ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮ
ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಸಂಚಾಲಕರಾದ ಡಾ. ಬಿ ಸಂಜೀವ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಂಗಳೂರು ನಾರ್ತ್ ರೋಟರಿ ಕ್ಲಬ್ ಹಾಗೂ ಬೆಂಗಳೂರು ವಿಜಯನಗರ ರೋಡ್ ಮತ್ತು ಫಿಕ್ಸೆಲ್ ಸಾಫ್ಟ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಐದು ಸ್ಮಾರ್ಟ್ ಬೋರ್ಡ್ ಗಳನ್ನು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದವು. ರೊಟೇರಿಯನ್ ಕೆ ಕೃಷ್ಣ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿದ್ದರು ರೊಟೇರಿಯನ್ ಡಾ. ಅರುಣ್ ಶೆಟ್ಟಿ ರೋಟೆರಿಯನ್ ಪಿ ವಿ ರೈ. ರೊಟೇರಿಯನ್ ಸುದರ್ಶನ್ ರೆಡ್ಡಿ, ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಡಾಕ್ಟರ್ ಬಿ ಸಂಜೀವ್ ರೈ ಹಾಗೂ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಅನುಸೂಯ ರೈ, ಶ್ರೀಮತಿ ಯಶೋಧ ಶೆಟ್ಟಿ ಮತ್ತು ಡಾ ಪ್ರಸ್ಸಿಲ್ಲ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಬೋರ್ಡ್ ಗಳ ಪ್ರಾಯೋಜಕತ್ವದಲ್ಲಿ ಮಹತ್ವದ ಕೊಡುಗೆ ನೀಡಿದ ರೊಟೇರಿಯನ್ ಪಿ. ವಿ. ರೈ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನುಸೂಯ ರೈ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪ್ರಸಿಲ್ಲ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು. ಶಾಲಾ ಸಂಚಾಲಕರಾದ ಡಾ. ಬಿ ಸಂಜೀವ್ ರೈ ಅಧ್ಯಕ್ಷೀಯ ಭಾಷಣ ಗೈದರು. ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಯಶೋಧ ಶೆಟ್ಟಿ ವಂದನಾರ್ಪಣೆ ಗೈದರು. ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು


















