ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶನೀಶ್ವರ ಪೂಜಾ ಮಹೋತ್ಸವ
ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶನೀಶ್ವರ ಪೂಜಾ ಮಹೋತ್ಸವವು ಶ್ರೀ ಸರಸ್ವತೀ ಯಾಗ ಶಾಲೆ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ನಡೆಯಲಿದೆ.
ಶ್ರೀಗಳವರ ಸಾನಿಧ್ಯದಲ್ಲಿ ಈ ಮೊದಲು ಅನೇಕ ಸಮಾಜಮುಖೀ ಕಾರ್ಯಗಳು ನಡೆದಿವೆ ಅಂತೆಯೇ ಡಿಸೆಂಬರ್ 18, 19 ಮತ್ತು 20 ನೇ ತಾರೀಖಿನ ವರೆಗೆ ಪ್ರತಿದಿನ ಸಂಜೆ 5:00 ರಿಂದ 7:30 ರವರೆಗೆ ನಡೆಯುವ ಕಾರ್ಯಕ್ರಮವು ಶನಿದೋಷ ನಿವಾರಣೆಗಾಗಿ ಮತ್ತು ಶನಿಯ ಸಂಪೂರ್ಣ ಅನುಗ್ರಹವನ್ನು ಪಡೆಯಲು ನಡೆಯುವ ಅತ್ಯಂತ ವಿಶೇಷ ಹಾಗೂ ಅಪೂರ್ವ ಕಾರ್ಯಕ್ರಮವಾಗಿದೆ. ಸಾಯಂಕಾಲದ ಆರಾಧನೆಯಲ್ಲಿ ಮೊದಲು ಶನಿದೇವರ ಮಹಾತ್ಯೆಯನ್ನು ತಿಳಿಸಿಕೊಡಲಾಗುತ್ತದೆ. ನಂತರ, ಭಕ್ತರ ಸಂಕಲ್ಪದೊಂದಿಗೆ ಸಾಮೂಹಿಕ ಶನಿಜಪ ನಡೆಯಲಿದೆ. ಬಳಿಕ ಶಾಸ್ತೋಕ್ತವಾಗಿ ಎಳ್ಳುಗಂಟು ದೀಪಾರಾಧನೆಯ ಮೂಲಕ ಶನಿಪೂಜೆಯನ್ನು ನೆರವೇರಿಸಲಾಗುತ್ತದೆ. ಕೊನೆಯಲ್ಲಿ, ಶನಿದೇವರ ಪ್ರಸಾದವನ್ನು ಶ್ರೀಗಳವರ ಅನುಗ್ರಹಪೂರ್ವಕ ಮಂತ್ರಾಕ್ಷೆಯೊಂದಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಸ್ತ ಭಕ್ತಾದಿಗಳು ಈ ಮಹೋನ್ನತ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶನಿದೇವರ, ಪೀಠಮಾತೆ ಸರಸ್ವತಿ ದೇವಿಯ ಆಶೀರ್ವಾದಕ್ಕೆ ಹಾಗೂ ಪರಮಪೂಜ್ಯ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು . ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಪಡುಕುತ್ಯಾರು ಹಾಗೂ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ) ಕಟಪಾಡಿ, ಪಡುಕುತ್ಯಾರು, ಅಂಚೆ ಕಳತ್ತೂರು ಇವರುಗಳು ವಿನಂತಿಸಿ ಕೊಂಡಿದ್ದಾರೆ


















