋಪ ಪಾಕಿಸ್ತಾನದ ಮೇಲೆ ಹೋಗಲಿ, ನೀವು ಮಾತನಾಡಬಾರದು ಎಂದು ಪ್ರಧಾನಿ ಮೋದಿಯವರು ನನ್ನ ಬಾಯಿ ಮುಚ್ಚಿಸಿದ್ದರು ಎಂದು ಸತ್ಯ ಪಾಲ್ ವಿವರಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಷ್ಟೆ ನೀವೂ ಹೇಳಬೇಕು. ಪ್ರಧಾನಿ ಮೋದಿಯವರು ಹೇಳಿದರು ಎಂದು ದ ವೈರ್‌ಗೆ ನೀಡಿದ್ದ ಸಂದರ್ಶನದಲ್ಲಿ ಸತ್ಯ ಪಾಲ್ ಹೇಳಿದ್ದಾರೆ. ಸತ್ಯದ ಬೀಳುಗೆ ಹೀಗೆ.
